ಪಾವಗಡ: ಪ್ರತಿಯೊಬ್ಬ ಹಿಂದುವೂ, ಸನಾತನ ಧರ್ಮದ ಅನುಯಾಯಿಗಳಾದ ವಿಪ್ರರು ತಮ್ಮ ಧರ್ಮವನ್ನು ಆಚರಣೆ ಮಾಡುತ್ತಾ ಧರ್ಮದ ಉಳಿವಿಗೆ ಪ್ರಯತ್ನ ಮಾಡುತ್ತಾ ಭಾರತದ ಪರಂಪರೆಯನ್ನು, ಆಧ್ಯಾತ್ಮಿಕ ಆಚರಣೆಮತ್ತು ಸನಾತನ ಧರ್ಮವನ್ನು ಸಧೃಡ ಮಾಡುವ ಕೆಲಸಮಾಡಬೇಕಿದೆ ಎಂದು ಶೃಂಗೇರಿ ಜಗದ್ಗುರುಗಳಾದ ಶ್ರೀ ವಿಧುಶೇಖರ ಭಾರತೀ ಶ್ರೀಗಳು ಕರೆ ನೀಡಿದರು.
ಪಾವಗಡದ ರಾಮಕೃಷ್ಣಾಶ್ರಮದ ವೇದಿಕೆಯಲ್ಲಿ ಅವರು ಆಶೀರ್ವಚನಪೂರ್ವಕ ಅನುಗ್ರಹ ಮಾತುಗಳನ್ನಾಡಿದರು.
ಎಲ್ಲರಿಂದಲೂ ಜೀವನ ನಡೆಸುವುದು, ಜೀವನವನ್ನು ಸಾರ್ಥಕ ಮಾಡಿಕೊಳ್ಳುವುದು, ಜನನ-ಮರಣ ಎರಡು ನಡುವಿನದೇ ಜೀವನ, ಪ್ರಾಣಿಪಕ್ಷಿಗಳಿಗೂ ಜೀವವಿದೆ, ಮಾನವರಿಗೂ ಜೀವ ಎಂಬುದಿದೆ, ಆದರೆ ಮನುಷ್ಯರು ಮತ್ತು ಪ್ರಾಣಿಗಳಿಗೂ ವ್ಯತ್ಯಾಸವಿದೆ, ಮನುಷ್ಯರು ತಮ್ಮ ಧರ್ಮವನ್ನು ಪಾಲಿಸಬೇಕು. ಮಾನವನ ಜೀನ ಸಾರ್ಥಕ್ಯವಾಗುವುದು ಧರ್ಮಾಚರಣೆಯಿಂದ ಮಾತ್ರ , ಆದ್ದರಿಂದ ಪ್ರತಿಯೊಬ್ಬರೂ ತಮ್ಮತಮ್ಮ ಧರ್ಮಾಚರಣೆ ತಪ್ಪದೆ ಮಾಡಬೇಕು. ಧರ್ಮಾಚರಣೆ ಅತ್ಯಂತ ಮುಖ್ಯವಾದುದು ಎಂದರು.

