ಅರಕಲಗೂಡು – ತಾಲೂಕು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ ) ಅರಕಲಗೂಡು ತಾಲೂಕು ಮಲ್ಲಿಪಟ್ಟಣ ವಲಯದ ದೊಡ್ಡ ಬೆಮ್ಮತಿ ಕಾರ್ಯಕ್ಷೇತ್ರದಲ್ಲಿ ಗ್ರಾಮ ಸುಭಿಕ್ಷಾ ಕಾರ್ಯಕ್ರಮದ ಪ್ರಯುಕ್ತ ಶ್ರೀ ಬಸವೇಶ್ವರ ದೇವಸ್ಥಾನದಲ್ಲಿ ಬಸವೇಶ್ವರ ದೇವರಿಗೆ ರುದ್ರಾಭಿಷೇಕ ಪೂಜೆ ಸಲ್ಲಿಸಲಾಯಿತು.
ಸಭಾ ಕಾರ್ಯಕ್ರಮವನ್ನು ಪರಮ ಪೂಜ್ಯ ಶ್ರೀ ಬಸವ ರಾಜೇಂದ್ರಸ್ವಾಮೀಜಿ ಕೆಸವತ್ತೂರು ಮಠ ಇವರು ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿ ಆಶೀರ್ವಚನ ನೀಡಿದರು.
ಕೊಡಗು ಜಿಲ್ಲೆಯ ಗೌರವಾನ್ವಿತ ಜಿಲ್ಲಾ ನಿರ್ದೇಶಕರು ಶ್ರೀಮತಿ ಲೀಲಾವತಿ ಮೇಡಂರವರು ಯೋಜನೆಯ ಕಾರ್ಯಕ್ರಮಗಳ ಬಗ್ಗೆ ಸಮಗ್ರ ಮಾಹಿತಿ ನೀಡಿದರು.

ವೀರ ಶೈವ ಲಿಂಗಾಯತ ಜನೋಪಯೋಗಿ ಸೌಹಾರ್ದ ಸಹಕಾರಿ ಬ್ಯಾಂಕ್ ನ ಉಪಾಧ್ಯಕ್ಷರು ಲಿಂಗರಾಜಯ್ಯ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಶಿವಲಿಂಗೇಗೌಡ, ಬೆಮ್ಮತ್ತಿ ಒಕ್ಕೂಟದ ಅಧ್ಯಕ್ಷ ಶಾಂತಮ್ಮ, ಪೂಜಾ ಸಮಿತಿ ಅಧ್ಯಕ್ಷರು ಕೃಷ್ಣಚಾರಿ, ಮದ್ಯಾವರ್ಜನಾ ಶಿಬಿರದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ತಿಮ್ಮೆಗೌಡ್ರು, ತಾಲೂಕಿನ ಯೋಜನಾಧಿಕಾರಿ ಜಿನ್ನಪ್ಪ ಎಸ್ ಬಿ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಪ್ನ ಉಪಸ್ಥಿತರಿದ್ದರು.