ನಂಜನಗೂಡು – ನಂಜನಗೂಡು ತಾಲ್ಲೂಕಿನ ಬೀರೇದೇವನಪುರ ಗ್ರಾಮದಲ್ಲಿ ಸಿ.ಸಿ ರಸ್ತೆ ಮತ್ತು ಚರಂಡಿ ಕಾಮಗಾರಿಗೆ 25 ಲಕ್ಷ ರೂ ವೆಚ್ಚದಲ್ಲಿ ಮತ್ತು ಈರೇಗೌಡನ ಹುಂಡಿ ಗ್ರಾಮದಲ್ಲಿ ಡಾ.ಬಿ.ಆರ್. ಅಂಬೇಡ್ಕರ್ ಭವನದ ಕಾಮಗಾರಿಗೆ 5 ಲಕ್ಷ ರೂ ವೆಚ್ಚದಲ್ಲಿನ ಕಾಮಗಾರಿಗೆ ಕ್ಷೇತ್ರದ ಯುವ ಶಾಸಕ ದರ್ಶನ್ ಧ್ರುವನಾರಾಯಣ್ ಗುದ್ದಲಿಪೂಜೆ ನೆರವೇರಿಸಿದರು.
ಈ ವೇಳೆ ವೆಂಕಟಾಚಲಪುರ ಗ್ರಾಮದಲ್ಲಿ ಡಾ. ಬಿ. ಆರ್ ಅಂಬೇಡ್ಕರ್ ಭವನದ ಮುಂದುವರೆದ ಕಾಮಗಾರಿಗೆ 5 ಲಕ್ಷ ರೂ ವೆಚ್ಚದಲ್ಲಿ ಅನುದಾನ ನೀಡಿ ವೀಕ್ಷಣೆ ಮಾಡಿದರು.
ಈ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ , ಹುಲ್ಲಹಳ್ಳಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀಕಂಠ ನಾಯಕ , ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಕೆ. ಮಾರುತಿ , ಮಾಜಿ ತಾ. ಪಂ ಅಧ್ಯಕ್ಷ ನಾಗೇಶ್ ರಾಜ್ , ನಾಗರಾಜ್ , ಸುರೇಶ್ , ಜೈ ರಾಮ್ , ಕಗ್ಗಲೀಹುಂಡಿ ಮಹದೇವು ರವರು, ಸಿದ್ದರಾಜು , ಜವರೇಗೌಡ , ಹರೀಶ್ ಕಡಜಟ್ಟಿ ಮಹೇಶ್ , ಮಣಿ , ಸತೀಶ್ , ವಿಠಲ್ , ಹಗಿನವಾಳು ಬಸವಣ್ಣ , ಚಿಲ್ಕಲ್ಲಿ ಪಟೇಲ್ ಸೇರಿದಂತೆ ಹಲವು ಮುಖಂಡರುಗಳು, ಕಾರ್ಯಕರ್ತರು ಗ್ರಾಮಸ್ಥರುಗಳು ಉಪಸ್ಥಿತರಿದ್ದರು.