ಧಾರ್ಮಿಕವಾದ ಮಾರ್ಗವನ್ನು ಅನುಸರಿಸಿ ಜೀವನವನ್ನು ಸಾರ್ಥಕ್ಯ ಮಾಡಿಕೊಳ್ಳಬೇಕು, ನಮ್ಮ ಮಕ್ಕಳಿಗೂ ಧರ್ಮಾಚರಣೆಯ ಬಗ್ಗೆ ಹೇಳಿಕೊಡಬೇಕು, ಮಕ್ಕಳಿಗೆ ಪ್ರೀತಿ ಇದೆ ಎಂದರೆ ಅವರಿಗೆ ಆಸ್ತಿ ಪಾಸ್ತಿ ಮಾಡುವುದಲ್ಲ ನಿಜವಾದ ಸಂಸ್ಕಾರ ಕಲಿಸಬೇಕು, ತಂದೆಯಾದವರು ಮಕ್ಕಳಿಗೆ ಸಂಸ್ಕಾರ ಹೇಳಿಕೊಡಬೇಕಾದರೆ, ತಂದೆ ತಾಯಿ ಸಹ ಸಂಸ್ಕಾರವಂತರಾಗಬೇಕು. ತಂದೆ ತಾಯಿಯ ಮಾತನ್ನು ಮಕ್ಕಳು ಕೇಳದಲ್ಲಿ ಸಮಾಜಕ್ಕೆ ತೊಂದರೆ. ತಂದೆ-ತಾಯಿ ಆ ಚಾತುರ್ಯ ಬೆಳೆಸಿಕೊಳ್ಳಬೇಕು,ಸಿಂಹದ ಮರಿ ಸಿಂಹದAತೆ ಆದಂತೆ ಸಂಸ್ಕಾರವAತರ ಮಕ್ಕಳು ಸಂಸ್ಕಾರವAತರೇ ಆಗುತ್ತಾರೆ ಎಂದರು.

ಶ್ರೀರಾಮಕೃಷ್ಣ ಆಶ್ರಮದ ಅವರಣದಲ್ಲಿ ಶೃಂಗೇರಿ ಮಠದ ಪರಂಪರೆಯಂತೆ ಶ್ರೀಗಳು ಶ್ರೀ ಚಂಧ್ರಮೌಳೇಶ್ವರ ಶಾರದಾಂಬೆ ಮತ್ತು ಶ್ರೀ ಶಂಕರಭಗವತ್ಪಾದರಪೂಜೆಯನ್ನು ಭಕ್ತರ ಸಮ್ಮುಖದಲ್ಲಿ ನೆರವೇರಿಸಿದರು.
ರಾಮಕೃಷ್ಣಾಶ್ರಮಕ್ಕೆ ಆಗಮಿಸಿದ ಶೃಂಗೇರಿ ಶ್ರೀಗಳ ಪಾದಪೂಜೆಯನ್ನು ಸ್ವಾಮಿ ಜಪಾನಂದಸ್ವಾ,ಮೀಜಿಗಳು ನೆರವೇರಿಸಿದರು.ಶ್ರೀಗಳಿಗೆ ಆಶ್ರಮದ ವತಿಯಿಂದ ಅರ್ಪಿಸಿದ ಭಿನ್ನವತ್ತಲೆಯನ್ನು ಮಠಮುದ್ರೆ ಶ್ರೀನಿವಾಸ ಜೋಯಿಸರು ವಾಚನ ಮಾಡಿದರು.
ಸ್ವ್ವಾಮಿ ಜಪಾನಂದರು ನುಡಿನಮನ ಸಲ್ಲಿಸಿ ಯುದ್ದಕಾರ್ಮೋಡದ ಹಿನ್ನೆಯಲ್ಲಿ ನಾವೆಲ್ಲ ಯೋಧರಿಗಾಗಿ ಒಗ್ಗಟ್ಟಿನ ಮತ್ರ ಜಪಿಸಬೇಕಿದೆ ಎಂದರು.

ಶೋಭಾಯಾತ್ರೆ ಬೇಡ ಎನ್ನುವ ಮೂಲಕ ದೇಶದ ಮತ್ತು ನಮ್ಮ ಸೈನಿಕರ ಮೇಲಿನ ಕಾಳಜಿಯನ್ನು ಶೃಂಗೇರಿ ಶ್ರೀಗಳು ವ್ಯಕ್ತಪಡಿಸಿದ್ದಾರೆ ಎಂದು ಸ್ವಾಮಿ ಜಪಾನಂದರು ಹೇಳಿದರು.
ನಂತರಾಮಜೋಯಿಸರು ಮತ್ತು ಕುಟುಂಬ ಶೃಂಗೇರಿ ಶ್ರೀಗಳ ದೂಳಿ ಪಾದ ಪೂಜೆ ನೆರವೇರಿಸಿದರು.