ಸಕಲೇಶಪುರ-ತಾಲ್ಲೂಕಿನ ಕುರಭತ್ತೂರು ಗ್ರಾಮ ಪಂಚಾಯಿತಿಯ ಹಡ್ಲಹಳ್ಳಿ ಹೊರಟ್ಟಿಯ ಪರಿಶಿಷ್ಟ ಜಾತಿಯ 4 ಮನೆ ಹಾಗೂ ಎರಡು ಇತರೆ ಜಾತಿಯ ಮನೆಗಳು ಸೇರಿದಂತೆ ಆರು ಮನೆಗಳಿಗೆ ಇದುವರೆಗೂ ವಿದ್ಯುತ್ ವ್ಯವಸ್ಥೆಯನ್ನು ಮಾಡಿಕೊಡದೆ ಸತಾಯಿಸುತ್ತಿದ್ದ ಚೆಸ್ಕಾಂ ಅಧಿಕಾರಿಗಳ ವಿರುದ್ಧ ಇಂದು ವಳಲಹಳ್ಳಿ ಕೂಡಿಗೆಯಲ್ಲಿ ಹಡ್ಲಹಳ್ಳಿ ಹೊರಟ್ಟಿ ಗ್ರಾಮಸ್ಥರು ಹಾಗೂ ಜಿಲ್ಲಾ ದಲಿತ ಸಂಘರ್ಷ ಸಮಿತಿ, ಮಲೆನಾಡ ರಕ್ಷಣಾ ಸೇನೆ ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಿಂದ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಆರು ಕುಟುಂಬಗಳು 18 ವರ್ಷದಿಂದ ಹಡ್ಲಹಳ್ಳಿ ಹೊರಟ್ಟಿ ಗ್ರಾಮದಲ್ಲಿ ವಾಸವಾಗಿದ್ದು ಕೇವಲ ಒಂಬತ್ತು ಕಂಬಗಳನ್ನು ಹಾಕಿದ್ದರೆ ಈ ಮನೆಗೆ ವಿದ್ಯುತ್ ಸಂಪರ್ಕ ಸಿಗುತ್ತಿತ್ತು. ಈ ಗ್ರಾಮಸ್ಥರೆಲ್ಲ ಅನೇಕ ಬಾರಿ ಹಿಂದಿನ ಶಾಸಕರು ಹಾಗೂ ಸಂಬಂಧಪಟ್ಟ ಅಧಿಕಾರಿಗಳಿಗೆ ಅನೇಕ ಬಾರಿ ಮನವಿ ಪತ್ರವನ್ನು ಕೊಟ್ಟಿದ್ದರು ಕೂಡ ಯಾವುದೇ ರೀತಿಯ ಪ್ರಯೋಜನವಾಗಿಲ್ಲ. ಈ ಮನೆಗಳ ಮಕ್ಕಳು ಸೀಮೆಎಣ್ಣೆ ದೀಪದ ಕೆಳಗೆ ಓದುವಂತಹ ಪರಿಸ್ಥಿತಿ ಎದುರಾಗಿತ್ತು.ಇದರ ಬಗ್ಗೆ ಮಾಧ್ಯಮದಲ್ಲೂ ಕಳೆದ ಒಂದುವರೆ ವರ್ಷದ ಹಿಂದೆ ವರದಿ ಮಾಡಲಾಗಿತ್ತು. ಆದರೂ ಯಾವ ಜನಪ್ರತಿನಿಧಿಗಳಾಗಲಿ ಅಥವಾ ಅಧಿಕಾರಿಗಳಾಗಲಿ ಇದರ ಬಗ್ಗೆ ಗಮನಹರಿಸಿರಲಿಲ್ಲ.ಅಲ್ಲದೆ ಈಗ 17000 ಡೆಪಾಸಿಟ್ ಹಣವನ್ನು ಕೇಳುತ್ತಿದ್ದು ಈ ಹಿಂದುಳಿದ ಬಡ ಕುಟುಂಬದವರಿಗೆ ಹಣದ ಸಮಸ್ಯೆ ಇದ್ದ ಕಾರಣ ಇಂದು ತಮ್ಮ ಮನೆಗಳಿಗೆ ವಿದ್ಯುತ್ ಸಂಪರ್ಕಕ್ಕಾಗಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದರು.
