ಕೆಆರ್ ಪೇಟೆ, ಮೇ 9 — ತಾಲ್ಲೂಕಿನ ಬೂಕನಕೆರೆ ಗ್ರಾಮದಲ್ಲಿರುವ ಕುರುಬರ ಬಸ್ತಿಯ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ ನೂತನ ಆಡಳಿತ ಮಂಡಳಿಯ ನಿರ್ದೇಶಕರ ಸ್ಥಾನಕ್ಕೆ ಮಾರ್ಚ್ 21, 2025ರಂದು ನಡೆದ ಚುನಾವಣೆಯ ಅಂತಿಮ ಫಲಿತಾಂಶ ಇದೀಗ ಘೋಷಿತವಾಗಿದೆ.
ಈ ಹಿಂದೆ ಚುನಾವಣಾ ಫಲಿತಾಂಶದ ವಿರುದ್ಧ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದ್ದು, ಬೆಂಗಳೂರು ಹೈಕೋರ್ಟ್ ಆದೇಶದ ಮೇರೆಗೆ ಫಲಿತಾಂಶ ಪ್ರಕಟಿಸುವ ಕಾರ್ಯ ತಾತ್ಕಾಲಿಕವಾಗಿ ತಡೆಗೊಳ್ಳಲಾಗಿತ್ತು. ಸುಮಾರು ಒಂದೂವರೆ ತಿಂಗಳ ಬಳಿಕ, ನ್ಯಾಯಾಲಯದ ತೀರ್ಪಿನ ಅನುಸಾರ ರಿಟ್ ಅರ್ಜಿದಾರರ ಮತಗಳನ್ನು ಪರಿಗಣಿಸುವಂತೆ ನಿರ್ದೇಶನ ನೀಡಿದ್ದು, ಅದರಂತೆ ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಗಿದೆ.
ಕರ್ನಾಟಕ ಸಹಕಾರ ಸಂಘಗಳ ನಿಯಮಾವಳಿ 1960ರ 14ಜಿ (2) ನಿಯಮದಡಿಯಲ್ಲಿ ರಿಟರ್ನಿಂಗ್ ಅಧಿಕಾರಿಯಾಗಿದ್ದ ಹೆಚ್. ಎಸ್. ಮುಕ್ತ ಅವರು ಆಯ್ಕೆಯಾದ ಅಭ್ಯರ್ಥಿಗಳ ಅಂತಿಮ ಪಟ್ಟಿಯನ್ನು ಪ್ರಕಟಿಸಿದರು.

ಆಯ್ಕೆಯಾದ ನಿರ್ದೇಶಕರು:
- ಪ್ರಮೀಳಾ ಕುಮಾರ್
- ಭಾನುಮತಿ ಭೋಜೇಗೌಡ
- ಶೃತಿ ಕೃಷ್ಣೇಗೌಡ
- ಭಾಗ್ಯಮ್ಮ ಮಾದೇಗೌಡ
- ನಾಗಮ್ಮ ರಾಮಕೃಷ್ಣೇಗೌಡ
- ಸಾವಿತ್ರಮ್ಮ ನಾಗರಾಜು
- ಸುಜಾತಾ ರಾಜೇಗೌಡ
- ಸವಿತಾ ಲೋಕೇಶ್
- ನಾಗಮಣಿ ನಟರಾಜು
ಈ ನವ ನಿರ್ದೇಶಕರನ್ನು ಗ್ರಾಮಸ್ಥರು ಹಾರೈಸಿ ಸನ್ಮಾನಿಸಿ ಗೌರವಿಸಿದರು.
– ಶ್ರೀನಿವಾಸ್ ಆರ್.