ಕೊಣನೂರು – ಮಹಾ ಮೃತ್ಯುಂಜಯ ಮಂತ್ರ, ಹಾಗೂ ಓಂ ನಮಃ ಶಿವಾಯ ಮಂತ್ರ ಇವೆರಡು ಸನಾತನ ಧರ್ಮದಲ್ಲಿ ಮಹಾ ರುದ್ರನಿಗೆ ಅರ್ಪಿತವಾದ ಪವಿತ್ರ ಮಂತ್ರಗಳಾಗಿವೆ. ಇಂತಹ ಶಿವ ಪಂಚಾಕ್ಷರಿ ಮಂತ್ರವನ್ನು ಭಕ್ತಿಯಿಂದ ಜಪಿಸಿದರೆ ನಮ್ಮ ದೇಹ, ಮನಸ್ಸು ಹಾಗೂ ಆತ್ಮವು ಶುದ್ಧವಾಗುವುದು ಹಾಗೂ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ನೀಡುವುದು ಈ ನಿಟ್ಟಿನಲ್ಲಿ ರಾಜಯೋಗ ಶಿಕ್ಷಣ ಉತ್ತಮವಾದದ್ದು ಎಂದು ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು ಎಂ.ಎನ್. ಕುಮಾರಸ್ವಾಮಿ ಹೇಳಿದರು.
ಕೊಣನೂರು ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯದ ಜ್ಞಾನಜ್ಯೋತಿ ಭವನದ ಸಭಾಂಗಣದಲ್ಲಿ ಸಭಾಂಗಣದಲ್ಲಿ 89 ನೇ ಮಹಾಶಿವರಾತ್ರಿ ಮಹೋತ್ಸವ ಕಾರ್ಯಕ್ರಮ ಉದ್ಘಾಟನೆ ನೇರವೇರಿಸಿದ ನಂತರ ಮಾತನಾಡಿದ ಅವರು ಧ್ಯಾನದ ಸಮಯದಲ್ಲಿ ಓಂ ನಮಃ ಶಿವಾಯ ಮಂತ್ರವನ್ನು ಸಾಮರಸ್ಯ ಏಕಾಗ್ರತೆ, ಹಾಗೂ ಶಕ್ತಿ ನೀಡುತ್ತದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಬ್ರಹ್ಮಾ ಕುಮಾರಿ ಸೇವಾ ಕೇಂದ್ರದ ಸಂಚಾಲಕರು ಬಿ.ಕೆ. ನಾಗರತ್ನ ಮಾತನಾಡಿ, ಶಿವರಾತ್ರಿಯ ಮಹತ್ವಿಕೆಯನ್ನು ವಿವರಿಸಿ ಶಿವನ ಅವತರಣೆಯ ಸಂದೇಶವನ್ನು ತಿಳಿಸಿದರು.

ಕೊಣನೂರು ಗ್ರಾಮ ಪಂಚಾಯತಿ ಅಧ್ಯಕ್ಷರು ಮಿಸ್ಮಾ ಧ್ವಜಾರೋಹಣ ನೇರವೇರಿಸಿ, ಶುಭ ಹಾರೈಸಿದರು.ದೀಪ ಬೆಳಗಿಸಿ ಮಾತನಾಡಿದ ಕೊಣನೂರು ಪಂಚಾಯಿತಿ ಉಪಾಧ್ಯಕ್ಷರಾದ ಜಯಮ್ಮ ಸೋಮಶೇಖರ್ ಎಲ್ಲರೂ ಶಿವನಿಂದ ಆಶೀರ್ವಾದ ಪಡೆದುಕೊಳ್ಳಿ ಎಂದು ಕರೆ ನೀಡಿದರು.
ಈ ವೇಳೆ ಪ್ರಜಾಪಿತ ಬ್ರಹ್ಮಾ ಕುಮಾರಿ ಸೇವಾ ಕೇಂದ್ರದ ಶ್ರೀ ನಾಗರಾಜ ಕೋಟೆಕಾರ್, ಶರಣ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರು ಅಮೃತೇಶ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ತಾಲ್ಲೂಕು ಅಧ್ಯಕ್ಷರು ರಾಮನಾಥಪುರ, ಸಿದ್ದಯ್ಯ, ಸೋಮಶೇಖರ್, ಸೂರ್ಯನಾರಾಯಣ, ಹೆಗ್ಗಡಹಳ್ಳಿ ರಾಚಪ್ಪ, ಚಂದ್ರಣ್ಣ, ಭಾಗ್ಯ, ರವಿ, ಮಂಜಣ್ಣ, ಪ್ರಸಾದ್ ಗೀತಮ್ಮ, ಧನಲಕ್ಷ್ಮಿ, ಗಾಯತ್ರಿ ನಾಗರತ್ನ ಮುಂತಾದವರು ಭಾಗವಹಿಸಿದ್ದರು.