ಸಕಲೇಶಪುರ-ಸ್ನಾನ ಮಾಡುತ್ತಿದ್ದ ವೇಳೆ ಹೃದಯಾಘಾತಕ್ಕೊಳಗಾಗಿ ಮಹಿಳೆಯೊಬ್ಬರು ಮೃತಪಟ್ಟಿರುವ ದುರ್ಘಟನೆಯೊಂದು ವರದಿಯಾಗಿದೆ.
ತಾಲ್ಲೂಕಿನ,ವೆಂಕಟಹಳ್ಳಿ ಗ್ರಾಮದ ದೀಪಾ (35) ಮೃತಪಟ್ಟ ದುರ್ದೈವಿ.
ತಾಲ್ಲೂಕು ವೀರಶೈವ ಸಮಾಜದ ಯುವ ವೇದಿಕೆಯ ಅಧ್ಯಕ್ಷ ಶಶಿಕುಮಾರ್ ಅವರ ಪತ್ನಿ ದೀಪಾ ಎಂದಿನಂತೆ ಸ್ನಾನ ಮಾಡಲು ಬಾತ್ ರೂಮ್ ಗೆ ಹೋದಾಗ ಹೃದಯಾಘಾತ ಸಂಭವಿಸಿದ್ದು ಪೋಷಕರು ತಕ್ಷಣ ತಾಲೂಕು ಸರಕಾರಿ ಆಸ್ಪತ್ರೆಗೆ ಕರೆದೊಯ್ದರಾದರು ಅಷ್ಟರೊಳಗೆ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.
ಮೃತರಿಗೆ ಓರ್ವ ಪುತ್ರನಿದ್ದು ಗ್ರಾಮದಲ್ಲಿ ದುಃಖ ಮಡುವುಗಟ್ಟಿದ್ದು,ಸಂಬಂದಿಕರ ಆಕ್ರಂದನ ಮುಗಿಲು ಮುಟ್ಟಿದೆ.
ಇತ್ತೀಚಿನ ವರ್ಷಗಳಲ್ಲಿ ಮಧ್ಯವಯಸ್ಸಿನವರಲ್ಲಿ ಹೃದಯಕ್ಕೆ ಸಂಬಂದಿಸಿದ ಕಾಯಿಲೆಗಳು ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗಿದ್ದು ಮೃತಪಡುವವರ ಸಂಖ್ಯೆಯು ಹೆಚ್ಚಿದೆ.
ವೈದ್ಯಕೀಯ ಲೋಕ ಮಧ್ಯವಯಸ್ಕರ ಹೃದಯಾಘಾತಗಳಿಗೆ ಸರಿಯಾದ ಕಾರಣಗಳನ್ನು ಹುಡುಕಿ ಜೀವಗಳನ್ನು ಉಳಿಸುವ ನಿಟ್ಟಿನಲ್ಲಿ ತುರ್ತು ಗಮನಹರಿಸಬೇಕಾದ ಅವಶ್ಯಕತೆಯಿದೆ.
——––ರಕ್ಷಿತ್ ಎಸ್.ಕೆ