ಕೆ.ಆರ್.ಪೇಟೆ- ತಾಲ್ಲೂಕಿನ ಅಕ್ಕಿಹೆಬ್ಬಾಳು ಹೋಬಳಿಯ ಮಂದಗೆರೆ ಗ್ರಾಮ ಪಂಚಾಯಿತಿಯ ನೂತನ ಉಪಾಧ್ಯಕ್ಷರಾಗಿ ಆಲೇನಹಳ್ಳಿಯ ರೇಖಾಭಾಸ್ಕರ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಈ ಹಿಂದಿನ ಉಪಾಧ್ಯಕ್ಷರಾದ ಪಲ್ಲವಿಅರುಣ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಇಂದು ಚುನಾವಣೆ ನಿಗಧಿಯಾಗಿತ್ತು. ಉಪಾಧ್ಯಕ್ಷ ಸ್ಥಾನ ಬಯಸಿ ರೇಖಾಭಾಸ್ಕರ್ ಅವರನ್ನು ಹೊರತು ಪಡಿಸಿ ಬೇರೆ ಯಾರೂ ಸಹ ನಾಮಪತ್ರವನ್ನು ಸಲ್ಲಿಸದೇ ಇರುವ ಕಾರಣ ಅವಿರೋಧ ಆಯ್ಕೆ ನಡೆಯಿತು. ಚುನಾವಣಾಧಿಕಾರಿಯಾಗಿ ಸಿಡಿಪಿಓ ಅರುಣ್ ಕುಮಾರ್ ಕಾರ್ಯನಿರ್ವಹಿಸಿದರು. ಸಹ ಚುನಾವಣಾಧಿಕಾರಿಗಳಾಗಿ ತಾ.ಪಂ.ವ್ಯವಸ್ಥಾಪಕ ಅನಿಲ್ ಬಾಬು, ಪಿಡಿಓ ಸುವರ್ಣ ಕಾರ್ಯನಿರ್ವಹಿಸಿದರು.
ನೂತನ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ರೇಖಾಭಾಸ್ಕರ್ ಮಾತನಾಡಿ, ನನಗೆ ಸಿಕ್ಕಿರುವ ಅಧಿಕಾರದ ಅವಧಿಯಲ್ಲಿ ಗ್ರಾಮ ಪಂಚಾಯಿತಿ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ. ಗ್ರಾ.ಪಂ.ಅಧ್ಯಕ್ಷರು, ಪಿಡಿಓ ಸೇರಿದಂತೆ ಎಲ್ಲಾ ನೌಕರರು ಹಾಗೂ ಸದಸ್ಯರ ಸಹಕಾರದೊಂದಿಗೆ ಗ್ರಾ.ಪಂ.ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೆ ಕುಡಿಯುವ ನೀರು, ಬೀದಿ ದೀಪ, ಚರಂಡಿ ವ್ಯವಸ್ಥೆ ಸೇರಿದಂತೆ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಪಿಡಿಓ ಸುವರ್ಣ ಅವರು ನೂತನ ಉಪಾಧ್ಯಕ್ಷೆ ರೇಖಾ.ಎಂ.ಭಾಸ್ಕರ್ ಅವರನ್ನು ಅಭಿನಂದಿಸಿ ಮಾತನಾಡಿ ನಮ್ಮ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾರ್ವಜನಕರು ಜಾಬ್ ಕಾರ್ಡ್ ಮಾಡಿಸಿಕೊಂಡು ವಯಕ್ತಿಕ ಕಾಮಗಾರಿಗಳನ್ನು ಕ್ರಿಯಾಯೋಜನೆಗೆ ಸೇರಿಸಿಕೊಂಡು ಮಾಡಿಕೊಳ್ಳಲು ಜಿಲ್ಲಾ ಪಂಚಾಯತ್ ಹಾಗೂ ತಾಲ್ಲೂಕು ಪಂಚಾಯತ್ ವತಿಯಿಂದ ಅವಕಾಶ ಕಲ್ಪಿಸಲಾಗಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಈ ವೇಳೆ ನೂತನ ಉಪಾಧ್ಯಕ್ಷೆ ರೇಖಾ.ಎಂ.ಭಾಸ್ಕರ್ ಅವರನ್ನು ಪಿಡಿಓ ಸುವರ್ಣ, ಗ್ರಾ.ಪಂ.ಸದಸ್ಯರಾದ ಎಂ.ಬಿ.ಚೆಲುವೇಗೌಡ, ಎಂ.ಕೆ.ಮೋಹನ್, ಎಲ್.ಎಂ.ಮಹಾದೇವಿ, ವಿಜಯ್ ಕುಮಾರ್.ಜಿ.ಎಂ, ನಂದಿನಿ.ಕೆ.ಎಸ್, ಅನುಕುಮಾರ್, ಜಯಲಕ್ಷ್ಮಿ, ಮಂಗಳ, ಲಕ್ಷ್ಮಮ್ಮ, ದೊಡ್ಡೇಗೌಡ, ಮಂಜೇಗೌಡ, ನಿಂಗಮ್ಮ, ಕೆ.ಎಸ್.ಜಗದೀಶ್, ಅಶ್ವತ್ಥಾಚಾರ್, ಪಲ್ಲವಿ, ಕಾಮಾಕ್ಷ್ಮಮ್ಮ, ಕೃಷ್ಣಜೋಗಿ, ಕಾವೇರಿ.ಎಂ.ಕೆ, ಎ.ಆರ್.ನಿಂಗರಾಜು, ಮುಖಂಡರಾದ ನಿಂಗರಾಜು, ಮಹೇಶ್, ಚಂದ್ರಶೇಖರ್, ಚೆಲುವಣ್ಣ, ಕಾರ್ತೀಕ್, ಮಂಜೇಗೌಡ, ಭಾಸ್ಕರ್, ಸುರೇಶ್, ಲಕ್ಷ್ಮೀನಾರಾಯಣ್, ಶೇಖರ್, ವೆಂಕಟೇಶ್ ಮತ್ತಿತರರು ಅಭಿನಂದಿಸಿದರು.
-ಶ್ರೀನಿವಾಸ್ ಆರ್.