ಗ್ರಾಮಸ್ಥರ ಮನೆಗೆ ವಿದ್ಯುತ್ ಸಂಪರ್ಕಕ್ಕಾಗಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಮಲೆನಾಡ ಸೇನೆಯವರು ಬೆಂಬಲಕ್ಕೆ ನಿಂತು ಗ್ರಾಮಸ್ಥರ ಸಹಕಾರದೊಂದಿಗೆ ಇಂದು ಬೃಹತ್ ಮಟ್ಟದ ಪ್ರತಿಭಟನೆ ಮಾಡಿ,ಸ್ಥಳಕ್ಕೆ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಹರೀಶ್ ಅವರನ್ನು ಕರೆಸಿಕೊಂಡು ಗ್ರಾಮಸ್ಥರ ಸಮಸ್ಯೆ ಬಗ್ಗೆ ತಿಳಿಸಿ ಮನೆಗಳಿಗೆ ವಿದ್ಯುತ್ ಕಂಬವನ್ನು ತರಿಸಿ ಹಾಕುವವರೆಗೂ ಪ್ರತಿಭಟನೆ ನಡೆಸುವ ಮಾಹಿತಿ ನೀಡಲಾಯಿತು.
ಕೊನೆಗೂ ಪ್ರತಿಭಟನಾಕಾರರಿಗೆ ಮಣಿದ ಸಹಾಯಕ ಕಾರ್ಯಪಾಲಕ ಅಭಿಯಂತರಾದ ಹರೀಶ್ ಮಧ್ಯಾಹ್ನದ ಹೊತ್ತಿಗೆ ಗ್ರಾಮದ ಕುಟುಂಬದ ವಿದ್ಯುತ್ತಿಗಾಗಿ 10 ಕಂಬಗಳನ್ನು ತರಿಸುವ ಮೂಲಕ ಒಂದು ವಾರದೊಳಗೆ ಆ ಮನೆಗಳಿಗೆ ವಿದ್ಯುತ್ ಕೊಡಿಸುವ ಕೆಲಸಕ್ಕೆ ಒಪ್ಪಿಕೊಂಡರು.ಇದರಿಂದ ಗ್ರಾಮಸ್ಥರು ಹಾಗೂ ಸಂಘಟನೆಗಾರರು ಪ್ರತಿಭಟನಗಾರರು ಸಹಾಯಕ ಕಾರ್ಯಪಾಲಕ ಅಭಿಯಂತರಾದ ಹರೀಶ್ ಅವರಿಗೆ ಮನವಿ ಕೊಡುವ ಮೂಲಕ ಯಶಸ್ವಿ ಪ್ರತಿಭಟನೆಯನ್ನು ನಿಲ್ಲಿಸಿದರು.
ಮಲೆನಾಡ ರಕ್ಷಣಾ ಸೇನೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ಹಾಗೂ ಕುರಭತ್ತೂರು ಹಾಗೂ ವಳಲಹಳ್ಳಿ ಬೆಳೆಗಾರರ ಸಂಘದವರು ಪ್ರತಿಭಟನೆಯ ಮೂಲಕ ಅಧಿಕಾರಿಗಳ ಗಮನ ಸೆಳೆದು ಈ ನೊಂದ ಕುಟುಂಬಗಳಿಗೆ ವಿದ್ಯುತ್ ಕೊಡಿಸುವ ಮೂಲಕ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂದರ್ಭದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ಸಂಚಾಲಕರಾದ ವಳಲಹಳ್ಳಿ ವೀರೇಶ್, ವಳಲಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷರಾದ ರುದ್ರೇಶ್, ಸಾಮಾಜಿಕ ಹೋರಾಟಗಾರರಾದ ಬೊಮ್ಮನಕೆರೆ ವಸಂತ್, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ಅಧ್ಯಕ್ಷರಾದ ರಮೇಶ್ ಪೂಜಾರಿ, ಮಲೆನಾಡ ರಕ್ಷಣಾ ಸೇನೆ ಅಧ್ಯಕ್ಷರಾದ ಸಾಗರ್, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಸಹ ಕಾರ್ಯದರ್ಶಿ ಕರಡಿಗಾಲ ಹರೀಶ್, ನಿಂಗಯ್ಯ, ವಳಲಹಳ್ಳಿ ಜಂಟಿ ಕಾರ್ಯದರ್ಶಿಯಾದ ಬಿ. ಎಂ ವಿಜಯ್ ಕುಮಾರ್, ಸಂಘಟನಾ ಕಾರ್ಯದರ್ಶಿ ಅನಿಲ್ ಜಾತಹಳ್ಳಿ,ಸೇರಿದಂತೆ ಸಂಘದ ಕಾರ್ಯದರ್ಶಿಗಳು ಹಾಗೂ ಪದಾಧಿಕಾರಿಗಳು ಸುತ್ತಮುತ್ತಲಿನ ಗ್ರಾಮಸ್ಥರು ನೆರೆದಿದ್ದರು.