ಬೇಲೂರು-ದುಡಿಯುವ ಕೈಗಳಿಗೆ ಕೆಲಸ,ನಿರ್ಗತಿಕರಿಗೆ ಸಹಾಯಹಸ್ತ ನೀಡುವ ಬದಲು ಸರ್ಕಾರ ಉಳ್ಳವರಿಗೆ ಗ್ಯಾರೆಂಟಿ ಯೋಜನೆ ನೀಡಿದ ಫಲದಿಂದಲೇ ಇಂದು ಪ್ರಗತಿ ಕುಂಠಿತವಾಗಿದೆ ಈ ಬೆಳವಣಿಗೆ ಸದೃಢ ಸಮಾಜಕ್ಕೆ ಮಾರಕವಾಗಿದೆ ಎಂದು ಬೇಲೂರು ಕ್ಷೇತ್ರದ ಮಾಜಿ ಶಾಸಕ ಕೆ.ಎಸ್.ಲಿಂಗೇಶ್ ಹೇಳಿದರು.
ತಾಲ್ಲೂಕಿನ ಮಾದಿಹಳ್ಳಿ ಹೋಬಳಿ ವ್ಯಾಪ್ತಿಯ ಚಿಲ್ಕೂರು ಗ್ರಾಮದಲ್ಲಿ ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ವತಿಯಿಂದ ನಡೆದ ರಾಷ್ಟ್ರೀಯ ಸೇವಾ ಯೋಜನಾ ಉದ್ಘಾಟನೆ ಶಿಬಿರದಲ್ಲಿ ಮಾತನಾಡಿದ ಅವರು, ದೇಶಕ್ಕೆ ಸ್ವಾತಂತ್ರ್ಯ ನೀಡಿದ ಮಹಾತ್ಮ ಗಾಂಧಿ ರಾಮರಾಜ್ಯ ಪರಿಕಲ್ಪನೆ ಕಂಡಿದ್ದಾರೆ. ಆದರೆ ರಾಮರಾಜ್ಯ ಇನ್ನೂ ಸಾಕಾರವಾಗಿಲ್ಲ ಎಂದ ಅವರು ಹಳ್ಳಿ ಹಳ್ಳಿಗಳಲ್ಲಿ ಇನ್ನೂ ಬಡತನ ಮತ್ತು ಶೋಷಣೆ ನಡೆಯುತ್ತಿದೆ. ಎಲ್ಲಿಯತನಕ ಬಡತನ ಮತ್ತು ನಿರುದ್ಯೋಗಕ್ಕೆ ಶಾಶ್ವತ ಪರಿಹಾರ ನೀಡಲಾಗುವುದಿಲ್ಲವೋ ಅಲ್ಲಿಯವರೆಗೆ ರಾಮರಾಜ್ಯ ಕಲ್ಪನೆ ಕನಸು ಕನಸಾಗಿ ಉಳಿಯುತ್ತದೆ ಎಂದರು.
ಮಕ್ಕಳಿಗೆ ಏಕರೂಪ ಶಿಕ್ಷಣ ನೀಡಬೇಕಿದೆ.ಕಾರಣ ಭವ್ಯ ಭಾರತದ ಪ್ರಜೆಗಳಿಗೆ ಶಿಕ್ಷಣದ ಜೋತೆಗೆ ಸಂಸ್ಕಾರ ನೀಡಬೇಕಿದೆ.ಬೇಲೂರು ಜೂನಿಯರ್ ಕಾಲೇಜಿನ ಸಮಗ್ರ ಅಭಿವೃದ್ಧಿ ನಾನು ಶಾಸಕರಾದ ಸಂದರ್ಭದಲ್ಲಿ ಹೆಚ್ಚು ಅನುದಾನ ನೀಡಿದ ಬಗ್ಗೆ ತಿಳಿಸಿದರು.
