ರಾಮನಾಥಪುರ-14ನೇ ವರ್ಷದ ಕಾವೇರಿ ನದಿ ಜಾಗೃತಿ ರಥಯಾತ್ರೆ ಇದೇ ಸೋಮವಾರ ಬೆಳಿಗ್ಗೆ 10 ಗಂಟೆಗೆ ಕೊಡಗಿನ ತಲಕಾವೇರೀಯಿಂದ ರಾಮನಾಥಪುರಕ್ಕೆ ಆಗಮಿಸಲಿದೆ ಎಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕಾಳಬೋಯಿ ಅವರು ತಿಳಿಸಿದರು.
ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಅವರಣದಲ್ಲಿ ನಡೆದ ಕಾವೇರಿ ಜಾಗೃತಿ ರಥ ಯಾತ್ರೆಯ ಸಭೆಯ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ರಾಮನಾಥಪುರ ಶ್ರೀ ರಾಮೇಶ್ವರಸ್ವಾಮಿ ದಂಡೆಯಲ್ಲಿರುವ ಪುಷ್ಕರಣಿಯಲ್ಲಿ 132 ನೇಯ ತಿಂಗಳ ಹುಣ್ಣುಮೆಯ ಕಾವೇರಿ ಮಹಾ ಅರತಿ ಪೂಜೆ ನಡೆಯಲಿದ್ದು ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವಜನಿಕರು ಸಂಘ ಸಂಸ್ಥೆಗಳು ಭಾಗವಹಿಸಲು ಮನವಿ ಮಾಡಿಕೊಂಡರು.
ಪೂಜಾ ಕೈಂಕರ್ಯದ ನಂತರ ಶ್ರೀರಂಗಪಟ್ಟಣಕ್ಕೆ ಕಾವೇರಿ ರಥಯಾತ್ರೆ ಹೊರಡಲಿದೆ.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಹಾಗೂ ಹಾಸನ ಜಿಲ್ಲಾ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ನಡೆಯುವ ಕಾವೇರಿ ಜಾಗೃತಿ ಯಾತ್ರೆಯ ಕರ್ನಾಟಕ ಮತ್ತು ತಮಿಳುನಾಡು ಪ್ರಾಂತದ ಸಂಚಾಲಕರು ಕಿರಿಕೊಡ್ಲಿ ಮಠದ ಶ್ರೀ ಸದಾಶಿವಸ್ವಾಮೀಜಿಯವರು,ಶಿರದನಹಳ್ಳಿ ಮಠದ ಶ್ರೀ ಸದಾಶಿವಸ್ವಾಮೀಜಿಯವರು, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಶ್ರೀಗಳು, ಶ್ರೀರಂಗಪಟ್ಟಣದ ವೇ. ಬ್ರ ಭಾನುಪ್ರಕಾಶ್ ಶರ್ಮ, ಯಾತ್ರೆಯ ಸಂಸ್ಥಾಪಕರಾದ ಶ್ರೀ ಗಣೇಶ ಸ್ವರೂಪಾನಂದ ಗಿರಿ ಸ್ವಾಮೀಜಿ, ಅಖಿಲ ಭಾರತ ಸನ್ಯಾಸಿಗಳ ಸಂಘ ಸಂಸ್ಥಾಪಕರಾದ ಶ್ರೀ ರಮಾನಂದಸ್ವಾಮೀಜಿ, ಪ್ರಮುಖರಾದ ಅಖಿಲ ಭಾರತ ಸನ್ಯಾಸಿ ಸಂಘ ಪ್ರಮುಖರಾದ ವೇದಾಂತನಂದ ಸ್ವಾಮೀಜಿ, ಆತ್ಮಾನಂದ ಸ್ವಾಮೀಜಿ, ಯಾತ್ರೆಯ ಸಂಚಾಲಕರಾದ ಆದಿತ್ಯಾನಂದ ಸ್ವಾಮೀಜಿ, ಅರಕಲಗೂಡು ತಾಲ್ಲೂಕಿನ ಶಾಸಕರು ಎ. ಮಂಜು,
ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕರು ಚಂದ್ರಮೊಹನ್,ಹಾಸನ ಜಿಲ್ಲಾ ಕಾವೇರಿ ನದಿ ಸಮಿತಿ ಅಧ್ಯಕ್ಷರು ಎಂ.ಎನ್ ಕುಮಾರಸ್ವಾಮಿ,ಖಜಾಂಚಿ ರಘು, ಪ್ರಧಾನ ಕಾರ್ಯದರ್ಶಿ ಕಾಳಬೋಯಿ, ಸಂಚಾಲಕರು ಕುಮಾರಸ್ವಾಮಿರಾವ್, ಪಿ.ಎನ್.ಟಿ ಶಿವಪ್ಪ, ಅರಕಲಗೂಡು ತಾಲ್ಲೂಕಿನ ಅಧ್ಯಕ್ಷರು ಸಿದ್ದರಾಜು, ಉಪಾಧ್ಯಕ್ಷರು ಮಹದೇವ್ ಕಾರ್ಯದರ್ಶಿ ಕೇಶವ, ಐ.ಬಿ. ಕುಮಾರ್ ಮುಂತಾದವರು ಭಾಗವಹಿಸುವರು ಎಂದು ಕಾಳಬೋಯಿ ತಿಳಿಸಿದರು.
——————-ಶಶಿಕುಮಾರ್ ಕೆಲ್ಲೂರು