ಅರಕಲಗೂಡು-ಸಾರ್ವಜನಿಕ-ಚರಂಡಿ-ನಿರ್ಮಾಣವಾಗಿದ್ದ-ಸ್ಥಳದಲ್ಲಿ- ಮನೆ-ಪಿಲ್ಲರ್-ನಿರ್ಮಾಣ-ಸೂಕ್ತ-ಕ್ರಮಕ್ಕೆ-ಸಾರ್ವಜನಿಕರ-ಒತ್ತಾಯ

ಅರಕಲಗೂಡು – ಮನೆಯ ಕಟ್ಟುಲು, ಸಾರ್ವಜನಿಕ ಚರಂಡಿಯ ಗೋಡೆಯನ್ನು ಹೊಡೆದು, ಪಿಲ್ಲರನ್ನು ನಿರ್ಮಿಸಿರುವಂತ ಘಟನೆ ಪಟ್ಟಣದ 13ನೇ ವಾರ್ಡಿನಲ್ಲಿ ಕಂಡು ಬಂದಿದೆ.

ಅಲ್ತಾಫ್ ಎಂಬುವರು ತಮ್ಮ ಮನೆಯ ಕಟ್ಟುಲು, ಸಾರ್ವಜನಿಕರ ಚರಂಡಿಯ ಗೋಡೆಯನ್ನು ಹೊಡೆದು, ಪಿಲ್ಲರನ್ನು ನಿರ್ಮಿಸುತ್ತಿದ್ದಾರೆ ಎಂದು ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಸ್ಥಳಿಯ ವ್ಯಕ್ತಿ ಮಂಜಪ್ಪ ಮಾಧ್ಯಮದೊಂದಿಗೆ ಮಾತನಾಡಿ, ಚರಂಡಿಯು ಕಳೆದ 15 ದಿನದ ಹಿಂದೆ ಪಟ್ಟಣ ಪಂಚಾಯಿತಿಯ ಅನುದಾನದಲ್ಲಿ ನಿರ್ಮಾಣವಾಗಿದೆ. ಈಗ ಅಲ್ತಾಫ್ ಎಂಬುವವರು ತಮ್ಮ ನಿವೇಶನದಲ್ಲಿ ಮನೆಯನ್ನು ಕಟ್ಟಲು ಬಂದು, ಪಕ್ಕದಲ್ಲಿ ಇರುವ ಚರಂಡಿಯ ಗೋಡೆಯನ್ನು ಹೊಡೆದು, ಪಿಲ್ಲರನ್ನು ನಿರ್ಮಿಸುತ್ತಿದ್ದಾರೆ. ಈ ಪಿಲ್ಲರು ಕಾನೂನುಬಾಹಿರವಾಗಿದ್ದು. ಸಂಬಂಧಪಟ್ಟ ಮೇಲಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ತಪ್ಪು ಎಸೆಗಿದ್ದವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂಬ ಆಗ್ರಹಿಸಿದ್ದಾರೆ.

ಇನ್ನೂ ಈ ಸಂಬಂಧ ಪಟ್ಟಣ ಪಂಚಾಯಿತಿ ಮಾಜಿ ಸದಸ್ಯ ಕೆಲ್ಲೂರುಶಶಿಕುಮಾರ್ ಅವರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಮೇಲಾಧಿಕಾರಿಗಳನ್ನು ಸಂಪರ್ಕಿಸಿ ದೂರು ನೀಡಿದ್ದು, ಮೇಲಾಧಿಕಾರಿಗಳು ಸಕರಾತ್ಮಕವಾಗಿ ಸ್ಪಂದಿಸಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

× How can I help you?