ಹೊಳೆನರಸೀಪುರ/ಪಡವಲಹಿಪ್ಪೆ:ವಿದ್ಯಾರ್ಥಿಗಳು ಮಾದಕ ಪದಾರ್ಥ ಗಳಿಂದ ದೂರವಿದ್ದರಷ್ಟೇ ಉತ್ತಮ ಬದುಕು ರೂಪಿಸಿಕೊಳ್ಳಲು ಸಾಧ್ಯ-ಸುಮಲತ

ಪಡವಲಹಿಪ್ಪೆ(ಹೊಳೆನರಸೀಪುರ):ಇಂದಿನ ಯುವಕರಲ್ಲಿ ಶೇ 50ರಷ್ಟು ಯುವಕರು ವಿವಿಧ ಕಾರಣಗಳಿಂದ ಮಾದಕ ವ್ಯಸನದ ಶೋಷಣೆಗೆ ಒಳಗಾಗುತ್ತಿದ್ದಾರೆ.ಮಾದಕ ವ್ಯಸನ ಹೆಚ್ಚಾದರೆ ಕೊಲೆ,ದರೋಡೆ, ಕಳ್ಳತನಗಳು ನಡೆಯುತ್ತದೆ.ಮಾದಕ ವ್ಯಸನದಿಂದ ಹೊರಬರಲಾರದವರು ವ್ಯಸನ ತೀರಿಸಿಕೊಳ್ಳಲು ಯಾವುದೇ ಹಂತಕ್ಕೆ ಬೇಕಾದರು ಇಳಿದುಬಿಡುತ್ತಾರೆ. ಆದ್ದರಿಂದ ಯಾವುದೇ ವ್ಯಸನಕ್ಕೆ ಬಲಿಯಾಗದೆ ಉತ್ತಮ ಬದುಕು ರೂಪಿಸಿಕೊಳ್ಳುವತ್ತ ನೀವು ದೃಢ ನಿರ್ಧಾರ ಮಾಡಿ ಕಾರ್ಯೋನ್ಮುಕರಾಗಿ.ಮಾದಕ ವ್ಯಸನ ಬದುಕಿಗೆ ಮಾರಕವಾಗುತ್ತದೆ ಎಂದು ನರ್ಸಿಂಗ್ ವಿಭಾಗದ ಅಧಿಕಾರಿ ಸುಮಲತಾ ತಿಳಿ ಹೇಳಿದರು.

ಪಡುವಲಹಿಪ್ಪೆ ಹೆಚ್.ಡಿ. ದೇವೇಗೌಡ ಸರ್ಕಾರೀ ಪದವಿ ಕಾಲೇಜಿನಲ್ಲಿ ಯುವ ರೆಡ್ ಕ್ರಾಸ್ ಘಟಕದ ವತಿಯಿಂದ ಆಯೋಜಿಸಿದ್ದ ಮಾದಕ ವ್ಯಸನದ ಪರಿಣಾಮ ಕಾರ್ಯಕ್ರಮವನ್ನು ಕುರಿತು ಮಾತನಾಡಿ, ಮಾದಕ ವ್ಯಸನಿಗಳಿಗೆ ವ್ಯಸನದ ಬಗ್ಗೆ ತಿಳುವಳಿಕೆಯೆ ಇರುವುದಿಲ್ಲ್ಲ ಎಂದರು.

ರವೀಂದ್ರ ಮಾತನಾಡಿ, ಮಾದಕ ವಸ್ತುಗಳು ಹೇಗೆ ಸಮಾಜದ ಒಳಗೆ ನುಸುಳುತ್ತಿವೆ. ಅವು ಹೇಗೆ ಕಾಲೇಜು ವಿದ್ಯಾರ್ಥಿಗಳ ಕೈ ಸೇರುತ್ತಿವೆ ಎಂಬುದರ ಬಗ್ಗೆ ವಿವರಿಸಿ, ವ್ಯಸನಗಳಿಗೆ ದಾಸರಾಗಿ ಸಮಸ್ಯೆ ತಂದುಕೊಳ್ಳಬೇಡಿ ಎಂದರು. ವ್ಯಸನಕ್ಕೆ ಬಲಿ ಆದರೆ ವಿದ್ಯಾರ್ಥಿಗಳ ಇಡೀ ಕುಟುಂಬಗಳು ಸಮಸ್ಯೆಯನ್ನು ಎದುರಿಸುತ್ತದೆ. ಆದ್ದರಿಂದ ಕ್ಷಣಿಕ ಸುಖಕ್ಕಾಗಿ ನಿಮ್ಮ ಜೀವನವನ್ನು ಬಲಿಕೊಡಬೇಡಿ ಎಂದು ಎಚ್ಚಸಿದಿರು.

