ಹಾಸನ:ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷ ಮಾ.ಹನುಮಂತೇಗೌಡ ಅವರಿಗೆ ನಗರದ ಕಸಾಪ ಆವರಣದಲ್ಲಿ ಸೋಮವಾರ ಅಂತಿಮ ನಮನ ಸಲ್ಲಿಸಲಾಯಿತು.
ಕಸಾಪ ಪದಾಧಿಕಾರಿಗಳು, ಕನ್ನಡಪರ ಸಂಘಟನೆ ಕಾರ್ಯಕರ್ತರು ಹಾಗೂ ನಾಗರಿಕರು ಪಾರ್ಥಿವ ಶರೀರರಕ್ಕೆ ಗೌರವ ಸಲ್ಲಿಸಿ ಎರಡು ನಿಮಿಷ ಮೌನ ಆಚರಿಸಿದರು.
ಈ ವೇಳೆ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಹೆಚ್.ಎಲ್. ಮಲ್ಲೇಶಗೌಡ, ಕಸಾಪ ಭವನಕ್ಕೆ ನಿವೇಶನ ಮಂಜೂರು ಮಾಡಿಸುವಲ್ಲಿ ಹನುಮಂತೇಗೌಡ ಅವರ ಪಾತ್ರ ಮುಖ್ಯವಾಗಿದೆ ಎಂದರು. ಗೌಡರು ಪರಿಷತ್ತಿನಲ್ಲಿ 1989-1995ರ ವರೆಗೆ ಅಧ್ಯಕ್ಷರಾಗಿ ಸಾಹಿತ್ಯ ಸೇವೆ ಸಲ್ಲಿಸಿದ್ದಾರೆ.ಹೆಚ್.ಬಿ.ಜ್ವಾಲನಯ್ಯ ಅವರ ಅಧ್ಯಕ್ಷತೆಯಲ್ಲಿ ಗೌರವ ಕಾರ್ಯದರ್ಶಿಗಳಾಗಿ ಪರಿಷತ್ತಿಗೆ ನಗರದ ಹೃದಯ ಭಾಗದಲ್ಲಿ ನಿವೇಶನ ಮಂಜೂರಾತಿಯಲ್ಲಿ ಮುoಚೂಣಿ ಯಲ್ಲಿ ನಿಂತು ಭವನ ನಿರ್ಮಾಣಕ್ಕೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.
ಕನ್ನಡ ಭಾಷೆ ಬೆಳವಣಿಗೆಗೆ ಸಂಘಟನೆ ಮುಖ್ಯವೆoದು ಹನುಮಂತೇಗೌಡರು ಪ್ರತಿಪಾದಿ ಸುತ್ತಿದ್ದರು. ಜಿಲ್ಲೆಯಲ್ಲಿ ಸಾಹಿತ್ಯ ಪರಿಷತ್ತು ಸಕ್ರಿಯವಾಗುವಂತೆ ಕ್ರಿಯಾಶೀಲರಾಗಿ ಕೆಲಸ ಮಾಡುತ್ತಿದ್ದರು. ಅವರ ಬದುಕು ನಮಗೆಲ್ಲರಿಗೂ ಸ್ಫೂರ್ತಿ ಎಂದು ಸ್ಮರಿಸಿದರು.
ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ ಮಾತನಾಡಿ,ಪರಿಷತ್ತಿಗೆ ಹನುಮಂತೇಗೌಡರ ಸೇವೆ ಸ್ಮರಿಸಿದರಲ್ಲದೆ ಅವರು ಶಿಕ್ಷಕರಾಗಿ, ಪರಿಷತ್ತಿನ ಅಧ್ಯಕ್ಷರಾಗಿ ಮಾಡಿದ ಸೇವೆ ನಮ್ಮೆಲ್ಲರಿಗೂ ಪ್ರೇರಣೆ ಎಂದರು.
