ರಾಮನಗರ:ಕೃಷಿ ವಿಶ್ವವಿದ್ಯಾನಿಲಯ ಅಂತಿಮ ವರ್ಷದ ವಿದ್ಯಾರ್ಥಿಗಳು ತಮ್ಮ ಗ್ರಾಮೀಣ ಕೃಷಿ ಕಾರ್ಯಾನುಭವ ಪಡೆಯುವ ಕಾರ್ಯಕ್ರಮದಡಿಯಲ್ಲಿ 13 ವಾರಗಳ ಕಾಲ ಮುಂಗಾರು ಹಂಗಾಮಿಗೆ ಸರಿ ಹೊಂದುವಂತೆ ರೈತ ಸಂಪರ್ಕ ಕೇಂದ್ರ ಮತ್ತು ಅದರ ವ್ಯಾಪ್ತಿಯಲ್ಲಿ ಬರುವ ಹಳ್ಳಿಗಳಲ್ಲಿ ರೈತರೊಂದಿಗೆ ಕೃಷಿ ವಿಸ್ತರಣಾ ಕಾರ್ಯಕ್ರಮಗಳನ್ನು ನಡೆಸಲು ನಿಯೋಜಿಸಲಾಗಿದೆ.
ರಾಮನಗರ ಜಿಲ್ಲೆಯ ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಹುಚ್ಚಹನುಮೇಗೌಡನಪಾಳ್ಯ ಇಲ್ಲಿ ಕಾರ್ಯಕ್ರಮದ ಅಂಗವಾಗಿ ಸುಮಾರು ಇಪ್ಪತ್ತು ವಿದ್ಯಾರ್ಥಿಗಳು ವಾಸವಿದ್ದು, ರೈತರಿಂದ ಮಾಹಿತಿ ಪಡೆದು ಅವರ ಸಮಸ್ಯೆಗಳಿಗೆ ವಿಜ್ಞಾನಿಗಳ ಸಹಾಯದೊಂದಿಗೆ ಪರಿಹಾರ ನೀಡುತ್ತಿದ್ದಾರೆ.
ಈಗಾಗಲೇ ಎರಡು ವಾರದ ಸಮಯದಲ್ಲಿ ರೈತರ ಮಾಹಿತಿ ಸಂಗ್ರಹಣೆ,ಗ್ರಾಮೀಣ ಸಹಭಾಗಿತ್ವ ಮೌಲ್ಯಮಾಪನ, ಸಾಮಾನ್ಯ ಸಭೆ,ಪಾರ್ಥೇನಿಯಂ ಜಾಗೃತಿ ಕಾರ್ಯಕ್ರಮ,ಮಣ್ಣು ಮಾದರಿ ತೆಗೆಯುವ ವಿಧಾನ ಮತ್ತು ಅದರ ಮಹತ್ವ, ರೈತರ ಕ್ಷೇತ್ರ ಭೇಟಿ ಮೊದಲಾದ ಕಾರ್ಯಕ್ರಮಗಳನ್ನು ಕೈಗೊಳ್ಳಲಾಗಿದೆ.
ಅಲ್ಲದೆ ಕೃಷಿ ವಿಶ್ವವಿದ್ಯಾಲಯದ ವಿಜ್ಞಾನಿಗಳ ಸಮ್ಮುಖದಲ್ಲಿ ಜೇನು ಕೃಷಿಯ ಕುರಿತು ವಿದ್ಯಾರ್ಥಿಗಳಿಂದ ವಿವರಣೆ ನೀಡಲಾಯಿತು.
ಈ ಕಾರ್ಯಕ್ರಮದಲ್ಲಿ ರೇಷ್ಮೆ ಕೃಷಿ ಇಲಾಖೆಯ ಡಾ ವಿನೋದ ಕೆ ಎಸ್, ಜೇನು ಕೃಷಿ ವಿಭಾಗದ ಡಾ.ಶ್ವೇತಾ ಬಿ, ಆಹಾರ ವಿಜ್ಞಾನ ಮತ್ತು ಪೌಷ್ಟಿಕಾಂಶ ಇಲಾಖೆಯ ಡಾ ವೆನ್ನಾ ಬಿ,ಇನ್‌ಸ್ಟಿಟ್ಯೂಟ್ ಆಫ್ ಅಗ್ರಿಬಿಸಿನೆಸ್ ಮ್ಯಾನೇಜ್‌ಮೆಂಟ್ ನಿಂದ ಡಾ ಮನೋಹರ್,ಡೈರಿ ಕಾರ್ಯದರ್ಶಿ ಶಿವರಾಮ್ ಮೊದಲಾದವರ ಜೊತೆಗೆ ಗ್ರಾಮದ ರೈತರು ಸಕ್ರಿಯವಾಗಿ ಭಾಗವಹಿಸಿದ್ದರು.
———–ಮಧುಕುಮಾರ್