ಪಾವಗಡ-ನಾರಾಯಣ ರೆಡ್ಡಿ ಎಂಬಾತನ ಅಕ್ರಮ ಸಂಬಂಧದ ವರದಿಯನ್ನು ಮಾಡಿದ್ದ ಪತ್ರಕರ್ತ ರಾಮಾಂಜಿನಪ್ಪನನ್ನು ನಾರಾಯಣ ರೆಡ್ಡಿ ಕುಟುಂಬದ ಮಹಿಳೆಯರು ಅರೆಬೆತ್ತಲು ಗೊಳಿಸಿ ಹಲ್ಲೆ ನಡೆಸಿರುವ ಘಟನೆ ವರದಿಯಾಗಿದೆ.
‘ಗಡಿನಾಡು ಮಿತ್ರ’ ಪತ್ರಿಕೆಯ ತಾಲೂಕು ವರದಿಗಾರರಾಗಿರುವ ರಾಮಾಂಜಿನಪ್ಪ ನಾರಾಯಣ ರೆಡ್ಡಿಯ ಅಕ್ರಮ ಸಂಬಂಧದ ವಿಷಯವನ್ನು ದಾಖಲೆ ಸಮೇತ ಪತ್ರಿಕೆಯಲ್ಲಿ ವರದಿ ಮಾಡಿದ್ದರು. ಈ ವರದಿ ತಾಲೂಕಿನಾದ್ಯಂತ ಸಂಚಲನ ಸೃಷ್ಟಿಸಿ ಪೊಲೀಸರು ದೂರು ದಾಖಲಿಸಿಕೊಂಡು ಆರೋಪಿ ನಾರಾಯಣ ರೆಡ್ಡಿಯನ್ನು ಬಂಧಿಸಿದ್ದರು.
ಈ ದೂರಿನ ಅನ್ವಯ ಪೊಲೀಸರು ನಾರಾಯಣ ರೆಡ್ಡಿಯನ್ನು ಬಂಧಿಸಿ ಕರೆದೊಯ್ಯುವುದನ್ನು ವಿಡಿಯೋ ಮಾಡಿ ರಾಮಾಂಜಿನಪ್ಪ ಸಾಮಾಜಿಕ ಜಾಲತಾಣಗಳಲ್ಲೂ ಹರಿಯಬಿಟ್ಟಿದ್ದ.
ಈ ಕಾರಣಕ್ಕೆ ಆಕ್ರೋಶಗೊಂಡಿದ್ದ ನಾರಾಯಣ ರೆಡ್ಡಿ ಕುಟುಂಬದ ಮಹಿಳೆಯರು ತಮ್ಮ ಕೈಗೆ ಸಿಕ್ಕ ರಾಮಾಂಜನಪ್ಪನ ಮೇಲೆ ಮುಗಿಬಿದ್ದು ಹಲ್ಲೆ ನಡೆಸಿ ಅರೆಬೆತ್ತಲುಗೊಳಿಸಿದ್ದಾರೆ.
ಸದ್ಯ ಮಹಿಳೆಯರ ವಿರುದ್ಧ ರಾಮಾಂಜಿನಪ್ಪ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
———ಪ್ರದೀಪ್ ಮಧುಗಿರಿ