
ರಾಮನಾಥಪುರ-ಇದೆ ತಿಂಗಳ 30 ನೇ ತಾರೀಕಿನಂದು ನಡೆಯುವ ಐತಿಹಾಸಿಕ ರಾಮೇಶ್ವರಸ್ವಾಮಿ ದಿವ್ಯ ರಥೋತ್ಸವ ಕಾರ್ಯಕ್ರಮದಲ್ಲಿ ಭಕ್ತಾದಿಗಳಿಗೆ ಅಗತ್ಯ ಮೂಲಸೌಲಭ್ಯಗಳನ್ನು ಕೊರತೆಯಾಗದಂತೆ ಒದಗಿಸಿಕೊಡುವಂತೆ ಶಾಸಕ ಎ ಮಂಜು ಅಧಿಕಾರಿಗಳಿಗೆ ಸೂಚಿಸಿದರು.
ಶ್ರೀ ರಾಮೇಶ್ವರಸ್ವಾಮಿ ದೇವಾಲಯದ ಪ್ರಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
30 ರ ಬುದುವಾರದಂದು ದಿವ್ಯ ರಥೋತ್ಸವ ನಡೆಯಲಿದ್ದು ಇದನ್ನು ಕಣ್ತುಂಬಿಕೊಳ್ಳಲು ದೂರದ ಊರುಗಳಿಂದ ಹಾಗು ಸ್ಥಳೀಯ ಭಕ್ತರುಗಳ ದಂಡೇ ಹರಿದು ಬರಲಿದೆ.ದೇವಾಲಯದ ರಸ್ತೆಗೆ ತಳಿರು ತೋರಣ,ವಿದ್ಯುತ್ ಅಲಂಕಾರ,ಕುಡಿಯುವ ನೀರು, ಶೌಚಾಲಯ,ವಾಹನ ನಿಲುಗಡೆ, ಬಸ್ ಸೌಲಭ್ಯ,ಮಂಗಳವಾದ್ಯ ಮುಂತಾದ ವ್ಯವಸ್ಥೆಗಳನ್ನು ಕಿಂಚಿತ್ತೂ ಲೋಪವಿಲ್ಲದಂತೆ ಒದಗಿಸಬೇಕು.ಯಾವುದೇ ಲೋಪದೋಷಗಳು ಉಂಟಾಗಿ ಭಕ್ತರಿಂದ ದೂರುಗಳು ಬಂದರೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ತಾಲೂಕು ದಂಡಾಧಿಕಾರಿಗಳಾದ ಸೌಮ್ಯ, ಗ್ರಾಮ ಪಂಚಾಯತಿ ಅಧ್ಯಕ್ಷೇ ಪವನಕುಮಾರಿ ಕುಮಾರ್, ಮಾಜಿ ಅಧ್ಯಕ್ಷ ಅರ್.ಎಸ್. ನರಸಿಂಹಮೂರ್ತಿ, ಉಪಾಧ್ಯಕ್ಷರಾದ ಮಾದೇಶ್, ಸದಸ್ಯರುಗಳಾದ ಪುಪ್ಪ, ಮೀನಮ್ಮ ಮೋಹನ್, ಸುನೀಲ್, ಸಿದ್ದಯ್ಯ, ಉಪತಹಸೀಲ್ದಾರ್ ರವಿ, ಪಿ.ಎಸ್.ಐ. ಗಿರೀಶ್, ಅರೋಗ್ಯ ಇಲಾಖೆಯ, ಜಿ.ಪಿ. ಲೋಕೇಶ್, ದೇವಾಲಯದ ಮುಖ್ಯ ಅರ್ಚಕರಾದ ಶ್ರೀನಿವಾಸಯ್ಯ, ರಘು, ಮುಂತಾದವರು ಭಾಗವಹಿಸಿದ್ದರು.
——–ವರದಿ-ಶಶಿಕುಮಾರ್ ಕೆಲ್ಲೂರು