ಎಚ್. ಡಿ. ಕೋಟೆ- ಸೋನಳ್ಳಿ-ಸರ್ಕಾರಿ-ಶಾಲೆಯಲ್ಲಿ-ರಾಷ್ಟ್ರೀಯ- ವಿಜ್ಞಾನ-ದಿನಾಚರಣೆ

ಎಚ್. ಡಿ. ಕೋಟೆ- ಎಚ್.ಡಿ. ಕೋಟೆ ತಾಲೋಕಿನ ಚಕ್ಕೊಡನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಸೋನಳ್ಳಿ ಸರ್ಕಾರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಮತ್ತು ವಿಜ್ಞಾನದ ವಿವಿಧ ಪ್ರಯೋಗಗಳನ್ನು ಮಾಡಲಾಯಿತು.

ಈ ಕಾರ್ಯಕ್ರಮ ಉದ್ಘಾಟಿಸಿದ ಇಸಿಒ ಜೈರಾಮ್ ಮಾತಾನಾಡಿ ನಮ್ಮ ಸರ್ಕಾರಿ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಪ್ರತಿಭೆಗಳನ್ನು ಗುರುತಿಸಿ ಅವರಲ್ಲಿ ಮೌಡ್ಯ ಮತ್ತು ಅಂದಕಾರ ಮನೋಭಾವನೆಯನ್ನು ಅಳಿಸಿ ಸಂವಿಧಾನ ವಿಧಿ 51A (h) ಪ್ರಕಾರ ಮಕ್ಕಳಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆಯನ್ನು ಬೆಳೆಸುವ ನಿಟ್ಟಿನಲ್ಲಿ ನಮ್ಮ ಶಿಕ್ಷಕರು ಪ್ರತಿ ಶಾಲೆಯಲ್ಲಿ ವಿಜ್ಞಾನದ ಹೊಸ ಹೊಸ ಪ್ರಯೋಗಗಳನ್ನು ಮಾಡಿಸಿ ಅವರಲ್ಲಿ ಆಧುನಿಕತೆಯ ಹೊಸ ಆವಿಷ್ಕಾರಗಳನ್ನು ಮಾಡಿಸುವ ಪ್ರಯತ್ನ ಮಾಡಿಸಲಾಗುತ್ತಿದೆ. ಇದರಿಂದ ಮಕ್ಕಳಲ್ಲಿ ಪ್ರಾರಂಭದಲ್ಲಿಯೇ ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿಸಿ ಮಕ್ಕಳಲ್ಲಿ ಮೌಡ್ಯ ಮತ್ತು ಅಂದಕಾರವನ್ನು ಅಳಿಸಿ ಹಾಕುವ ಕೆಲಸ ಮಾಡಲಾಗುತ್ತಿದೆ ಎಂದರು.

ಇದೆ ವೇಳೆ ಮಕ್ಕಳೆ ತಯಾರಿಸಿದ ರಾಕೇಟ್ ಉಡಾವಣೆ, ವಿದ್ಯುತ್ ವಾಹಕ, ಗಾಳಿಯಂತ್ರ, ಜಲಮೂಲಗಳ ಸಂರಚನೆ, ಹನಿನೀರಾವರಿ, ಸೌರಮಂಡಲ, ಸೌರಶಕ್ತಿ ಉಪಯೋಗ, ಜಲಮಾಲಿನ್ಯ, ರಸ್ತೆ ಸಂಚಾರ, ಮಾನವನ ಅಂಗಾಂಗ ರಚನೆ, ಕೃಷಿ ಚಟುವಟಿಕೆಗಳಂತ ಹಲವು ವೈವಿಧ್ಯಮಯ ಮಾದರಿಗಳನ್ನ ಮಾಡಿ ನೆರೆದಿದ್ದ ಪೋಷಕರಿಗೆ ಮತ್ತು ಸಾರ್ವಜನಿಕರಿಗೆ ವಿವರಣೆ ನೀಡುವ ಮೂಲಕ ತಮ್ಮಲ್ಲಿರುವ ಸುಪ್ತ ಪ್ರತಿಭೆಗಳನ್ನು ಅನಾವರಣ ಮಾಡಿದರು.


ಈ ವಿಜ್ಞಾನ ಪ್ರಯೋಗಕ್ಕೆ ಬೇಕಾದ ಅಗತ್ಯ ಸಲಕರಣೆ ಮತ್ತು ಮಾರ್ಗದರ್ಶವನ್ನ ಮುಖ್ಯೋಪಾಧ್ಯಾಯ ಚೆನ್ನನಾಯ್ಕ, ರೇಷ್ಮಾ ವಸಂತ, ಸೋನಿ ರವರು ನೀಡಿ ಮಕ್ಕಳಲ್ಲಿ ವಿಶೇಷ ಆಸಕ್ತಿ ಮೂಡಿಸಿದರು.

ಕಾರ್ಯಕ್ರಮದಲ್ಲಿ ಇಸಿಒ ಜೈರಾಮ್, ನಂಜರಾಜ್, ಸಿಆರ್ಪಿ ದೀಪಾ, ಶಿಕ್ಷಕರಾದ ಮಂಜುನಾಥ್, ರಾಮಚಂದ್ರ, ಶೇಖರ್, ರೂಪ, ವಿಲ್ಮಾ, ಚೆನ್ನಾಯ್ಕ, ಬಸವರಾಜ್, ಅಂಕಯ್ಯ, ಸಂತೋಷ, ಪ್ರಸನ್ನ, ಸಿದ್ದರಾಜು. ಶಾಲಾ ಕಮಿಟಿಯ ಮಂಜುನಾಥ್, ಪುಟ್ಟೆಗೌಡ, ಶಂಕರ್ ಮತ್ತಿತರರು ಇದ್ದರು.

-ಶಿವು ಕೋಟೆ

Leave a Reply

Your email address will not be published. Required fields are marked *

× How can I help you?