ರಾಮನಾಥಪುರ-ಸಮಾಜ ಸೇವೆ-ಮಾಡಲು-ನಿಸ್ವಾರ್ಥ ಕರುಣೆ, ಸಾಮಾಜಿಕ ಸೇವಾ-ಮನೋಭಾವ ಮುಖ್ಯ-ಶ್ರೀ ಶಿವಸುಜ್ಲಾನತೀರ್ಥ ಮಹಾಸ್ವಾಮಿಗಳು

ರಾಮನಾಥಪುರ- ಸಮಾಜದ ಏಳಿಗೆಗೆ ಸೇವಾ ಮನೋಭಾವದಿಂದ ತೊಡಗಬೇಕು. ಸಮಾಜ ಸೇವೆ ಮಾಡಲು ನಿಸ್ವಾರ್ಥ ಕರುಣೆ, ಸಾಮಾಜಿಕ ಸೇವಾ ಮನೋಭಾವ ಮುಖ್ಯ ಎಂದು ಅರೇಮಾದನಹಳ್ಳಿ ಮಠದ ಶ್ರೀ ವಿಶ್ವಕರ್ಮ‌ಪೀಠದ ಪರಮಪೂಜ್ಯ ಶ್ರೀ ಶಿವಸುಜ್ಲಾನತೀರ್ಥ ಮಹಾಸ್ವಾಮಿಗಳು ಹೇಳಿದರು.

ಅರೇಮಾದನಹಳ್ಳಿ ಮಠದ ಶ್ರೀ ವಿಶ್ವಕರ್ಮ ಪೀಠ ಪರಮಪೂಜ್ಯ ಅನಂತಶ್ರೀ ವಿಭೂಷಿತ ಶ್ರೀಮದ್ ಆದಿ ಜಗದ್ಗುರು ಶ್ರೀ ಸುಜ್ಞಾನಪ್ರಭು ಮಹಾಸ್ವಾಮೀ ಭಗವದ್ಪಾದರಂಗಳವರ ಜಯಂತಿ ಮಹೋತ್ಸವ ಹಾಗೂ ಸಾಮೂಹಿಕ ಉಪನಯನ, ಅರೋಗ್ಯ ಶಿಬಿರ ಮಹೋತ್ಸವ ಇಂದು ಶುಕ್ರವಾರ ಅರೇಮಾದನಹಳ್ಳಿ ವಿಶ್ವ ಬ್ರಾಹ್ಮಣ ಮಹಾಸಂಸ್ಥಾನ ಮಠದ ಅವರಣದಲ್ಲಿ ನಡೆದ‌ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಇಂತಹ ಧಾರ್ಮಿಕ ಕಾರ್ಯಕ್ರಮಗಳಲ್ಲಿ‌ ಅರೋಗ್ಯ ಶಿಬಿರ, ಉಪನಯನ ಕಾರ್ಯಕ್ರಮದಲ್ಲಿ‌ ಹೆಚ್ಚಿನ ಪ್ರಮಾಣದಲ್ಲಿ ಭಕ್ತರು ಭಾಗವಹಿ‌ ಕಾರ್ಯಕ್ರಮ ಯಶಸ್ವಿಯಾಗಿರುವುದಕ್ಕೆ ಅಭಿನಂದನೆಗಳನ್ನು ತಿಳಿಸಿದರು. ‌


ಈ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಮಠದ ಜಗದ್ಗುರುಗಳಾದ ಶ್ರೀ ಶಿವಾನಂದಭಾರತಿ ಮಹಾಸ್ವಾಮಿಗಳು, ಕೆಸವತ್ತೂರು ಮಠದ ಶ್ರೀ ಬಸವರಾಜೇಂದ್ರ ಸ್ವಾಮೀಜಿ ಹೊಸಪೇಟೆ ಶ್ರೀ ಭದ್ರಕಾಳಿ ಶಕ್ತಿ ಪೀಠದ ಶ್ರೀ ವೀರ ಬ್ರಹ್ಮಚಾರಿ ಗುರೂಜಿ ಸಾನಿಧ್ಯ ವಹಿಸಿದ್ದರು.
ಮಾಜಿ ಶಾಸಕ ಡಾ. ಎ. ಟಿ. ರಾಮಸ್ವಾಮಿ ಸಭಾ ಕಾರ್ಯಕ್ರಮ ಉದ್ಘಾಟನೆ ಮಾಡಿದರು.


ಮುಖ್ಯ ಅತಿಥಿಗಳಾಗಿ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಮಹಾಪೂರದ ಶ್ರೀ ರಾಮಪ್ಪ ಕೃಷ್ಣಪ್ಪ ಬಡಿಗಾರ್,
ಕರ್ನಾಟಕ ಸರ್ಕಾರದ ವಿಶ್ವಕರ್ಮ ಸಮಾಜದ ಆಡಳಿತಾಧಿಕಾರಿ ಕೆ ಎಸ್ ಪ್ರಭಾಕರ್, ಸನ್ಮಾನ್ಯ ರಾಮಕೃಷ್ಣ ಆಚಾರ್ಯ ಪ್ರಗತ ವಿಶ್ವಕರ್ಮ ಸಮುದಾಯದ ಮುಖಂಡರು ಮುಂತಾದವರು ಭಾಗವಹಿಸಿದ್ದರು.

-ಶಶಿಕುಮಾರ್‌

Leave a Reply

Your email address will not be published. Required fields are marked *

× How can I help you?