ಅರಕಲಗೂಡು : ಪ.ಪಂಯಲ್ಲಿ ನಡೆಯುತ್ತಿರುವ ಅಕ್ರಮಗಳನ್ನು ಖಂಡಿಸಿ, ವಿರೋಧ ಪಕ್ಷದ ಸದಸ್ಯರು ಪಂಚಾಯತಿ ಕಛೇರಿ ಮುಂದೆ ಕುಳಿತು ಪ್ರತಿಭಟಿಸಿದರು.
ಇಂದು ಪಟ್ಟಣ ಪಂಚಾಯತಿ ಅಧ್ಯಕ್ಷ ಪ್ರದೀಪ್ ಕುಮಾರ್ ಅಧ್ಯಕ್ಷತೆಯಲ್ಲಿ ಸಮಾನ್ಯ ಸಭೆ ಕರೆಯಲಾಗಿತ್ತು, ಸಭೆಯ ಆರಂಭದಲ್ಲಿ ಹಿಂದಿನ ಸಭೆಯ ಸಭಾ ನಡುವಳಿಯನ್ನು ಓದಿ ದಾಖಲು ಮಾಡುವ ವೇಳೆ ಸದಸ್ಯರಾದ ರಶ್ಮಿ , ರಮೇಶ್ ವಾಟಾಳ್ ಮತ್ತು ನಿಖೀಲ್ ಕುಮಾರ್, ಲಕ್ಷ್ಮಿ ಅವರು ಆಕ್ಷೇಪ ವ್ಯಕ್ತಪಡಿಸಿದರು.
ಹೊರಬಂದು ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿಗೆ ಧಿಕ್ಕಾರವನ್ನು ಕೂಗಿಕೊಂಡು ಪಟ್ಟಣ ಪಂಚಾಯಿತಿ ಆಡಳಿತ ವ್ಯವಸ್ಥೆಯಲ್ಲಿ ತುಂಬಾ ಲೋಪದೋಷಗಳಾಗಿವೆ. ಯಾವುದೇ ಕೆಲಸ ಕೂಡ ಇಲ್ಲಿ ಸಂವಿಧಾನ ಬದ್ಧವಾಗಿ ನಡೆಯುತ್ತಿಲ್ಲ ಎಂದು ಕೂಗಾಡಿಕೊಂಡು ಸಭಾಂಗಣದಿಂದ ಹೊರಬಂದು ಪಟ್ಟಣ ಪಂಚಾಯಿತಿಯ ಆಡಳಿತ ಕಚೇರಿ ಮುಂದೆ ಈ ನಾಲ್ಕು ಜನ ಸದಸ್ಯರು ಆಡಳಿತ ವ್ಯವಸ್ಥೆಗೆ ಧಿಕ್ಕಾರ ಕೂಗಿಕೊಂಡು ಆಕ್ರೋಶ ವ್ಯಕ್ತಪಡಿಸಿದರು.

ಹಿರಿಯ ಸದಸ್ಯರಾದ ರಮೇಶ್ ವಾಟಳ್ ಮಾತನಾಡಿ, ಅರಕಲಗೂಡು ಪಟ್ಟಣ ಪಂಚಾಯಿತಿಯಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಮನಸ್ಸು ಇಚ್ಛೆಯಿಂದ ಖರ್ಚು ಮಾಡಿಕೊಂಡು ಯಾವುದೇ ತರಹದ ಲೆಕ್ಕವನ್ನು ಸಹ ಕೊಡದೆ ಜನರಿಗೆ ವಂಚನೆ ಮಾಡುತ್ತಿದ್ದಾರೆ. ಕಾಮಗಾರಿಗಳಲ್ಲಿ ತುಂಬಾ ಅಕ್ರಮಗಳಿಸಿದ್ದಾರೆ. ಕೆಲವು ಕಾಮಗಾರಿಗಳು ಕೆಲಸವನ್ನು ಮಾಡಿ ಈಗ ಪಟ್ಟಣ ಪಂಚಾಯಿತಿಯ ಸಾಮಾನ್ಯ ಸಭೆಗೆ ತಂದಿದ್ದಾರೆ. ಇವೆಲ್ಲವೂ ಕೂಡ ಸಾರ್ವಜನಿಕ ವ್ಯವಸ್ಥೆಯಲ್ಲಿ ಅಕ್ರಮವಾಗಿದೆ. ಆದ್ದರಿಂದ ಸಮಗ್ರವಾಗಿ ಜಿಲ್ಲಾಧಿಕಾರಿಗಳು ತನಿಖೆ ಮಾಡಬೇಕು. ನಮಗೆ ನ್ಯಾಯ ಕೊಡಿಸಬೇಕು ಎಂದರು.

