ಮೈಸೂರು-ಒಂದು ರಾಷ್ಟ್ರ ಒಂದು ದೇಶ ಚುನಾವಣೆಯ ಮೂಲಕ ಭಾರತ ದೇಶವು ಆರ್ಥಿಕ ಪ್ರಗತಿಯತ್ತ ಸಾಗಲಿದೆ-ಜೋಗಿ ಮಂಜು ಅಭಿಪ್ರಾಯ

ಮೈಸೂರು-ಒಂದು ರಾಷ್ಟ್ರ ಒಂದು ದೇಶ ಚುನಾವಣೆಯ ಮೂಲಕ ಭಾರತ ದೇಶವು ಆರ್ಥಿಕ ಪ್ರಗತಿಯತ್ತ ಸಾಗಲಿದೆ. ಭಾರತದಲ್ಲಿ ಇನ್ನು ಮುಂದೆ ಲೋಕಸಭೆ ಹಾಗೂ ವಿಧಾನ ಸಭೆಯ ಚುನಾವಣೆಗಳು ಏಕಕಾಲದಲ್ಲಿ ನಡೆಯುವುದರಿಂದ ಪ್ರಜಾಪ್ರಭುತ್ವ ಗಟ್ಟಿಯಾಗುವುದರ ಜೊತೆಗೆ,ಚುನಾವಣಾ ವೆಚ್ಚದಲ್ಲಿ ಬಾರಿ ಇಳಿಕೆ ಹಾಗೂ ಸಮಯವನ್ನು ಉಳಿಸಬಹುದು ಎಂದು ಬಿಜೆಪಿ ಮೈಸೂರು ನಗರ ಉಪಾಧ್ಯಕ್ಷ ಜೋಗಿ ಮಂಜು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಒಂದು ರಾಷ್ಟ್ರ ಒಂದು ಚುನಾವಣೆಗೆ ಸಂಬಂದಿಸಿದ ಮಾಜಿ ರಾಷ್ಟ್ರಪತಿ ಕೋವಿಂದ್ ಸಮಿತಿಯ ವರದಿ ಕೇಂದ್ರ ಸರಕಾರ ಕ್ಕೆ ತಲುಪಿರುವ ವಿಷಯದ ಸಂಬಂಧ ಪತ್ರಿಕಾ ಪ್ರಕಟಣೆಯೊಂದನ್ನು ಹೊರಡಿಸಿರುವ ಅವರು,ದೇಶದ ಪ್ರಧಾನಿ ನರೇಂದ್ರ ಮೋದಿಯವರು ಕಳೆದ ಸ್ವಾತಂತ್ರ್ಯ ದಿನಾಚರಣೆಯ ಸಂಧರ್ಭದಲ್ಲಿ ಕೆಂಪು ಕೋಟೆಯಲ್ಲಿ ಈ ವಿಚಾರ ಪ್ರಸ್ತಾಪಿಸುವ ಮೂಲಕ ರಾಷ್ಟ್ರಕ್ಕೆ ಸಂದೇಶವನ್ನು ನೀಡಿದ್ದರು.

ಅದರಂತೆಯೇ ಮಾಜಿ ರಾಷ್ಟಪತಿ ಕೋವಿಂದ್ ರವರ ನೇತೃತ್ವದ ಸಮಿತಿಯ ವರದಿಯು ಇದಕ್ಕೆ ಪೂರಕ ವಾಗಿದೆ.

ಇದೊಂದು ರೀತಿ ಐತಿಹಾಸಿಕ ನಿಲುವುವಾಗಿದ್ದು ಪ್ರಜಾಪ್ರಭುತ್ವದ ಗೆಲುವಾಗಿರುತ್ತದೆ.ವಿರೋಧ ಪಕ್ಷಗಳು ವಿರೋಧ ಮಾಡುವುದನ್ನು ಬಿಟ್ಟು ಇದಕ್ಕೆ ಪೂರಕವಾಗಿ ಸಹಕಾರ ಕೊಡಬೇಕು ಎಂದು ಅವರು ಆಗ್ರಹಿಸಿದ್ದಾರೆ.

——————————ಮಧುಕುಮಾರ್

Leave a Reply

Your email address will not be published. Required fields are marked *

× How can I help you?