ಸಕಲೇಶಪುರ:ವಣಗೂರು ಗ್ರಾಮದ ಬಳಿ ಕಳೆದ ಮೂರು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹೆಣ್ಣಾನೆಯೊಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದೆ.
ಅಂದಾಜು ಇಪ್ಪತ್ತು ವರ್ಷ ಪ್ರಾಯದ ಹೆಣ್ಣಾನೆ ಅನಾರೋಗ್ಯ ಪೀಡಿತವಾಗಿ ಕದಲಲು ಸಾಧ್ಯವಾಗದೆ ಒಂದೇ ಸ್ಥಳದಲ್ಲಿ ಮೂರು ದಿನಗಳಿಂದಲೂ ನಿಂತಿತ್ತು.ಆ ಆನೆಯನ್ನು ಆನೆ ಶಿಬಿರಕ್ಕೆ ಸ್ಥಳಾಂತರಿಸಿ ಚಿಕಿತ್ಸೆ ನೀಡಲು ಅರಣ್ಯ ಇಲಾಖೆಯ ಅಧಿಕಾರಿಗಳು ಯೋಚಿಸಿದರಾದರು ಆನೆಗೆ ಹೃದಯಘಾತವಾಗುವ ಸಾಧ್ಯತೆಗಳಿವೆ ಎಂದು ಪಶುವೈದ್ಯರು ಎಚ್ಚರಿಸಿದ್ದರಿಂದ ಸ್ಥಳದಲ್ಲಿಯೇ ಚಿಕಿತ್ಸೆ ನೀಡಲಾಗುತ್ತಿತ್ತು.
ಚಿಕಿತ್ಸೆಗೆ ಸ್ಪಂದಿಸದ ಆನೆ ಮೂರು ದಿನಗಳ ಕಾಲ ಆಹಾರವನ್ನು ತಿನ್ನಲಾಗದೆ ನರಳಿ ಇಂದು ಮೃತಪಟ್ಟಿದೆ.
ಸ್ಥಳಕ್ಕೆ ಹಿರಿಯ ಅರಣ್ಯಾಧಿಕಾರಿಗಳು ಭೇಟಿ ನೀಡಿ ಅಲ್ಲಿಯೇ ಆನೆಯನ್ನು ದಫನ್ ಮಾಡುವ ತೀರ್ಮಾನ ಕೈಗೊಂಡಿದ್ದಾರೆ.
ಆನೆಯ ಮರಣೋತ್ತರ ಪರೀಕ್ಷೆಯ ನಂತರವಷ್ಟೇ ಸಾವಿನ ನಿಖರ ಕಾರಣ ತಿಳಿದುಬರಬೇಕಿದೆ.
————-ರಕ್ಷಿತ್ ಎಸ್ ಕೆ