ಸಕಲೇಶಪುರ:ಅಕ್ರಮ ವಲಸಿಗರು ಇಲ್ಲಿಗೆ ಬಂದು ಅನ್ನ ಹುಟ್ಟಿಸಿಕೊಂಡದ್ದೇನೋ ಸರಿ,ಈಗ ಬೆಳೆದು ಬಲಿಷ್ಟರಾಗಿ ಸ್ಥಳೀಯ ವ್ಯಾಪಾರಿಗಳ ಅನ್ನವನ್ನೇ ಕಸಿಯುವ ಹಂತಕ್ಕೆ ಬೆಳೆದಿದ್ದು ಕೂಡಲೇ ತಾಲೂಕು ಆಡಳಿತ ಅವರ ಅಕ್ರಮ ಆಟಾಟೋಪಗಳಿಗೆ ಕಡಿವಾಣ ಹಾಕಲು ಮುಂದಾಗಬೇಕೆಂದು ಮಲೆನಾಡು ರಕ್ಷಣಾ ಸೇನೆಯ ರಾಜ್ಯಾಧ್ಯಕ್ಷ ಡಾ.ಸಾಗರ್ ಜಾನೇಕೆರೆ ಆಗ್ರಹಿಸಿದರು.
ನಗರದಲ್ಲಿ ಅಕ್ರಮ ವಲಸಿಗರ ಅಕ್ರಮ ಚಟುವಟಿಕೆಗಳ ವಿರುದ್ಧ ತಾಲೂಕು ಆಡಳಿತದ ಗಮನ ಸೆಳೆಯಲು ಮಲೆನಾಡು ರಕ್ಷಣಾ ಸೇನೆಯ ವತಿಯಿಂದ ಹಮ್ಮಿಕೊಂಡಿದ್ದ ಪ್ರತಿಭಟನಾ ಸಭೆಯಲ್ಲಿ ಅವರು ಮಾತನಾಡಿದರು.
ಕಾಫೀ ತೋಟಗಳಲ್ಲಿ ಹಾಗು ಬೇರೆಡೆ ಉದ್ಯೋಗ ಅರಸಿ ಬಂದಿರುವ ಅಸ್ಸಾಂ ಎಂಬ ಹಣೆಪಟ್ಟಿಯ ವಲಸಿಗರು ತಾಲೂಕಿನಾದ್ಯಂತ ಪರವಾನಿಗೆ ರಹಿತ ವ್ಯಾಪಾರ ವಹಿವಾಟುಗಳಲ್ಲಿ ತೊಡಗಿಕೊಂಡು ಸ್ಥಳೀಯ ಬಡ ವ್ಯಾಪಾರಿಗಳ ಬದುಕಿಗೆ ಕೊಳ್ಳಿ ಇಟ್ಟಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು.
ಇಷ್ಟೇ ಅಲ್ಲದೆ ವಾರದ ಸಂತೆಗಳ ದಿನವೂ ಅಕ್ರಮ ವಲಸಿಗ ವ್ಯಾಪಾರಿಗಳ ಹಾವಳಿ ತೀವ್ರವಾಗಿದೆ.ಹೀಗೆಯೇ ಮುಂದುವರೆದರೆ ಸಂತೆಗಳಲ್ಲಿ ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಹೊಟ್ಟೆ ಹೊರೆಯುವ ಸ್ಥಳೀಯ ವ್ಯಾಪಾರಿಗಳ ಸ್ಥಿತಿ ಅಯೋಮಯವಾಗಲಿದೆ.ಈ ಕೂಡಲೇ ಸ್ಥಳೀಯ ಆಡಳಿತ ಹಾಗು ಪೊಲೀಸು ಇಲಾಖೆ ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು.ಜೊತೆಗೆ ಅವರ ದಾಖಲಾತಿಗಳ ಪರಿಶೀಲಿಸಿ ಕಾನೂನಿನ ಅಡಿಯಲ್ಲಿ ಕ್ರಮಕ್ಕೆ ಮುಂದಾಗುವಂತೆ ಸಾಗರ್ ಜಾನಕೆರೆ ಒತ್ತಾಯಿಸಿದರು.