ಸದಸ್ಯ ನಿಖಿಲ್ ಕುಮಾರ್ ಮಾತನಾಡಿ ಯಾವುದೇ ಸಭೆಗಳಾದರೂ ಕೂಡ ಯಾವುದೇ ಸಭಾ ನಡುವಳಿ ಬರೆಯುವುದಿಲ್ಲ ಯಾವುದೋ ಒಂದು ಕಾಮಗಾರಿಗೆ ಅನುಮತಿ ಪಡೆದು ಅದಕ್ಕಿಂತ ಹೆಚ್ಚು ಕಾಮಗಾರಿಗಳಿಗೆ ಅನುಮತಿ ಪಡೆದಿದ್ದೇವೆ ಎಂದು ತಿದ್ದುಪಡಿ ಮಾಡಿಕೊಂಡು ನಡೆಸುತ್ತಿದ್ದಾರೆ. ಆದ್ದರಿಂದ ಪಟ್ಟಣ ಪಂಚಾಯಿತಿ ಆಡಳಿತ ಮಂಡಳಿ ತುಂಬಾ ಭ್ರಷ್ಟಾಚಾರದಲ್ಲಿ ತೊಡಗಿದೆ ಇದನ್ನು ನಾವು ಖಂಡಿಸುತ್ತೇವೆ. ಈ ವಿಚಾರವಾಗಿ ನಾವು ಲೋಕಾಯುಕ್ತರಿಗೆ ದೂರು ನೀಡುತ್ತಿದ್ದು, ಲೋಕಾಯುಕ್ತರು ಸಮಗ್ರವಾಗಿ ತನಿಖೆ ಮಾಡಿ ನಮಗೆ ನ್ಯಾಯ ಕೊಡಿಸಬೇಕು ಎಂದರು.
ಸದಸ್ಯೆ ರಶ್ಮಿ ಮಾತನಾಡಿ, ಎಲ್ಲಾ ಕಾಮಗಾರಿಗಳು ಕೆಲಸ ಮುಗಿದಿದೆ ಈಗ ಸಾಮಾನ್ಯ ಸಭೆಯಲ್ಲಿ ಇಟ್ಟು ಅನುಮತಿ ಪಡೆಯುತ್ತಿದ್ದಾರೆ, ಕಾಮಗಾರಿ ಆದಮೇಲೆ ಅನುಮತಿ ಪಡೆಯಲು ಹೇಗೆ ಸಾಧ್ಯ ಇದು ಸಂವಿಧಾನ ಬಾಹಿರವಾಗಿದೆ. ಸಾರ್ವಜನಿಕರ ತೆರಿಗೆ ಹಣ ತುಂಬಾ ಲೋಪವಾಗಿ ಸರ್ಕಾರದ ಬೊಕ್ಕಸಕ್ಕೆ ನಷ್ಟವಾಗುತ್ತಿದೆ ಸರ್ಕಾರದ ಅಧಿಕಾರಿಗಳು ಕೂಡ ಈ ಚುನಾಯಿತ ಪ್ರತಿನಿಧಿಗಳ ಜೊತೆ ಸೇರಿಕೊಂಡು ಅಕ್ರಮಣಸಖಿ ಭ್ರಷ್ಟಾಚಾರದಲ್ಲಿ ತೊಡಗಿಕೊಂಡು ಸರ್ಕಾರಕ್ಕೆ ಮೋಸ ಮಾಡುತ್ತಿದ್ದಾರೆ. ನಾವು ಇದನ್ನು ಪ್ರಶ್ನೆ ಮಾಡಲು ಹೋದರೆ ನಮ್ಮ ಮೇಲೆ ಉಡಾಫೆ ಉತ್ತರ ಕೊಡುತ್ತಾರೆ. ಈ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳಿಗೆ ಅವಮಾನ ಮಾಡುತ್ತಿದ್ದಾರೆ. ಆದ್ದರಿಂದ ಇದಕ್ಕೆ ಸಂಬಂಧಪಟ್ಟ ಮೇಲಾಧಿಕಾರಿಗಳು ಸಮಗ್ರವಾಗಿ ಇದನ್ನು ತನಿಖೆ ನಡೆಸಿ ಯಾರು ತಪ್ಪಿತಸ್ಥರು ಅವರನ್ನು ಶಿಕ್ಷೆಗೆ ಗುರಿ ಮಾಡಬೇಕು. ಅರಕಲಗೂಡು ಪಟ್ಟಣದ ನಾಗರಿಕರಿಗೆ ನ್ಯಾಯ ಕೊಡಿಸಬೇಕು ಎಂದರು.

ರಮೇಶ್ ವಾಟರ್ ಮಾತನಾಡಿ, ಇದು ತನಿಖೆ ಆಗಲೇಬೇಕು ಇಲ್ಲವಾದಲ್ಲಿ, ಹೋರಾಟದ ರೂಪುರೇಷೆಗಳನ್ನು ತಯಾರು ಮಾಡಿ ಜಿಲ್ಲಾಧಿಕಾರಿಗಳ ಮುಂದೆ ಅಹೋ ರಾತ್ರಿ ಧರಣಿ ನಡೆಸಲಾಗುವುದು ಎಂದು ಎಚ್ಚರಿಸಿದರು.