ಬೇಲೂರು ತಹಸೀಲ್ದಾರ್ ಎಂ.ಮಮತ ಮಾತನಾಡಿ,ಸಾಧನೆ ಎಂಬುದು ಸಾಧಕನ ಸ್ವತ್ತು ವಿನಃ ಸೋಮಾರಿಯ ಸ್ವತ್ತಲ್ಲ ಎಂಬ ಮಾತು ಸದಾ ವಾಸ್ತವ ಹಾಗೂ ಸಾರ್ವಕಾಲಿಕ ಸತ್ಯವಾದ ಮಾತು. ಈ ಪ್ರಪಂಚದಲ್ಲಿ ಸಾಧಕನಿಗೆ ತುಂಬಾ ಗೌರವ ಹಾಗೂ ಬೆಲೆ ಇದೆ. ಹೀಗಾಗಿ ನಾವು ಈ ಸ್ಪರ್ಧಾತ್ಮಕ ಯುಗದಲ್ಲಿ ಗೆಲ್ಲಬೇಕಾದರೆ ತುಂಬಾ ಶ್ರಮಿಸಬೇಕು. ನಮ್ಮ ಬದುಕಿನಲ್ಲಿ ನಿರ್ದಿಷ್ಟ ಗುರಿಯಿಟ್ಟುಕೊಂಡು ಆ ಗುರಿ ಸಾಧನೆಗೆ ಯೋಜನಾ ಬದ್ಧವಾಗಿ ನಿರಂತರವಾಗಿ ಪ್ರಯತ್ನ ಮಾಡಬೇಕು.ವಿಶೇಷವಾಗಿ ರಾಷ್ಟ್ರೀಯ ಸೇವಾ ಯೋಜನೆ ವಿದ್ಯಾರ್ಥಿಗಳ ಪಾಲಿನ ಪ್ರಮುಖ ಘಟ್ಟವಾಗಿದೆ. ಕಾರಣ ಗ್ರಾಮೀಣ ಪ್ರದೇಶದ ನೈಜ ಸಮಸ್ಯೆಗಳನ್ನು ಖುದ್ದು ತಿಳಿಯಬಹುದು ಮತ್ತು ಹಾಗೆಯೆ ಗ್ರಾಮೀಣರ ಬದುಕು ಬರಹಗಳು ಕೂಡ ವಿದ್ಯಾರ್ಥಿಗಳಿವೆ ಉಪಯುಕ್ತವಾಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಬೇಲೂರು ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರಾಂಶುಪಾಲರಾದ ಹರೀಶ್,
ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹಾಗೂ ಪತ್ರಕರ್ತರಾದ ಹೆಬ್ಬಾಳು ಹಾಲಪ್ಪ,ಇಬ್ಬಿಡು ಗ್ರಾಮ ಪಂಚಾಯತಿ ಸದಸ್ಯ ಸಚಿನ್, ಹಾಲಿನ ಡೈರಿ ಅಧ್ಯಕ್ಷೆ ನಳಿನಾ ಲೋಕೇಶ್, ಗ್ರಾಮಸ್ಥರಾದ ಕಲ್ಲೇಶ್, ನಿಂಗೇಗೌಡ, ಮೊಗಣ್ಣಗೌಡ, ರೇಣು, ಚೇತು, ಉಪನ್ಯಾಸಕರಾದ ಲಕ್ಷ್ಮೀನಾರಾಯಣ, ಸರ್ವಮಂಗಳ,ವೇದಾವತಿ,ಮೋಹನ್ ಸೇರಿದಂತೆ ಇನ್ನೂ ಮುಂತಾದವರು ಹಾಜರಿದ್ದರು.
ಕಾಲೇಜಿನ ಹಳೆಯ ವಿದ್ಯಾರ್ಥಿ ಸುನೀಲ್ ದೊಡ್ಡಿಹಳ್ಳಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ನೀಡಿದರು.
——--ಯುನೈಟೆಡ್ ರವಿಕುಮಾರ್