ಚಿಕ್ಕಮಗಳೂರು: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಚಿಕ್ಕಮಗಳೂರು ಹಾಗೂ ಪ್ರತಿಬಿಂಬ ಯುವ ಪ್ರತಿಷ್ಠಾನ (ರಿ.), ಮೂಡಿಗೆರೆ ಇವರ ಸಹಯೋಗದೊಂದಿಗೆ ಫೆಬ್ರವರಿ ೦6 ರಂದು ಮೂಡಿಗೆರೆ ತಾಲೂಕಿನ ಎತ್ತಿನಭುಜಕ್ಕೆ ಚಾರಣ ಪರಿಸರ ಶಿಬಿರವನ್ನು ಏರ್ಪಡಿಸಲಾಗಿದೆ.
ಆಸಕ್ತರು ತಮ್ಮ ಹೆಸರನ್ನು ಫೆಬ್ರವರಿ ೦5 ರೊಳಗೆ ಮೂಡಿಗೆರೆ ಪ್ರತಿಬಿಂಬ ಯುವ ಪ್ರತಿಷ್ಠಾನ (ರಿ.), ಅಧ್ಯಕ್ಷ ಸುನಿಲ್ (ಮೊ.ಸಂ.8546879303) ಇವರನ್ನು ಸಂಪರ್ಕಿ ನೊಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರ ಕಛೇರಿಯನ್ನು ಕಛೇರಿ ವೇಳೆಯಲ್ಲಿ ಸಂಪರ್ಕಿಬಹುದಾಗಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.