ಬಣಕಲ್- ಮಹಿಳಾ ಪೊಲೀಸರೆಂದರೆ ಮೂಗು ಮುರಿಯುವ ಸಂದರ್ಭದಲ್ಲಿ ತಮ್ಮ ಠಾಣೆಯ ಮಹಿಳಾ ಪೇದೆಯ ಸೀಮಂತ ನೆರವೇರಿಸುವ ಮೂಲಕ ಠಾಣೆಯ ಅಧಿಕಾರಿಗಳು ಸಹದ್ಯೋಗಿಗಳು ಸಂಭ್ರಮಿಸಿರುವಂತ ಘಟನೆ ಬಣಕಲ್ ಠಾಣೆಯಲ್ಲಿ ನಡೆದಿದೆ.
ಹೌದು….ಹೊರ ಸಭಾಂಗಣದಲ್ಲಿ ಪೋಲಿಸ್ ಇನ್ಸ್ ಪೆಕ್ಟರ್ ರೇಣುಕಾ ಹಾಗೂ ಠಾಣೆಯ ಸಿಬ್ಬಂದಿ ಗಳು ಬಣಕಲ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸುಧಾ ಎಂಬ ಮಹಿಳಾ ಪೇದೆಗೆ ಸೀಮಂತ ಮಾಡಿ ಮಡಿಲಿಗೆ ಮಡಿಲಕ್ಕಿ ತುಂಬಿ ಶುಭ ಹಾರೈಸಿದ್ದಾರೆ.

ಬಣಕಲ್ ಠಾಣೆಯಲ್ಲೇ ಸುಧಾ ರವರ ಪತಿ ದಿಲೀಪ್ ಅವರು ಕೂಡ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹೆರಿಗೆ ರಜೆಗೆಂದು ಹೊರಡುವೇ ಮುನ್ನ ಈ ಕಾರ್ಯಕ್ರಮ ಹಮ್ಮಿಕೊಡ ಠಾಣಾ ಸಿಬ್ಬಂದಿಗಳು, ಮಹಿಳಾ ಪೇದೆಗೆ ಉಡಿ ತುಂಬಿ, ಮಡಿಲಕ್ಕಿ ಹಾಕಿ, ಕೊಬ್ಬರಿ ಬೆಲ್ಲ, ತೆಂಗಿನಕಾಯಿ, ಅರಿಶಿಣ-ಕುಂಕುಮ ಹಾಗೂ ಬಳೆಗಳನ್ನು ನೀಡಿ ಸೀಮಂತ ಕಾರ್ಯ ಮಾಡಿದ್ದಾರೆ. ಆ ಮೂಲಕ ಮಹಿಳಾ ಪೇದೆಗೆ ಗೌರವಿಸಿ ಬೀಳ್ಕೊಟ್ಟಿದ್ದಾರೆ.

ಬಣಕಲ್ ಪೊಲೀಸ್ ಠಾಣಾ ಪಿ ಎಸ್ ಐ ರೇಣುಕಾ ಹಾಗೂ ಪೊಲೀಸರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ವರದಿ:✍️ಸೂರಿ ಬಣಕಲ್