ಮೂರ್ಛೆ ರೋಗದ ಬಗ್ಗೆ ಮಾತನಾಡಿದ ನರ್ಸಿಂಗ್ ವಿಭಾಗದ ವಿದ್ಯಾ ಮೂರ್ಛೆ ರೋಗಕ್ಕೂ, ಮಾದಕ ವಸ್ತಗಳಿಗೂ ಹೇಗೆ ಸಂಬಂಧವಿದೆ. ಯಾರೆಲ್ಲ ವ್ಯಕ್ತಿಗಳಿಗೆ ಈ ಖಾಯಿಲೆ ಬರುತ್ತದೆ. ಖಾಯಿಲೆಗೆ ತುತ್ತಾಗಿರುವ ವ್ಯಕ್ತಿಗಳ ಆರೈಕೆ ಹಾಗು ಪ್ರಾಥಮಿಕ ಚಿಕಿತ್ಸೆಯನ್ನು ಯಾವ ರೀತಿ ನೀಡಬೇಕು ಎಂಬುದರ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು.

ಪ್ರಾಂಶುಪಾಲ ಕೆ.ಸಿ. ವಿಶ್ವನಾಥ ಮಾತನಾಡಿ, ಇಂದಿನ ಸಮಾಜದಲ್ಲಿ ಮಾನಸಿಕ ಅಸ್ವಸ್ಥರ ಸಂಖ್ಯೆ ಹೆಚ್ಚುತ್ತಿದೆ. ಮಾದಕ ವ್ಯಸನವು ಒಂದು ಕಾಲದಲ್ಲಿ ಸಮಾಜಕ್ಕೆ ಅಂಟಿದ ಶಾಪ ಎಂದು ನೋಡುತ್ತಿದ್ದರು. ಆದರೆ ಇಂದು ಅದು ಪ್ರತಿಷ್ಟೆಯ ಸಂಕೇತ ಎಂದು ಭಾವಿಸಿದ್ದಾರೆ. ಮತ್ತೊಂದೆಡೆ ಸಾಮಾನ್ಯ ವ್ಯಸನವಾಗಿ ಕಂಡುಬರುತ್ತಿದೆ. ಯಾವುದೇ ಲಿಂಗದ ವ್ಯತ್ಯಾಸವಿಲ್ಲದೆ ಎಲ್ಲರು ಮದ್ಯ ವ್ಯಸನದ ದಾಸರಾಗುತ್ತಿದ್ದಾರೆ. ವಿದ್ಯಾರ್ಥಿಗಳಂತೂ ಅದನ್ನು ಮೋಜು ಮಸ್ತಿಗೆ ರೂಢಿಸಿಕೊಳ್ಳು ತ್ತಿದ್ದಾರೆ. ಆರೋಗ್ಯಕರ ಸಮಾಜದ ನಿರ್ಮಾಣದಲ್ಲಿ ನಿಮ್ಮ ಪಾತ್ರ ದೊಡ್ಡದಿದೆ. ವ್ಯಸನವಿರುವವರು ಇದರಿಂದ ಹೊರಗೆ ಬನ್ನಿ ನಿಮ್ಮಲ್ಲಿ ಯಾವುದಾರು ಮಾನಸಿಕ ರೋಗದ ಲಕ್ಷಣಗಳಿದ್ದರೆ ತಜ್ಞರ ಬಳಿ ಚಿಕಿತ್ಸೆ ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಯುವ ರೇಡ್ ಕ್ರಾಸ್ ಘಟಕದ ಸಂಚಾಲಕರಾದ ಡಾ. ಸಂಜೀವ್ ಕುಮಾರ್, ಸಹಾಯಕ ಪ್ರಾಧ್ಯಾಪಕರಾದ ಅನಂತ್ ಕುಮಾರ್. ಡಾ.ಶಿವಕುಮಾರ್, ವೆಕಂಟೇಶ್, ಮಂಜುನಾಥ, ಮಹೇಶ್, ಉಮೇಶ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

————-—ಸುಕುಮಾರ್

Leave a Reply

Your email address will not be published. Required fields are marked *

× How can I help you?