ಕೆ.ಆರ್.ಪೇಟೆ: ತಾಲ್ಲೂಕು ಗ್ರಾಮ ಆಡಳಿತ ಅಧಿಕಾರಿಗಳ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತ ಅಧಿಕಾರಿಗಳು ಕೆ.ಆರ್.ಪೇಟೆ ಪಟ್ಟಣದಲ್ಲಿರುವ ಕಾರ್ಯಸೌಧ ಆವರಣದಲ್ಲಿ 2ನೇ ಹಂತದ ಅನಿರ್ಧಿಷ್ಟಾವಧಿ ಮುಷ್ಕರ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಹರೀಶ್ ನೇತೃತ್ವದಲ್ಲಿ ಶಾಂತಿಯುತವಾಗಿ ನಡೆಯುತ್ತಿದೆ.
ಸಂಘದ ಜಿಲ್ಲಾಧ್ಯಕ್ಷ ಹರೀಶ್ ಮಾತನಾಡಿ ರಾಜ್ಯ ಸಂಘದ ನಿರ್ದೇಶನಂತೆ ರಾಜ್ಯಾದ್ಯಂತ ಮುಷ್ಕರ ಕೈಗೊಂಡಿದ್ದು, ನಮ್ಮ ನ್ಯಾಯಯುತವಾಗಿ ಕೂಡಲೇ ನಮ್ಮ ಪ್ರಮುಖ ಸಮಸ್ಯೆಗಳನ್ನ ಭರವಸೆ ನೀಡದೆ ಬೇಡಿಕೆಗಳನ್ನ ಸರ್ಕಾರ ಈ ಕೂಡಲೇ ಈಡೇರಿಸಬೇಕು. ಬಡವರ ಪರವಾಗಿ ನಾವುಗಳು ಕರ್ತವ್ಯನಿರ್ವಹಿಸುತ್ತಿದ್ದು ಕೂಡಲೇ ಗಮನ ಹರಿಸಿ ಬೇಡಿಕೆ ಈಡೇರಿಬೇಕು.
ನಮ್ಮ ಕರ್ತವ್ಯ ಸಮಯದಲ್ಲಿ ಸೇವೆಗೆ ಅಗತ್ಯವಾಗಿರುವ ಸುಸಜ್ಜಿತ ಕಚೇರಿ, ಕುರ್ಚಿ, ಟೇಬಲ್, ಲ್ಯಾಪ್‌ಟಾಪ್,ಮೊಬೈಲ್, ಸಿಮ್, ಸ್ಕಾನರ್ ಸೌಲಭ್ಯ ಒದಗಿಸಬೇಕು. ಸೌಲಭ್ಯಗಳನ್ನು ನೀಡದೆ ನಿಗದತ ಸಮಯದಲ್ಲಿ ಕೆಲಸ ಮಾಡಲು ಸರ್ಕಾರ ಸಹಕಾರ ನೀಡಬೇಕು. ಒತ್ತಡ ಹೇರಲಾಗುತ್ತಿದೆ. ಆದರೆ, ಸೇವಾ ಸೌಲಭ್ಯ ಮತ್ತು ಭದ್ರತೆ ನೀಡುತ್ತಿಲ್ಲ ಎಂದು ಆರೋಪಿಸಿ ಕೆಲಸಕ್ಕೆ ಬಳಸುವ ಮೊಬೈಲ್ ಆಪ್ ಗಳನ್ನು ಸಾಮೂಹಿಕವಾಗಿ ಡಿಲೀಟ್ ಮಾಡಿ ಕೈಗೆ ಕಪ್ಪುಬಟ್ಟೆ ಧರಿಸಿ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.

ಸಾರ್ವಜನಿಕರಿಗೆ ತೊಂದರೆ ಗ್ರಾಮ ಆಡಳಿತ ಅಧಿಕಾರಿಗಳು ತಮ್ಮ ವಿವಿಧ ಬೇಡಿಕೆ ಅಗ್ರಹಿಸಿ ಅನಿರ್ನಿಷ್ಟಾವಧಿ ಮುಷ್ಕರ ಕೈಗೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಮತ್ತು ರೈತರ ಕೆಲಸಗಳು ಸ್ಥಗಿತಗೊಂಡು ಕಂಗಾಲಾಗಿದ್ದಾರೆ. ಕೂಡಲೇ ಸರ್ಕಾರ ಗ್ರಾಮ ಆಡಳಿತ ಅಧಿಕಾರಿಗಳ ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಸಾರ್ವಜನಿಕರಿಗೆ ತೀವ್ರ ತೊಂದರೆ ಉಂಟಾಗುತ್ತದೆ ಎಂದು ಸಾರ್ವಜನಿಕರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳ ಸಂಘದ ತಾಲ್ಲೂಕು ಅಧ್ಯಕ್ಷ ದಶರತ್ ಪೂಜಾರಿ,ಉಪಾಧ್ಯಕ್ಷ ಸಾವಿತ್ರಿ, ರಘುವೇಂದ್ರ, ಕಾರ್ಯದರ್ಶಿ ಹೊನ್ನೇಸ್.ಬಿ, ಖಜಾಂಚಿ ಕಾವ್ಯಗೌಡ, ಸದಸ್ಯರಾದ ಮಧು, ಶ್ವೇತ, ಪೂಜಾ, ಕಾಂತೆಶ್, ಸೋಮಚಾರಿ, ಸೇರಿದಂತೆ ಉಪಸ್ಥಿತರಿದ್ದರು.
- ಮನು ಮಾಕವಳ್ಳಿ ಕೆ ಆರ್ ಪೇಟೆ