ರಾಮನಗರ:ಕೃಷಿ ವಿಶ್ವವಿದ್ಯಾನಿಲಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಪಡೆಯುವ ಕಾರ್ಯಕ್ರಮದಡಿಯಲ್ಲಿ ಹದಿಮೂರು ವಾರಗಳ ಕಾಲ ಮುಂಗಾರು ಹಂಗಾಮಿಗೆ ಸರಿ ಹೊಂದುವಂತೆ ರೈತ ಸಂಪರ್ಕ ಕೇಂದ್ರ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ರೈತರೊಂದಿಗೆ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸುತ್ತಿದ್ದು, ರೈತರೊಂದಿಗೆ ಸಂವಾದ ನಡೆಸುವುದಷ್ಟೇ ಅಲ್ಲದೇ ಗೊಬ್ಬರ ತಯಾರಿಕೆ, ಬೀಜಾಮೃತ, ಜೀವಾಮೃತ ವಿಧಾನದ ಪ್ರಾತ್ಯಕ್ಷಿಕೆ ನಡೆಸಿಕೊಟ್ಟರು.
ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಹನುಮೇಗೌಡನಪಾಳ್ಯ ಇಲ್ಲಿ, ಕಾರ್ಯಕ್ರಮದ ಅಂಗವಾಗಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ವಾಸವಿದ್ದು,ರೈತರಿಂದ ಮಾಹಿತಿ ಪಡೆದು ಅವರ ಸಮಸ್ಯೆಗಳಿಗೆ ವಿಜ್ಞಾನಿಗಳ ಸಹಾಯದೊಂದಿಗೆ ಪರಿಹಾರ ನೀಡುತ್ತಿದ್ದಾರೆ.
ಮಾಗಡಿ ತಾಲ್ಲೂಕಿನಲ್ಲಿ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಕಾಂಪೋಸ್ಟ್,ಜೀವಾಮೃತ ಮತ್ತು ಬೀಜಾಮೃತ ಕುರಿತು ವಿಧಾನ ಪ್ರದರ್ಶನ ನಡೆಸಲಾಯಿತು.ಸುಮಾರು 45 ನಿಮಿಷಗಳ ಕಾಲ ರೈತರೊಂದಿಗೆ ಚರ್ಚೆ ನಡೆಸಿ, ಅವರ ಪ್ರಶ್ನೆಗಳಿಗೆ ಉತ್ತರ ನೀಡಿ ಅವರ ಅಭಿಪ್ರಾಯ ಪಡೆದುಕೊಂಡರು.
ಈ ಸಂದರ್ಭದಲ್ಲಿ ಕೃಷಿ ವಿಶ್ವವಿದ್ಯಾಲಯದ ಅಂತಿಮ ವರ್ಷದ ವಿದ್ಯಾರ್ಥಿಗಳು,ಹುಚ್ಚ ಹನುಮೇಗೌಡನ ಪಾಳ್ಯ,ಊರಿನ ಹಿರಿಯರಾದ ಕೆಂಪಣ್ಣನವರು,ಪ್ರಗತಿಪರ ರೈತರಾದ ಕುಮಾರಸ್ವಾಮಿ,ಗಂಗಣ್ಣ ಮತ್ತು ಊರಿನ ರೈತರು ಪಾಲ್ಗೊಂಡಿದ್ದರು.
ಜ಼ಮೀರ್ ಅಹಮದ್ ಕೊಣನೂರು
ಫೋನ್: 9845821071