ತುಮಕೂರು-ವಿದ್ಯೋದಯ-ಕಾನೂನು-ಕಾಲೇಜು- ಎನ್.ಎಸ್.ಎಸ್.ಘಟಕದಿಂದ-ಗ್ರಾಮ-ಪಂಚಾಯಿತಿ- ಸಹಯೋಗದೊಂದಿಗೆ-“ಒಬ್ಬ-ವಿದ್ಯಾರ್ಥಿ-ಒಂದು-ಗಿಡ”- ಕಾರ್ಯಕ್ರಮ

ತುಮಕೂರು: ವಿದ್ಯೋದಯ ಕಾನೂನು ಕಾಲೇಜು ತುಮಕೂರು ಎನ್.ಎಸ್.ಎಸ್ ವಾರ್ಷಿಕ ವಿಶೇಷ ಶಿಬಿರವನ್ನು ತಿಪಟೂರು ತಾಲೂಕು ಹೊನ್ನವಳ್ಳಿ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಈ ಶಿಬಿರದಲ್ಲಿ ಪರಿಸರ ಸಂರಕ್ಷಣೆ ಕಾರ್ಯಕ್ರಮದಡಿ “ಒಬ್ಬ ವಿದ್ಯಾರ್ಥಿ ಒಂದು ಗಿಡ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಕಾನೂನು ಕಾಲೇಜಿನ ಶಿಬಿರಾರ್ಥಿಗಳು ಹೊನ್ನವಳ್ಳಿ ಗ್ರಾಮದ ಶ್ರೀ ಕರಿಸಿದ್ದೇಶ್ವರ ಮಠದ ಸುತ್ತಮುತ್ತಲು ಹಾಗೂ ಊರಿನ ಗ್ರಾಮ ದೇವತೆ ದೇವಸ್ಥಾನದ ಸುತ್ತಲೂ, ಶ್ರೀ ಗುರು ಭೈರವೇಶ್ವರ ದೇವಸ್ಥಾನದ ಅಕ್ಕ ಪಕ್ಕದ ಜಾಗಗಳಲ್ಲಿ ಗ್ರಾಮ ಪಂಚಾಯಿತಿ ಸಹಯೋಗದೊಂದಿಗೆ ಗಿಡಗಳನ್ನು ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಗ್ರಾಮಸ್ಥ ಮೋಹನ್, ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳು ಡಾ. ಕಿಶೋರ್.ವಿ, ಘಟಕ -1 ಪುಷ್ಪ ಕೆ.ಎಸ್ ,ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿಗಳು, ಘಟಕ-2, ಡಾ. ಮುದ್ದುರಾಜು.ಎನ್, ರೂಪ.ಕೆ.ವಿ, ಎನ್.ಎಸ್.ಎಸ್ ಸಹಾಯಕ ಅಧಿಕಾರಿಗಳು, ಹಾಗೂ ಎನ್.ಎಸ್.ಎಸ್ ಶಿಬಿರಾರ್ಥಿಗಳು, ಗ್ರಾಮ ಪಂಚಾಯತಿ ಪಿಡಿಓ, ಸದಸ್ಯರು ಹಾಗೂ ಗ್ರಾಮಸ್ಥರು ಹಾಜರಾಗಿದ್ದರು.

– ಕೆ.ಬಿ.ಚಂದ್ರಚೂಡ

Leave a Reply

Your email address will not be published. Required fields are marked *

× How can I help you?