ರಾಮನಾಥಪುರ – ಪಟ್ಟಣದ ಕಾವೇರಿ ನದಿ ದಂಡೆಯಲ್ಲಿರುವ ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪಕ್ಕದಲ್ಲಿರುವ ಶೃಂಗೇರಿ ಶ್ರೀ ಶಂಕರಮಠ ಶಾಖೆ ರಾಮನಾಥಪುರದ ಶ್ರೀ ಭಾರತೀತೀರ್ಥ ಕಲಾ ಭವನದಲ್ಲಿ, ಜಗದ್ಗುರು ಶ್ರೀ ಶಂಕರಭಗವತ್ಪಾದರ ಜಯಂತಿ ಮಹೋತ್ಸವ ಏಪ್ರಿಲ್ 28 ರಿಂದ ಮೇ ,2 ವರೆಗೆ ನಡೆಯಲಿದೆ ಎಂದು ರಾಮನಾಥಪುರ ಶೃಂಗೇರಿ ಶಂಕರ ಮಠದ ವ್ಯವಸ್ಥಾಪಕರು ಕೊಣನೂರು ಗಣೇಶ್ ತಿಳಿಸಿದರು.

ರಾಮನಾಥಪುರ ಶ್ರೀ ಶೃಂಗೇರಿ ಶಂಕರ ಮಠ ಶಾಖೆ ಶ್ರೀ ಭಾರತೀತೀರ್ಥ ಸಭಾ ಭವನದಲ್ಲಿ ಮಾತನಾಡಿದ ಅವರು, ಶೃಂಗೇರಿ ಶಾರದಾ ಪೀಠಾಧೀಶ್ವರರಾದ ಜಗದ್ಗುರು ಶ್ರೀ ಭಾರತೀತೀರ್ಥಮಹಾಸ್ವಾಮೀಜಿಗಳವರ ಹಾಗೂ ತತ್ಕರಕಮಲಸಂಜಾತರಾದ ಶ್ರೀ ವಿಧುಶೇಖರಭಾರತೀಮಹಾಸ್ವಾಮೀಜಿಗಳವರ ಕೃಪಾ ಅಶೀರ್ವಾದಗಳೊಂದಿಗೆ ಜಗದ್ಗುರು ಶ್ರೀ ಶಂಕರಭಗವತ್ಪಾದರ ಜಯಂತಿ ಹಾಗೂ ತತ್ವಜ್ಲಾನ ದಿನ ಅಚರಣೆ, ಮತ್ತು ಸನ್ಮಾನ ಸಮಾರಂಭ ಮತ್ತು ಮೇ 2 ರಂದು ಶುಕ್ರವಾರ ಸಂಜೆ 4-30 ಗಂಟೆಗೆ ಜಗದ್ಗುರು ಶ್ರೀ ಶಂಕರ ಭಗವಗವತ್ಪಾದರ ರಥೋತ್ಸವ ನಡೆಯಲಿದೆ – ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಮನವಿ ಮಾಡಿದರು.
– ಶಿಶಿಕುಮಾರ್ ,