ಮೂಡಿಗೆರೆ:ಸರಕಾರಿ ಶಾಲೆಗಳಿಗೆ ಸಂಘಸoಸ್ಥೆಗಳು ಪ್ರೋತ್ಸಾಹ ನೀಡಬೇಕು-ಅನುಸೂಯ

ಮೂಡಿಗೆರೆ:ಸಾಮಾನ್ಯವಾಗಿ ಬಡವರ ಮಕ್ಕಳೇ ಹೆಚ್ಚಾಗಿ ಸರ್ಕಾರಿ ಶಾಲೆಯಲ್ಲಿ ವಿಧ್ಯಾಭ್ಯಾಸ ಮಾಡುವ ರೂಡಿಯಿದ್ದು ಅವರಿಗೆ ಸಂಘಸoಸ್ಥೆಗಳು ಶೈಕ್ಷಣಿಕವಾಗಿ ಪ್ರೋತ್ಸಾಹ ನೀಡಿದಲ್ಲಿ ಸರ್ಕಾರಿ ಶಾಲೆಯ ಬಡ ವಿಧ್ಯಾರ್ಥಿಗಳು ಕೂಡಾ ಕಲಿಕೆಯಲ್ಲಿ ಉತ್ತಮ ಸ್ಥಾನ ಪಡೆಯಲು ಸಹಕಾರಿಯಾಗಲಿದೆ ಎಂದು ಬಾಲಕಿಯರ ಸರ್ಕಾರಿ ಪ್ರೌಡಶಾಲೆ ಮುಖ್ಯ ಶಿಕ್ಷಕಿ ಅನುಸೂಯ ಅಭಿಪ್ರಾಯಪಟ್ಟರು.

ಅವರು ಶನಿವಾರ ಪಟ್ಟಣದ ಬಾಲಕಿಯರ ಪ್ರೌಡಶಾಲೆಯ 9 ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಜೆಸಿಐ ನಿಂದ ನೀಡಿದ ಪ್ರೋತ್ಸಾಹಧನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಆರ್ಥಿಕವಾಗಿ ಹಿಂದುಳಿದ ವಿಧ್ಯಾರ್ಥಿಗಳಿಗೆ ಶೈಕ್ಷಣಿಕ ಸಾಮಗ್ರಿಗಳನ್ನು ಖರೀದಿಸಲು ಬಹಳ ಕಷ್ಟವಾಗುತ್ತದೆ.ಸರ್ಕಾರಿ ಶಾಲೆಯಲ್ಲಿ ನೀಡುವ ಮಧ್ಯಾಹ್ನದ ಬಿಸಿಯೂಟ,ಸಮವಸ್ತ್ರ ಸೇರಿದಂತೆ ಅನೇಕ ರೀತಿಯ ಸವಲತ್ತು ನೀಡುತ್ತಿದ್ದರೂ ಇನ್ನಷ್ಟು ಅಗತ್ಯ ವಸ್ತುಗಳು ಬೇಕಾಗಿರುವ ಕಾರಣ ಅವೆಲದ್ಲವನ್ನೂ ಹೊಂದಿಸಿಕೊಳ್ಳಲು ಬಡಮಕ್ಕಳು ತಮ್ಮ ಪೋಷಕರನ್ನು ಅವಲಂಭಿಸಬೇಕಾ ಗುತ್ತದೆ.ಕೂಲಿ ಕೆಲಸ ಮಾಡುವ ಪೋಷಕರಿಗೆ ತಮ್ಮ ಮಕ್ಕಳಿಗೆ ಬೇಕಾಗಿರುವ ಎಲ್ಲವನ್ನೂ ಕೊಡಿಸಲು ಸಾಧ್ಯವಾಗದೆ ಸಂಕಷ್ಟ ಎದುರಿಸಬೇಕಾಗುತ್ತದೆ.

ಹೀಗಾದಾಗ ಸಂಘಸoಸ್ಥೆಗಳು ಮತ್ತು ದಾನಿಗಳು ಬಡವರ್ಗದ ಕುಟುಂಬದ ಮಕ್ಕಳನ್ನು ಗುರುತಿಸಿ ಅವರಿಗೆ ಶೈಕ್ಷಣಿಕವಾಗಿ ನೆರವಾದಲ್ಲಿ ಮಕ್ಕಳ ಕಲಿಕೆಗೆ ಮತ್ತಷ್ಟು ಸಹಾಯವಾಗಿ ಅವರು ಉತ್ತಮ ಪ್ರಗತಿಯನ್ನು ಸಾಧ್ಯವಾಗುತ್ತದೆ ಎಂದು ತಿಳಿಸಿದರು.

ಜೆಸಿಐ ಅಧ್ಯಕ್ಷ ಸುಪ್ರೀತ್ ಕಾರ್‌ಬೈಲ್ ಮಾತನಾಡಿ ಪ್ರತಿವರ್ಷವೂ ಜೆಸಿಐ ಸಂಸ್ಥೆಯಿoದ ವಿಧ್ಯಾರ್ಥಿಗಳಿಗೆ ವಿವಿಧ ರೀತಿಯ ಸವಲತ್ತುಗಳನ್ನು ಒದಗಿಸುತ್ತಿದ್ದೇವೆ.ಬಡವರ್ಗದ
ವಿಧ್ಯಾರ್ಥಿಗಳನ್ನು ಗುರುತಿಸಿ ಅಂತಹ ವಿಧ್ಯಾರ್ಥಿಗಳಿಗೆ ಬಹುತೇಕ ಶೈಕ್ಷಣಿಕ ಪರಿಕರಗಳನ್ನು ಜೆಸಿಐ ಸಂಸ್ಥೆ ಒದಗಿಸುತ್ತಿದೆ.

ಅಲ್ಲದೆ ಆರೋಗ್ಯ ಕ್ಷೇತ್ರಕ್ಕೂ ಹೆಚ್ಚಿನ ಸಹಾಯ ನೀಡುತ್ತದೆ.ಜೆಸಿಐ ಸಂಸ್ಥೆ ವರ್ಷಪೂರ್ತಿ ಒಂದಿಲ್ಲೊoದು ರೀತಿಯಲ್ಲಿ ಸಾರ್ವಜನಿಕ ಸೇವೆಯಲ್ಲಿ ತನ್ನನ್ನು ತೊಡಗಿಸಿಕೊಳ್ಳಲಾಗುತ್ತದೆ. ಇಂತಹ ಪುಣ್ಯಕೆಲಸ ನಿರ್ವಹಿಸಲು ನಮಗೆ ಬಂದಿರುವ ಅವಕಾಶವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಶಸ್ವಿಗೊಳಿಸುವ ಕೆಲಸ ಮಾಡುತ್ತಿರುವುದಾಗಿ ತಿಳಿಸಿದರು.

ಕಾರ್ಯಕ್ರಮದಲ್ಲಿ ಎಂ.ಡಿ.ವಿಜಯಕುಮಾರ್, ಸುಧೀಪ್,ವಿಶ್ವಕುಮಾರ್, ಪ್ರದೀಪ್, ಜೆಸಿಐ ಯುವ ಮಾಣಿಕ್ಯದ ಅಧ್ಯಕ್ಷರಾದ ಮೊಹಮ್ಮದ್, ಶಿಕ್ಷಕಿ ಸುನೀತ ಇತರರಿದ್ದರು.

——————-ವಿಜಯ್ ಕುಮಾರ್ ಟಿ

Leave a Reply

Your email address will not be published. Required fields are marked *

× How can I help you?