‘ನಾರ್ವೆ ವಿವಿಧೋದ್ದೇಶ ಸಹಕಾರ ಸಂಘ’ದ ಆಶ್ರಯದಲ್ಲಿ ‘ಕಂಪಾನಿಯೋ’ ಸಂಸ್ಥೆಯ ವತಿಯಿಂದ ನಾಗರೀಕರಿಗೆ ಉಚಿತ ಫೂಟ್ ಥೆರಪಿ

ಕೊಪ್ಪ;ತಾಲ್ಲೂಕಿನ ನಾರ್ವೆಯಲ್ಲಿ ‘ನಾರ್ವೆ ವಿವಿಧೋದ್ದೇಶ ಸಹಕಾರ ಸಂಘ’ದ ಆಶ್ರಯದಲ್ಲಿ ‘ಕಂಪಾನಿಯೋ’ಎಂಬ ಸಂಸ್ಥೆ ಸಾರ್ವಜನಿಕರಿಗೆ ಉಚಿತ ಫೂಟ್ ಥೆರಪಿಯನ್ನು ನಡೆಸುತ್ತಿದೆ.

ಈ ಥೆರಪಿ ಮುಖ್ಯವಾಗಿ ಥೈರಾಯ್ಡ್, ನಿದ್ರಾಹೀನತೆ,ವೆರಿಕೋಸ್ ವೇಯ್ನ್,ಸ್ನಾಯು ಸೆಳೆತ,ಪಾರ್ಶ್ವವಾಯು,ಅಧಿಕ ರಕ್ತದೊತ್ತಡ ಹಾಗೂ ಸಕ್ಕರೆ ಕಾಯಿಲೆಗಳ ನಿವಾರಣೆಗೆ ಅನುಕೂಲವಾಗಿದೆ.ಯಾವುದೇ ಮಾತ್ರೆ ಇಂಜೆಕ್ಷನ್ ಆಪರೇಷನ್ ಇಲ್ಲದೆ ಜನರಿಗೆ ಚಿಕಿತ್ಸೆ ನೀಡಿ ಗುಣಮುಖ ಮಾಡುವ ಉದ್ದೇಶದಿಂದ ಈ ಥೆರಪಿ ಯೋಜನೆಯನ್ನು ಆಯೋಜಿಸಲಾಗಿದೆ ಎಂದು ನಾರ್ವೆ ವಿವಿಧೋದ್ದೇಶ ಸಹಕಾರ ಸಂಘ ದ ಅಧ್ಯಕ್ಷರಾದ ಪ್ರಸನ್ನ ಉಂಟುವಳ್ಳಿ ಪತ್ರಿಕೆಗೆ ತಿಳಿಸಿದರು.

ಸಂಘದ ಸಿ ಇ ಓ ಸುಮಿತ್ ಕುಮಾರ್ ಮಾತನಾಡಿ ಇಗ ನಾರ್ವೆಯಲ್ಲಿ 300ರಕ್ಕೂ ಅಧಿಕ ಜನ ಈ ಥೆರಪಿಯ ಉಪಯೋಗವನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.

ಇದು ರಕ್ತಸಂಚಾರ ಮತ್ತು ನಿದ್ರಾಹೀನತೆ ಗೆ ಉತ್ತಮ ಚಿಕಿತ್ಸೆ ಆಗಿದೆ ಇದರ ಪ್ರಯೋಜನವನ್ನು ಜನತೆ ಪಡೆದುಕೊಳ್ಳಬೇಕು ಎಂದು ಥೆರಪಿ ಚಿಕಿತ್ಸೆ ಪಡೆಯುತ್ತಿರುವ ಅನ್ನಪೂರ್ಣ ದಿನೇಶ್ ರವರು ಅಭಿಪ್ರಾಯ ಹಂಚಿಕೊಂಡರು.

ಈ ಥೆರಪಿ ಕಾರ್ಯಾಗಾರವನ್ನು ಕಂಪಾನಿಯೋ ಸಂಸ್ಥೆಯ ನರೇಂದ್ರ ಕುಂದಾಪುರ ಹಾಗೂ ಭರತ್ ಕುಂದರ್ ಬಾರಕೂರು ನಡೆಸಿಕೊಡುತ್ತಿದ್ದಾರೆ.

ನಾರ್ವೆ ವಿವಿಧೋದ್ದೇಶ ಸಹಕಾರ ಸಂಘದ ಉಪಾಧ್ಯಕ್ಷ ರಶೀದ್ ನಾರ್ವೆ,ಗ್ರಾಮಸ್ಥರುಗಳಾದ ಚಂದ್ರಶೇಖರ್, ಕೀರುನಾರ್ವೆ,ವಾಸಪ್ಪ ಕುಂಚೂರ್ ಹಾಗೂ ಸಂಘದ ನಿರ್ದೇಶಕರುಗಳು ನಾವುಗಳು ಸಹ ಥೆರಪಿಯನ್ನು ಪಡೆದುಕೊಳ್ಳುತ್ತಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಜನ ಭಾಗವಹಿಸಿ ಚಿಕೆತ್ಸೆ ಪಡೆದುಕೊಳ್ಳುವಂತೆ ಮನವಿ ಮಾಡಿಕೊಂಡರು.

ವರದಿ :ಹರೀಶ್ ನಾರ್ವೆ

Leave a Reply

Your email address will not be published. Required fields are marked *

× How can I help you?