ಚಿಕ್ಕಮಗಳೂರು-ಅರಣ್ಯ-ಇಲಾಖೆ-ನೀತಿಗಳ-ವಿರುದ್ಧ-ಹೋರಾಡಲು- ಸಂಘಟನೆ-ಅವಶ್ಯ


ಚಿಕ್ಕಮಗಳೂರು:- ಭೂ ಮಾಲೀಕರ ಮತ್ತು ಮೀಸಲು ಅರಣ್ಯ ಒತ್ತುವದಾರರಿಂದ ಜನ ಸಾಮಾನ್ಯರನ್ನು ಒಕ್ಕಲೆಬ್ಬಿಸುತ್ತಿರುವ ಅರಣ್ಯ ಇಲಾಖೆ ನೀತಿಗಳ ವಿರುದ್ಧವಾಗಿ ಹೋರಾಡಲು ಸಂಘಟನೆ ಅತಿ ಮುಖ್ಯ ಎಂದು ಡಾ|| ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆ ಅಧ್ಯಕ್ಷ ಬೆರಣಗೋಡು ಮಂಜುನಾಥ್ ಹೇಳಿ ದರು.


ತಾಲ್ಲೂಕಿನ ಆವತಿ ಗ್ರಾಮದ ಅಂಬೇಡ್ಕರ್ ಸಮುದಾಯ ಭವನದಲ್ಲಿ ಹೋಬಳಿ ಮಟ್ಟದ ಡಾ|| ಬಿ.ಆರ್.ಅಂಬೇಡ್ಕರ್ ವಿಚಾರ ವೇದಿಕೆಯ ನೂತನ ಪದಗ್ರಹಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಶುಕ್ರವಾರ ಸಂಜೆ ಅವರು ಮಾತನಾಡಿದರು.


ದಲಿತ ದಮನಿತ, ಶೋಷಿತ ಸಮುದಾಯ ಹಾಗೂ ಅತಿಸಣ್ಣ ರೈತರು, ಕೂಲಿ ಕಾರ್ಮಿಕರು, ಮಹಿಳೆ ಯರು, ವಿದ್ಯಾರ್ಥಿ, ಯುವಜನರು ಯೋಗಕ್ಷೇಮ ಹಾಗೂ ಅನ್ಯಾಯಕ್ಕೆ ಒಳಗಾದ ಕುಟುಂಬಗಳಿಗೆ ನ್ಯಾಯ ಬದ್ಧ ತೀರ್ಮಾನ ಕೊಡಿಸಲು ಸಂಘಟನೆಯ ಅವಶ್ಯವಾಗಿದೆ ಎಂದು ತಿಳಿಸಿದರು.


ಆವತಿ ಗ್ರಾಮದ ನಿವಾಸಿ ವೆಂಕಟೇಶ್ ಮಾತನಾಡಿ ಮಲೆನಾಡಿನ ಭಾಗಗಳಲ್ಲಿ ಕಮ್ಯುನಿಸ್ಟ್ ಮತ್ತು ದಲಿತ ಚಳುವಳಿಗಳು ಭೂ ಸಂಘರ್ಷದAತಹ ಹೋರಾಟಗಳು ರೂಪಿಸಿದಾಗ ಸಂಘಟನೆ ಮತ್ತು ಸಂಘ ಟಕರಿಗೆ ಆಮಿಷವೊಡಲಾಗುತ್ತದೆ ಎಂದು ಎಚ್ಚರಿಸಿದರು.


ಜನಪರವಾಗಿ ನಿಂತ ಕಾರ್ಯಕರ್ತರನ್ನು ತುಳಿಯುವ ಪ್ರಯತ್ನಗಳು ನಡೆದಿವೆ. ಇಂತಹ ಪರಿಸ್ಥಿತಿ ಯಲ್ಲಿ ಇತಿಹಾಸವನ್ನು ಅರಿತು ಸಂಘಟನೆಯನ್ನು ಜಾಗರೂಕವಾಗಿ ಮತ್ತು ವೈಜ್ಞಾನಿಕ, ವೈಚಾರಿಕ ವಿಚಾ ರದ ತಳ ಹದಿಯ ಮೇಲೆ ಸಂಘಟಿಸುವುದು ಅತಿಮುಖ್ಯವಾಗಿದೆ ಎಂದು ಕಿವಿಮಾತು ಹೇಳಿದರು


ದಲಿತ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯ ಹುಣಸೆಮಕ್ಕಿ ಲಕ್ಷ್ಮಣ್ ಮಾತನಾಡಿ ಮಲೆನಾಡಿನಲ್ಲಿ ದಲಿತ ಮತ್ತು ಕಾರ್ಮಿಕರ ಮೇಲೆೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ಸಂಘಟನೆಯು ಕ್ರಿಯಾ ಶೀಲವಾಗಿ ಹೋರಾಡುವ ಅವಶ್ಯಕತೆ ಇದ್ದು ಮುಂಬರುವ ದಿನಗಳಲ್ಲಿ ಶೋಷಿತರಿಗೆ ಧ್ವನಿಯಾಗಿ ಚಳು ವಳಿಯನ್ನು ರೂಪಿಸಲಿ ಎಂದು ಶುಭ ಹಾರೈಸಿದರು.


ವಿಚಾರ ವೇದಿಕೆ ಜಿಲ್ಲಾ ಖಜಾಂಚಿ ಹೊರಕೆರೆ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ನೂತನ ಪದಾಧಿಕಾರಿಗಳು : ಬಿ.ಡಿ.ಮಂಜುನಾಥ್ (ಅಧ್ಯಕ್ಷ), ಉಮೇಶ್ ದೇವರಹಳ್ಳಿ, ಅಣ್ಣಪ್ಪ ಬ್ಯಾರ ವಳ್ಳಿ, ವಸಂತ್‌ಕುಮಾರ್ (ಉಪಾಧ್ಯಕ್ಷ), ಎನ್.ಉಮೇಶ್, ರವಿ ಪ್ರಸಾದ್ (ಪ್ರ.ಕಾರ್ಯದರ್ಶಿ), ನಾಗೇಶ್, ಈರೇಶ್, ರವಿ, ಮಹೇಶ್ (ಸಹ ಕಾರ್ಯದರ್ಶಿ), ಮಹೇಶ್ ಹೊರಕೆರೆ (ಖಜಾಂಚಿ), ಬಸವರಾಜ್ (ಸಹ ಖಜಾಂಚಿ).

  • ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?