ರಾಮನಾಥಪುರ-ಪಟ್ಟಣದ ರಾಘವೇಂದ್ರಸ್ವಾಮಿಗಳ ಮಠದ ಆವರಣದಲ್ಲಿ ಭಕ್ತರ ಅನುಕೂಲಕ್ಕಾಗಿ ಭೋಜನ ಶಾಲೆ ಮತ್ತು ಹತ್ತಾರು ರೂಂಗಳ ಕಾಮಗಾರಿ ಪಾರಂಭವಾಗಿದೆ ಎಂದು ಶ್ರೀಮಠದ ವ್ಯವಸ್ಥಾಪಕ ಶ್ರೀ ವೇ. ಕನಕಾಚಾರ್ಯರು ತಿಳಿಸಿದರು.
ರಾಮನಾಥಪುರ ಶ್ರೀ ರಾಘವೇಂದ್ರಸ್ವಾಮಿ ಮಠದಲ್ಲಿ ಪೂಜಾ ಕೈಂಕರ್ಯದ ನಂತರ ಮಾತನಾಡಿದ ಅವರು, ಶ್ರೀ ರಾಘವೇಂದ್ರಸ್ವಾಮಿಗಳ ಹೆಸರಿನಲ್ಲಿರುವ ಜಾಗದಲ್ಲಿ ಭಕ್ತರಿಗಾಗಿ ವಸತಿಗೃಹ ಹಾಗೂ ಭೋಜನಶಾಲೆಯ ನಿರ್ಮಾಣಕ್ಕಾಗಿ ಇತ್ತೀಚೆಗೆ ರಾಮನಾಥಪುರಕ್ಕೆ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿ ಪರಮಪೂಜ್ಯ ಡಾ ಶ್ರೀ ಸುಬುಧೇಂದ್ರ ತೀಥ೯ ಸ್ವಾಮೀಜಿಯವರು, ಇಲ್ಲಿಯ ಇತಿಹಾಸ ಪ್ರಸಿದ್ಧ ಸುಬ್ರಹ್ಮಣ್ಯ ದೇವಾಲಯಕ್ಕೆ ಭೇಟಿ ನೀಡಿ, ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದ ಬಲಭಾಗದ ರಸ್ತೆ ಪಕ್ಕದಲ್ಲಿರುವ ಕಾವೇರಿ ನದಿ ತೀರದಲ್ಲಿ ಶ್ರೀ ರಾಘವೇಂದ್ರಸ್ವಾಮಿಗಳು ಚಾತುರ್ಮಾಸೆ ಮಾಡಿದ ಪುಣ್ಯ ಸ್ಥಳವಾಗಿದ್ದು, ಸ್ಥಳದಲ್ಲಿ ಬಂದಂತಹ ಯಾತ್ರಿಕರಿಗೆ ಅನುಕೂಲವಾಗುವಂತೆ ಹಾಗೂ ಶ್ರೀ ರಾಘವೇಂದ್ರ ಸ್ವಾಮಿಗಳವರು ಪೂಜಿಸುತ್ತಿದ್ದ ಪ್ರಾಣ ದೇವರನ್ನು ಇಲ್ಲಿ ಪ್ರತಿಷ್ಠಾಪಿಸಿ ಭಕ್ತರಿಗೆ ಅನುಕೂಲ ಮಾಡಿಕೊಡುವ ಹಿನ್ನೆಲೆಯಲ್ಲಿ, ಮಾಜಿ ಸಚಿವರು ಹಾಗೂ ಶಾಸಕರು ಎ. ಮಂಜು ಮತ್ತು ಸ್ಥಳೀಯ ಭಕ್ತಾದಿಗಳ ಸಹಕಾರದೊಂದಿಗೆ ನಿರ್ಮಾಣ ಮಾಡಲಾಗುವುದು ಎಂದು ಶ್ರೀಗಳು ತಿಳಿಸಿದ್ದಾರೆ ಎಂದ ಅವರು, ಈ ಸ್ಥಳದಲ್ಲಿ ಈವಾಗ ಕಾಮಗಾರಿ ಪ್ರಾರಂಭಿಸಲಾಗಿದೆ.
ಈ ಕಾಮಗಾರಿಗೆ ಹೆಚ್ಚಿನ ಸಹಾಯ ಸಹಕಾರ ನೀಡಿ ಈ ಕಾಮಗಾರಿ ಬೇಗ ಮುಗಿಸಲು ಭಕ್ತರು ಸಹಾಯ ಮಾಡುವಂತೆ ಶ್ರೀಮಠದವೇ ಕನಕಾಚಾರ್ಯರು ಕನಕಾಚಾರ್ಯರು ಮನವಿ ಮಾಡಿದರು.