ಸಕಲೇಶಪುರ-ದತ್ತಪೀಠದಲ್ಲಿ ಗ್ಯಾರವಿ ಆಚರಣೆಗೆ ಅವಕಾಶ-ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅಮಾನತ್ತಿಗೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಆಗ್ರಹ

ಸಕಲೇಶಪುರ-ಚಿಕ್ಕಮಗಳೂರಿನ ದತ್ತಪೀಠದಲ್ಲಿ ಗ್ಯಾರವಿ ಎಂಬ ಹೊಸ ಆಚರಣೆಗೆ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅನುಮತಿ ನೀಡಿ ಹಿಂದೂ ವಿರೋಧಿ ನೀತಿ ಅನುಸರಿಸಿದ್ದು ಅವರನ್ನು ತತಕ್ಷಣಕ್ಕೆ ಅಮಾನತ್ತುಗೊಳಿಸಿ ಘಟನೆಯ ತನಿಖೆಗೆ ಆದೇಶಿಸುವಂತೆ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಆಗ್ರಹಿಸಿದೆ.

ಇಂದು ಸಕಲೇಶಪುರ ಉಪವಿಭಾಗಾಧಿಕಾರಿಗಳ ಕಚೇರಿಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಈ ಸಂಬಂಧ ಮನವಿ ಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದತ್ತಪೀಠ ಮುಕ್ತಿ ಹೋರಾಟ ಸಮಿತಿ ಮುಖಂಡರಾದ ರಘು ಸಕಲೇಶಪುರ, ದತ್ತಪೀಠದಲ್ಲಿ ಯಾವುದೇ ಹೊಸ ಆಚರಣೆ ಮಾಡಬಾರದು ಎಂದು ನಿಯಮವಿದ್ದರೂ ಸಹ ಗ್ಯಾರವಿ ಆಚರಣೆಗೆ ಮುಸ್ಲಿಮರಿಗೆ ಅವಕಾಶ ನೀಡಿರುವುದು ಸ್ಪಷ್ಟವಾಗಿ ಕಾನೂನನ್ನು ಉಲ್ಲಂಘಿಸಿದಂತಾಗಿದೆ.

ಗ್ಯಾರವಿ ಎಂದರೆ ಪ್ರಾಣಿಬಲಿ ಕೊಡುವುದಾಗಿದ್ದು,ಪೀಠದ ಪಕ್ಕದ ಕಲ್ಯಾಣಿ ಇರುವ ಜಾಗದಲ್ಲಿ 22 ನೇ ತಾರೀಕಿನಂದು ಕುರಿ ಕಡಿದು ಅಲ್ಲೇ ಊಟ ಮಾಡಿ ದತ್ತಪೀಠದ ಆವರಣವನ್ನು ಕಲುಷಿತಗೊಳಿಸಿದ್ದು ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ಉಂಟಾಗಿದೆ.

ಈ ರೀತಿಯ ಯಾವದೇ ಆಚರಣೆಗೆ ಅವಕಾಶವಿಲ್ಲದಿದ್ದರೂ ಸಹ ಗ್ಯಾರವಿಗೆ ಅನುಮತಿ ನೀಡುವ ಮೂಲಕ ನ್ಯಾಯಾಲಯದ ಆದೇಶದ ಸ್ಪಷ್ಟ ಉಲ್ಲಂಘನೆಯನ್ನು ಜಿಲ್ಲಾಧಿಕಾರಿಗಳು ಮಾಡಿದ್ದು ಅವರನ್ನು ತಕ್ಷಣ ಅಮಾನತ್ತುಗೊಳಿಸುವಂತೆ ಅವರು ಆಗ್ರಹಿಸಿದ್ದಾರೆ.

ಈ ಸಂದರ್ಭದಲ್ಲಿ ದತ್ತಪೀಠ ಮುಕ್ತಿ ಹೋರಾಟ ಸಮಿತಿಯ ಸಕಲೇಶಪುರ ತಾಲ್ಲೂಕಿನ ಕಾರ್ಯಕರ್ತರು ಇದ್ದರು.

———–——ಎಸ್.ಕೆ ರಕ್ಷಿತ್

Leave a Reply

Your email address will not be published. Required fields are marked *

× How can I help you?