ಚಿಕ್ಕಮಗಳೂರು,– ಒತ್ತುವರಿ ಮಾಡಿರುವ ಕಂದಾಯ ಜಮೀನನ್ನು ಮಂಜೂರು ಮಾಡಿಕೊಡುವಂತೆ ಒತ್ತಾಯಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ ಮುಖಂಡರು ನಗರದ ಆಜಾದ್‌ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಮಾತನಾಡಿದ ದಸಂಸ ಜಿಲ್ಲಾ ಸಂಚಾಲಕ ಬಾಲಕೃಷ್ಣ ಬಿಳೇಕಲ್ಲು ಕಳಸ ತಾಲ್ಲೂಕು ತನೂಡಿ ಗ್ರಾಮದ ಸ.ನಂ.36 ರಲ್ಲಿ 170 ಕುಟುಂಬಗಳು ಸರ್ಕಾರಿ ಜಮೀನನ್ನು ಪೂರ್ವಿಕರ ಕಾಲದಿಂದಲೂ ಸಾಗು ವಳಿ ಮಾಡಿ ಕಾಫಿ, ಮೆಣಸು, ಬಾಳೆ ಹಾಗೂ ತೆಂಗು ಬೆಳೆದು ಮತ್ತು ಮನೆ ನಿರ್ಮಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ ಎಂದರು.
ಜಮೀನು ಮತ್ತು ವಾಸದ ಮನೆ ಬಿಟ್ಟರೆ ಬೇರೆ ಯಾವುದೇ ಆಸ್ತಿ ಈ ಕುಟುಂಬಕ್ಕಿಲ್ಲ. ಇತ್ತೀಚೆಗೆ ಅರಣ್ಯ ಇಲಾಖೆ 75 ಕುಟುಂಬಕ್ಕೆ ಹಕ್ಕುಪತ್ರ ನೀಡಿದೆ. ಉಳಿದ ಹತ್ತು ಕುಟುಂಬಗಳಿಗೆ ಮೂಲಹಕ್ಕುಪತ್ರ ಹಾಗೂ 85 ಕುಟುಂಬಕ್ಕೆ ಹಕ್ಕುಪತ್ರನೇ ನೀಡಿರುವುದಿಲ್ಲ ಎಂದು ತಿಳಿಸಿದರು.
ಸ್ವಾಧೀನಾನುಭವದಲ್ಲಿರುವ ಜಮೀನು ಮಂಜೂರಾತಿ ಕೋರಿ ಹಿಂದೆ ನಮೂನೆ 50, 53, 94ಸಿರಲ್ಲಿ ಅರ್ಜಿ ಸಲ್ಲಿಸಲಾಗಿದೆ. ಆದರೂ ಮಂಜೂರಾತಿ ದೊರಕಿಲ್ಲ. ಅಲ್ಲದೇ ಜಮೀನಿನ ಸ್ವಾಧೀನತೆ ಬಗ್ಗೆ ಯಾವುದೇ ಹಕ್ಕುಪತ್ರ, ಸಾಗುವಳಿ ಚೀಟಿ ನೀಡಿರುವುದಿಲ್ಲ ಎಂದು ಆರೋಪಿಸಿದರು.

ಈ ಸರ್ವೆ ನಂಬರ್‌ನಲ್ಲಿ ಅರಣ್ಯ ಇಲಾಖೆಯಿಂದ ರೆವಿನ್ಯೂ ಇಲಾಖೆಗೆ 8೦೦ ಎಕರೆ ಪ್ರದೇಶ ಮಂಜೂರಾಗಿದ್ದು ಆ ಪ್ರದೇಶದಲ್ಲಿ ಸುಮಾರು ಕುಟುಂಬಗಳಿಗೆ ವಿಲೇವಾರಿ ಮಾಡಿರುತ್ತಾರೆ. ಈ ಪೈಕಿ1991 ರಲ್ಲಿ ಗೋಮಾಳ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡ ಕೃಷಿಕರಿಗೆ ಜಮೀನು ಮಂಜೂರಾತಿ ಮಾಡದೇ, ಅರ ಣ್ಯ ಪ್ರದೇಶವೆಂದು ಘೋಷಣೆ ಮಾಡಲಾಗಿದೆ ಎಂದರು.
ಆದ್ದರಿಂದ ಸಂಬಂಧಿಸಿದ ಅಧಿಕಾರಿಗಳು ಶೀಘ್ರವೇ ಪರಿಶೀಲನೆ ನಡೆಸಿ ಸ್ವಾಧೀನ ಹಾಗೂ ಸಾಗುವಳಿ ಅನುಭವದಲ್ಲಿರುವ ಜಾಗವನ್ನು ಅವರ ಹೆಸರಿಗೆ ಸಾಗುವಳಿ ಚೀಟಿ ನೀಡಿ ಖಾತೆ ದಾಖಲಿಸಿ ಮುಂದಿನ ವ್ಯವ ಹಾರಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ದಸಂಸ ಜಿಲ್ಲಾ ಸಂಘಟನಾ ಸಂಚಾಲಕರಾದ ಗಿರೀಶ್, ಪ್ರಸನ್ನ, ಖಜಾಂಚಿ ಕೆ.ಕೆ. ಬಾಬು, ರಾಜ್ಯಸಮಿತಿ ಸದಸ್ಯ ವಸಂತ್‌ಕುಮಾರ್, ಕಳಸ ತಾಲ್ಲೂಕು ಸಂಚಾಲಕ ವಸಂತ್, ರವಿ, ಉಮೇಶ್, ಮಹಿಳಾ ಸಂಚಾಲಕಿ ಪವಿತ್ರ, ಮುಖಂಡರುಗಳಾದ ರಘು, ನಾಗೇಶ್, ಅಚ್ಚು, ಶೋಭಾ, ಗ್ರಾಮಸ್ಥರಾದ ಸೀ ನಾ, ಲಕ್ಷö್ಮಣ್, ದಾನಪ್ಪ, ಚಂದ್ರು, ಸುರೇಶ್, ಸುಧಾ, ಕಮಲ ಮತ್ತಿತರರು ಹಾಜರಿದ್ದರು.
- ಸುರೇಶ್ ಎನ್.