ನಮ್ಮ ಸಂಘಟನೆ ಮೊದಲಿನಿಂದಲೂ ಅಕ್ರಮ ವಲಸಿಗರು ಮುಳುವಾಗಲಿದ್ದಾರೆ ಎಂಬ ಎಚ್ಚರಿಕೆಯ ಸಂದೇಶವನ್ನು ನೀಡುತ್ತಲೇ ಬಂದಿತ್ತು.ಅದನ್ನು ತಾಲೂಕು ಆಡಳಿತ ವ್ಯವಸ್ಥೆ ಹಾಗು ಅಕ್ರಮ ವಲಸಿಗರನ್ನು ಕೆಲಸಕ್ಕಾಗಿ ಇಟ್ಟುಕೊಂಡಿರುವ ಕಾಫೀ ತೋಟಗಳ ಮಾಲೀಕರು ಗಂಭೀರವಾಗಿ ಪರಿಗಣಿಸದೆ ಹೋದ ಪರಿಣಾಮವನ್ನು ನಾವಿಂದು ನೋಡುತ್ತಿದ್ದೇವೆ.
ಈಗ ಸಮಸ್ಯೆ ಪ್ರಾರಂಭವಾಗಿದ್ದು ಇದು ದೊಡ್ಡ ಮಟ್ಟಕ್ಕೆ ಬೆಳೆದು ಸ್ಥಳೀಯರ ಹಾಗು ಅಕ್ರಮ ವಲಸಿಗರ ಮದ್ಯೆ ಸಂಘರ್ಷ ಏರ್ಪಡುವ ಮುಂಚೆ ಸಂಬಂಧಪಟ್ಟವರು ಗಮನ ಹರಿಸಬೇಕಾಗಿದೆ ಎಂದು ಅವರು ಎಚ್ಚರಿಸಿದರು.
ಮಾನವ ಸರಪಳಿಯನ್ನು ನಿರ್ಮಿಸಲಾಯಿತು-ಪಟ್ಟಣದಲ್ಲಿ ಜಾತಾ ನಡೆಸಿ ಸಾರ್ವಜನಿಕರಲ್ಲಿ ಎಚ್ಚರಿಕೆ ಮೂಡಿಸಿ ಉಪವಿಭಾಗಾಧಿಕಾರಿಗಳಿಗೆ ಮನವಿ ಪತ್ರವನ್ನು ನೀಡಲಾಯಿತು.
ಅಕ್ರಮ ವಲಸಿಗರ ಉಪಟಲಗಳು ರಾಜ್ಯದ ಬಹುತೇಕ ಭಾಗಗಳಲ್ಲಿ ಪ್ರಾರಂಭವಾಗಿವೆ.ಸ್ಥಳೀಯ ಧರ್ಮವ್ಯಾದಿಗಳ ಕುಮ್ಮಕ್ಕಿನಿಂದ ಅವರು ವೀಪರೀತವೆನ್ನುವಷ್ಟರ ಮಟ್ಟಿಗೆ ವಿವಿಧ ವಿಭಾಗಗಳಲ್ಲಿ ಪ್ರಾಭಲ್ಯ ಸಾದಿಸಲು ಪ್ರಾರಂಭಿಸಿದ್ದಾರೆ.
ಸರಿಯಾದ ಸಮಯದಲ್ಲಿ ಸಾಗರ್ ಜಾನಕೆರೆಯವರು ಅಕ್ರಮ ವಲಸಿಗರ ವಿರುದ್ಧ ಧ್ವನಿ ಎತ್ತಿದ್ದು ತಾಲೂಕು ಆಡಳಿತ ಹೇಗೆ ಸ್ಪಂದಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.
ಈ ಸಂದರ್ಭದಲ್ಲಿ ಮಲೆನಾಡು ರಕ್ಷಣಾ ಸೇನೆ ಅಧ್ಯಕ್ಷರಾದ ಪುಟ್ಟರಾಜ್ ಮಳಲಿ, ತೇಜಸ್, ಚಂದ್ರಶೇಖರ್, ಮಂಜು ದೇವ್ ಹುಲ್ಲಳ್ಳಿ, ಗಿರೀಶ್ ಕುಡುಗರ ಹಳ್ಳಿ, ವೃತೇಶ್,ಶೇಖರ್, ಪ್ರಶಾಂತ್,ಕೃತಿ ವರ್ಮ ನಾಗರಾಜು ಮುಂತಾದವರು ಉಪಸ್ಥಿತರಿದ್ದರು.
—————–ರಕ್ಷಿತ್ ಎಸ್ ಕೆ