ಹಾಸನ - ಹೊಳೆನರಸೀಪುರ ತಾಲೂಕಿನ ಮುಸ್ಲಿಂ ಸಂಘಟನೆಗಳ ಒಕ್ಕೂಟ ವತಿಯಿಂದ, ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಕ್ಫ್ ತಿದ್ದುಪಡಿ 2025 ರ ವಿರುದ್ಧವಾಗಿ ಸಾವಿರಾರು ಮುಸ್ಲಿಂ ಬಾಂಧವರು ಪ್ರತಿಭಟನೆ ನಡೆಸಿದರು.
ಪಟ್ಟಣದಲ್ಲಿಂದು ಟಿಪ್ಪು ಸರ್ಕಲ್ ನಿಂದ ಹೊರಟ ಪ್ರತಿಭಟನಾಕಾರರು, ಅಂಬೇಡ್ಕರ್ ಪುತ್ತಳಿಗೆ ಮಾಲಾರ್ಪಣೆ ಮಾಡಿ, ನಂತರ ಗಾಂಧಿ ವೃತ್ತದಲ್ಲಿರುವ ಗಾಂಧಿ ಪ್ರತಿಮೆಗೆ ಪುಷ್ಪರ್ಚನೆ ನೆರವೇರಿಸಿ. ತಾಲೂಕು ಕಛೇರಿವರಿಗೆ ಬೃಹತ್ ಪ್ರತಿಭಟನೆ ನಡೆಸಿದರು.

ಪ್ರತಿಭಟನಾ ಜಾಥದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ರವರ ಭಾವಚಿತ್ರ ಚಿತ್ರ, ರಾಷ್ಟ್ರಧ್ವಜ ಮತ್ತು ಕರ್ನಾಟಕದ ಧ್ವಜ ಗಮನ ಸೆಳೆಯಿತು.
ಈ ವೇಳೆ ಮುಸ್ಲಿಂ ಮುಖಂಡ ಇಲಿಯಾಸ್ ಪಾಷಾ ಮಾತನಾಡಿ, ನಮ್ಮ ಪೂರ್ವಜರು ನಮ್ಮ ಸಮುದಾಯದ ಸರ್ವಾನುತೋಮುಖ ಅಭಿವೃದ್ಧಿಗಾಗಿ ಶೈಕ್ಷಣಿಕವಾಗಿ ರಾಜಕೀಯವಾಗಿ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢವಾಗಿಬೆಳೆಬೇಕು ಎನ್ನುವ ಉದ್ದೇಶದಿಂದ. ಜಮೀನನ್ನು ಅಲ್ಲಾಹನ ಹೆಸರಿನಲ್ಲಿ ದಾನ ಮಾಡಿದ್ದಾರೆ. ಆದರೆ ಇದನ್ನು ಕಬಳಿಸಲು ಕೇಂದ್ರ ಸರ್ಕಾರ ಹೊನ್ನರ ನಡೆಸಿ, ನಮ್ಮ ಸಮುದಾಯದ ವಿರುದ್ಧ ಷಡ್ಯಂತ್ರ ನಡೆಸುತ್ತಿದ್ದಾರೆ. ಸಮುದಾಯದ ಏಳಿಗೆಗಾಗಿ ಅಭಿವೃದ್ಧಿ ನಡೆಸುವ ನೆಪದಲ್ಲಿ ಮಂಕು ಬೂದಿ ಏರಚುವ ಕೆಲಸ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಯಾವುದೇ ರೀತಿಯ ಅತಿ ಅಹಿತಕರ ಘಟನೆ ನಡೆದಂತೆ ಡಿವೈಎಸ್ ಪಿ ಶಾಲು ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತು.

ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಪ್ರದೀಪ್ ಕುಮಾರ್, ಸಬ್ ಇನ್ಸ್ಪೆಕ್ಟರ್ ಅಭಿಜಿತ್, ಮುಸ್ಲಿಂ ಧರ್ಮಗುರು, ಅಲಿ ರಜ,
ನದೀಮ್ ಪಾಷಾ ಅಭಿಬುಲ್ಲ, ನದೀಮ್ ಪಾಷಾ ಮುಂತಾದವರು ಹಾಜರಿದ್ದರು.
–