ಮೂಡಿಗೆರೆ;ಸಂಭ್ರಮದಿಂದ ಓಣಂ ಆಚರಣೆ-ಜಾತಿ-ಧರ್ಮ ಭೇದವಿಲ್ಲದೆ ಆಚರಿಸುವ ದೇಶದ ಏಕೈಕ ಹಬ್ಬ

ಮೂಡಿಗೆರೆ: ಓಣಂ ಹಬ್ಬ ಎಲ್ಲ ಮಲೆಯಾಳಿಗಳು ಆಚರಿಸುವ ನಾಡಹಬ್ಬ.ಈ ಹಬ್ಬವನ್ನು ಪ್ರತಿವರ್ಷ ಸಾಮಾನ್ಯವಾಗಿ ಆಗಸ್ಟ್- ಸಪ್ಟೆಂಬರ್ ತಿಂಗಳಿನಲ್ಲಿ ಆಚರಿಸಲಾಗುತ್ತದೆ.ಓಣಂ ಹಬ್ಬವು ಭಾದ್ರಪದದಲ್ಲಿ ಬರುವ ಅತ್ತಂ (ಹಸ್ತ) ನಕ್ಷತ್ರದಿಂದ ಪ್ರಾರoಭಗೊoಡು ಅಂದಿನಿoದ ಹತ್ತು ದಿನಗಳವರೆಗೆ ವಿವಿದ ರೀತಿಯಲ್ಲಿ ಆಚರಿಸಿ ಹತ್ತನೇ ದಿನದ ಶ್ರವಣ ನಕ್ಷತ್ರದಂದು ಬರುವ ಓಣಂ ಅಥವಾ ತಿರುವೋಣಂ ನ್ನು ಬಹಳ ಸಂಬ್ರಮ ಸಡಗರದಿಂದ ಕೇರಳಿಗರು ಜಾತಿ ಧರ್ಮ ಭೇಧವಿಲ್ಲದೆ ಆಚರಿಸುತ್ತಾರೆ.

ಮೂಡಿಗೆರೆ ಪಟ್ಟಣ, ಛತ್ರಮೈದಾನ, ಬಿಳಗುಳ, ಕುನ್ನಹಳ್ಳಿ,ಜನ್ನಾಪುರ,ಗೋಣಿಬೀಡು, ಬಣಕಲ್,ಜಾವಳಿ ಮತ್ತಿತರೆಡೆ
ವಾಸವಿರುವ ಮಲೆಯಾಳಿಗಳು ಭಾನುವಾರ ಓಣಂ ಹಬ್ಬವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.ಓಣಂ ಹಬ್ಬದಂದು ಮನೆ ಮಂದಿಯೆಲ್ಲಾ ಪ್ರಾಥ:ಕಾಲದಲ್ಲೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ಧರಿಸಿ ಮನೆಯಮುಂದೆ ವಿವಿಧ ಬಣ್ಣಗಳ ಹೂಗಳಿಂದ ಪೂಕ್ಕಳಂ (ಮನೆಯ ಮುಂದೆ ಹೂವಿನಿಂದ ರoಗೋಲಿ ಅಲಂಕಾರ) ಬಿಡಿಸಿ ಅಲಂಕರಿಸುತ್ತಾರೆ.

ನಂತರ ಬಗೆಬಗೆಯ ರೀತಿಯ ಅಡಿಗೆ ಮಾಡಿ ಹಬ್ಬಕ್ಕೆ ಪರಸ್ಪರ ನೆಂಟರಿಷ್ಟರನ್ನು ಕರೆದು ಹಬ್ಬವನ್ನು ಆಚರಿಸುತ್ತಾರೆೆ. ಹೊಸತಾಗಿ ಮದುವೆಯಾದ ನವ ಜೋಡಿಗಳು ತನ್ನ ಮಾವನ ಮನೆಗೆ ಬಂದು ಮನೆಯವರೆಲ್ಲರಿಗೂ ಹೊಸಬಟ್ಟೆ ಕೊಟ್ಟು
ಸಂಭ್ರಮಿಸುತ್ತಾರೆ.10 ದಿನಗಳು ನಡೆಯುವ ಓಣಂ ಹಬ್ಬದಲ್ಲಿ ಮನರಂಜನೆಗಾಗಿ ಕೇರಳದ ಎಲ್ಲೆಡೆಯೂ ದೋಣಿ ಹಾಯುವ ಸ್ಪರ್ಧೆ, ಹಗ್ಗ ಜಗ್ಗಾಟ, ಹೂವಿನಿಂದ ರಂಗೋಲಿ ಬಿಡಿಸುವ ಸ್ಪರ್ಧೆ ಮುಂತಾದ ವಿವಿಧ ರೀತಿಯ ಕ್ರೀಡೆಗಳನ್ನು ನಡೆಸುತ್ತಾರೆ.

ಅಲ್ಲದೆ ಬಲಿ ಚಕ್ರವರ್ತಿಯ ವೇಷಧರಿಸಿದ ವೇಷಧಾರಿಗಳು ಮನೆಮನೆಗೆ ಬಂದು ಹಾಡಿನೊಂದಿಗೆ ನರ್ತಿಸಿ ಕಾಣಿಕೆ ಸ್ವೀಕರಿಸುವುದು ಹಬ್ಬದ ವಿಶೇಷ ದೃಶ್ಯವಾಗಿದೆ.ಮಹಾಬಲಿ ತಾನು ಆಳಿದ್ದ ರಾಜ್ಯಕ್ಕೆ ಆಗಮಿಸಿ ಪ್ರಜೆಗಳೆಲ್ಲರೂ
ಸಂತೋಷದಿoದಿರುವುದನ್ನು ಕಂಡು ಸಂತುಷ್ಟನಾಗುವನು ಎoಬ ಪ್ರತೀತಿಯೇ ಓಣಂ ಹಬ್ಬದ ಐತಿಹ್ಯ.

——- ವಿಜಯಕುಮಾರ್.ಟಿ.ಮೂಡಿಗೆರೆ

Leave a Reply

Your email address will not be published. Required fields are marked *

× How can I help you?