ರಾಮನಾಥಪುರ-ನಮ್ಮ ರಾಷ್ಟ್ರದಲ್ಲಿ ಜಾತಿ ಗಣತಿಯ ಅಗತ್ಯವಿಲ್ಲ-ಅದೊಂದು ಜಾತಿಯ ಆಧಾರದಲ್ಲಿ ಧರ್ಮವನ್ನು ಒಡೆಯುವ ಹುನ್ನಾರ-ಶ್ರೀ ಬಸವ ರಾಜೇಂದ್ರಸ್ವಾಮೀಜಿ

ರಾಮನಾಥಪುರ-ನಮ್ಮ ರಾಷ್ಟ್ರದಲ್ಲಿ ಜಾತಿ ಗಣತಿಯ ಅಗತ್ಯವಿಲ್ಲ.ಅದೊಂದು ಜಾತಿಯ ಆಧಾರದಲ್ಲಿ ಧರ್ಮವನ್ನು ಒಡೆಯುವ ಹುನ್ನಾರ ಎಂದು ಕೆಸವತ್ತೂರು ಶ್ರೀ ಸಿದ್ಧಲಿಂಗೇಶ್ವರ ಮಠದ ಶ್ರೀ ಬಸವ ರಾಜೇಂದ್ರಸ್ವಾಮೀಜಿ ಬೇಸರ ವ್ಯಕ್ತಪಡಿಸಿದರು.

ಮಠದಲ್ಲಿ ಪತ್ರಕರ್ತರನ್ನು ಉದ್ದೇಶಿಸಿ ಮಾತನಾಡಿದ ಅವರು,ಹಿಂದಿನಿಂದಲೂ ಜಾತಿ ವ್ಯವಸ್ಥೆಯ ಹೆಸರಿನಲ್ಲಿ ಕಂದಕವನ್ನು ಸೃಷ್ಟಿ ಮಾಡಿಕೊಂಡು ಬರಲಾಗುತ್ತಿದೆ.ಆ ಕಾರಣಕ್ಕೆ ಜಾತಿ-ಜಾತಿಗಳ ಮದ್ಯೆ ವೈಮನಸ್ಸುಗಳು ಉಂಟಾಗಿ ಧರ್ಮದಲ್ಲಿ ಸಾಮರಸ್ಯ ಇಲ್ಲದಂತಾಗಿದೆ.ಜಾತಿ ವ್ಯವಸ್ಥೆಯನ್ನು ತೊಡೆದುಹಾಕಬೇಕು ಎನ್ನುವ ಸರಕಾರಗಳೇ ಜಾತಿ ಗಣತಿಯ ನಡೆಸಲು ಮುಂದಾಗುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ನಮ್ಮ ರಾಷ್ಟ್ರದಲ್ಲಿ ಜಾತಿ ವ್ಯವಸ್ಥೆಯ ಆಧಾರದಲ್ಲಿ ಸವಲತ್ತುಗಳ ನೀಡುವುದನ್ನು ನಿಲ್ಲಿಸಿ ಜನರ ಬಡತನವನ್ನು ಆದರಿಸಿ ಸೌಕರ್ಯಗಳ ನೀಡಲು ಯೋಜನೆಗಳ ರೂಪಿಸುವ ಕೆಲಸಗಳು ಆಗಬೇಕಿದೆ.ನಮ್ಮ ರಾಜ್ಯ ಹಾಗೂ ದೇಶದಲ್ಲಿ ಎಲ್ಲಾ ಜನಾಂಗಗಳಲ್ಲಿ ಕಡು ಬಡವರಿದ್ದಾರೆ.ಒಳ ಮೀಸಲಾತಿ ಜಾರಿ ವಿಷಯದಲ್ಲಿ ಬಹಳಷ್ಟು ಜನಾಂಗದವರು ವಿರೋಧ ವ್ಯಕ್ತಪಡಿಸಿದ್ದಾರೆ.

ದತ್ತಾಂಶದ ಅಧಾರದ ಮೇಲೆ ಒಳಮೀಸಲಾತಿ ಜಾರಿಮಾಡಬೇಡಿ ಎನ್ನುವುದು ಬಹುತೇಕರ ಅಭಿಪ್ರಾಯವಾಗಿದೆ.

ಇನ್ನು ಮುಂದಾದರು ನಮ್ಮನ್ನು ಆಳುವವರು ಜಾತಿ ಗಣತಿಯ ಹೆಸರಿನಲ್ಲಿ ಸಮಾಜದಲ್ಲಿ ಒಡಕು ಮೂಡಿಸುವ ಕೆಲಸದಿಂದ ಹಿಂದೆ ಸರಿದು ಎಲ್ಲರನ್ನು ಸಮಾನರನ್ನಾಗಿ ನೋಡುವ ಗುಣ ಬೆಳೆಸಿಕೊಳ್ಳಬೇಕೆಂದು ಶ್ರೀಗಳು ಆಗ್ರಹಿಸಿದರು.

—————ಶಶಿಕುಮಾರ್ ಕೆಲ್ಲೂರು

Leave a Reply

Your email address will not be published. Required fields are marked *

× How can I help you?