ಕಸಾಪ ನಿಕಟಪೂರ್ವ ಗೌರವಾಧ್ಯಕ್ಷ ರವಿನಾಕಲಗೂಡು ಮಾತನಾಡಿ, ಕನ್ನಡ ಸಾಹಿತ್ಯ ಪರಿಷತ್ತಿಗೆ ಮಾ.ಹನುಮಂತೇಗೌಡರು ದೊಡ್ಡ ಅಸ್ತಿಯಾಗಿದ್ದರು. ಇವರ ಅವಧಿಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ ಈ ನಿವೇಶನ ದೊರೆಯುವಂತಾಯಿತು ಎಂದರು.
ಸಾಹಿತಿ ಚಂದ್ರಕಾoತ ಪಡೆಸೂರ, ಕಸಾಪ ನಿಕಟಪೂರ್ವ ಜಿಲ್ಲಾಧ್ಯಕ್ಷ ಡಾ.ನಾಯಕರಹಳ್ಳಿ ಮಂಜೇಗೌಡ ಮೊದಲಾದವರು ಮಾತನಾಡಿದರು.
ಈ ಸಂದರ್ಭದಲ್ಲಿ ಜಾನಪದ ಕಲಾವಿದ ಗ್ಯಾರಂಟಿ ರಾಮಣ್ಣ, ಮಾವಿನಹಳ್ಳಿ ವಾಸು, ಹೆತ್ತೂರು ನಾಗರಾಜು,ಬೋಮ್ಮೇಗೌಡ, ಜಾವಗಲ್ ಪ್ರಸನ್ನ ಕುಮಾರ,ಕಟ್ಟಾಯ ಶಿವಕುಮಾರ್, ಹೆಚ್.ಎಂ. ಶಿವಣ್ಣ, ಎನ್.ಎಲ್,ಚನ್ನೇಗೌಡ, ತೌಫಿಕ್ ಅಹ್ಮದ್, ಕತ್ತಿಮಲ್ಲೇನಹಳ್ಳಿ ಪರಮೇಶ್, ಜಿಲ್ಲಾ ವಚನ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಚೈತ್ರ ನಾಯಕರಹಳ್ಳಿ ಮುಂತಾದವರು ಸಂತಾಪ ಸೂಚಿಸಿದರು.
ಈ ವೇಳೆ ಸ್ವಾತಂತ್ರ÷್ಯ ಹೋರಾಟಗಾರ ಹೆಚ್.ಎಂ.ಶಿವಣ್ಣ,ಜಿಲ್ಲಾ ಸರ್ಕಾರಿ ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ ಅನಂತರಾಮು, ಮರ್ಕುಲಿ ಗೌಡಪ್ಪ,ಬೋರೇಗೌಡ, ತಾರಾ ಜ.ಹೊ. ನಾರಾಯಣಸ್ವಾಮಿ, ಸಾಹಿತಿ ಎನ್.ಎಲ್.ಚನ್ನೇಗೌಡ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್
ಗೌರವ ಕಾರ್ಯದರ್ಶಿಗಳಾದ ಜಾವಗಲ್ ಪ್ರಸನ್ನ,ಬಿ.ಆರ್.ಬೊಮ್ಮೇಗೌಡ, ಕೋಶಾಧ್ಯಕ್ಷ ಬಿ.ಎನ್.ಜಯರಾಮು, ಕಸಾಪ ರಾಜ್ಯ ಸಮಿತಿಯ ಹೆತ್ತೂರು ನಾಗರಾಜ್, ತಾಲ್ಲೂಕು ಅಧ್ಯಕ್ಷ ಮಮತೇಶ್,ಸಂಘಟನಾ ಕಾರ್ಯದರ್ಶಿಗಳಾದ ಆರ್.ಬಿ.ಶಂಕರ್,ಹೆಚ್.ಬಿ.ಚoದ್ರಶೇಖರ್, ಬಿ.ಟಿ ಮಾನವ ಕಸಾಪ ಪದಾಧಿಕಾರಿಗಳು ಇದ್ದರು.