ಬೇಲೂರು– ತಾಲೂಕಿನ ಬಿಕ್ಕೋಡು ಹೋಬಳಿ ಕೆಸಗೋಡು ಗ್ರಾಮ ಪಂಚಾಯಿತಿಯ ಅಧ್ಯಕ್ಷರಾಗಿ ಕೆರಲೂರು ಕ್ಷೇತ್ರದ ರಾಜನಹಳ್ಳಿ ಗ್ರಾಮದ ಚಂದ್ರಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಅಧ್ಯಕ್ಷ ನವೀನ್ ಕುಮಾರ ಹೆಚ್.ಬಿ. ರವರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನೆಡೆದ ಚುನಾವಣೆಯಲ್ಲಿ ಪಂಚಾಯಿತಿಯ ಏಳು ಮಂದಿ ಸದಸ್ಯರುಗಳ ಒಮ್ಮತದಿಂದ ಚಂದ್ರಯ್ಯ ಒಬ್ಬರೆ ನಾಮಪತ್ರ ಸಲ್ಲಿಕೆ ಮಾಡಿದ್ದು ಚುನಾವಣಾಧಿಕಾರಿಗಳು ಹಾಗೂ ತಾಲೂಕು ದಂಡಾಧಿಕಾರಿ ಗಳಾದ ಮಮತಾ ಎಂ ರವರು ಚಂದ್ರಯ್ಯ ರವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ನೂತನ ಅಧ್ಯಕ್ಷರಾದ ಚಂದ್ರಯ್ಯ ನನ್ನ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗಾಗಿ ಸರ್ವ ಸದಸ್ಯರ ಸಹಕಾರದಿಂದ ಜನಸಾಮಾನ್ಯರಿಗೆ ಅಗತ್ಯ ಇರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದರು ಹಾಗೂ ಅಧ್ಯಕ್ಷರಾಗಿ ಆಯ್ಕೆಯಾಗಲು ಸಹಕಾರ ನೀಡಿದ ಸದಸ್ಯರೆಲ್ಲರಿಗೂ ಮತ್ತು ನನ್ನ ಕ್ಷೇತ್ರದ ಜನತೆಗೆ ಧನ್ಯವಾದಗಳು ಎಂದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ತೇಜಸ್ವಿ ಸತೀಶ್, ಸದಸ್ಯರುಗಳಾದ ವಿಶ್ವನಾಥ್, ನವೀನ್ ಕುಮಾರ ಹೆಚ್.ಬಿ., ರತ್ನಕಾಂತರಾಜು, ಲಕ್ಷ್ಮೀಲಕ್ಷ್ಮಣ, ಚಿಕ್ಕಮ್ಮ ನಾಗಯ್ಯ ಮುಖಂಡರಾದ ಮರಿಯಪ್ಪ, ಪರ್ವತಯ್ಯ, ರೇಣುಕಾನಂದ, ಕೋಗಿಲೆಮನೆ ಅರುಣಕುಮಾರ, ಶಂಬುಗನಹಳ್ಳಿ ಬಾಬು, ಸತೀಶ್ ಹಾಗೂ ಗ್ರಾಮಸ್ಥರು ಹಾಜರಿದ್ದರು.