ಸಕಲೇಶಪುರ-ಇಂಟರ್ ಸಿಟಿ ರೈಲು ಸಕಲೇಶಪುರಕ್ಕೂ ಬರಲಿದೆಯೆ? ಶಾಸಕ ಸಿಮೆಂಟ್ ಮಂಜು ಮನವಿಗೆ ಸ್ಪಂದಿಸಿದ ಸಚಿವ ಸೋಮಣ್ಣ-ಮತ್ತೆ ಚಿಗುರೊಡೆದ ಕನಸ್ಸು

ಸಕಲೇಶಪುರ-ಯಶವಂತಪುರ ಹಾಗೂ ಹಾಸನ ನಡುವೆ ದಿನನಿತ್ಯ ಇಂಟರ್‌ಸಿಟಿ ರೈಲು ಸಂಚರಿಸುತ್ತಿದ್ದು,ಹಾಸನದಿಂದ ಕೇವಲ 40ಕಿ.ಮೀ ದೂರದಲ್ಲಿರುವ ಸಕಲೇಶಪುರಕ್ಕೆ ಈ ರೈಲನ್ನು ವಿಸ್ತರಿಸಿದರೆ ಈ ಭಾಗದಲ್ಲಿನ ಕಾಫಿ,ಮೆಣಸು ಹಾಗೂ ಏಲಕ್ಕಿ ಉದ್ಯಮಕ್ಕೆ ಬಹಳ ಅನುಕೂಲವಾಗುತ್ತದೆ ಎಂದು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಈ ಸೋಮಣ್ಣ ಅವರಿಗೆ ಮನವಿ ಮಾಡಿರುವುದಾಗಿ ಶಾಸಕ ಸಿಮೆಂಟ್ ಮಂಜು ಹೇಳಿದರು.

ಸಕಲೇಶಪುರ ವಿಧಾನಸಭಾ ಕ್ಷೇತ್ರದ ಸಾರ್ವಜನಿಕರ ಬಹುದಿನಗಳ ಬೇಡಿಕೆಯಾದ ಯಶವಂತಪುರ ಹಾಗೂ ಹಾಸನ ನಡುವೆ ಸಂಚರಿಸುತ್ತಿರುವ ಇಂಟರ್‌ಸಿಟಿ ರೈಲನ್ನು (22679) ಹಾಗೂ (22680)ಅನ್ನು ಹಾಸನ ಜಿಲ್ಲೆಯ ಸಕಲೇಶಪುರ-ಆಲೂರು-ಕಟ್ಟಾಯ ವಿಧಾನಸಭಾ ಕ್ಷೇತ್ರದ ಸಕಲೇಶಪುರದವರೆಗೆ ವಿಸ್ತರಿಸುವಂತೆ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಈ ಸೋಮಣ್ಣ ಅವರಿಗೆ ಮನವಿ ಸಲ್ಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಹಾಸನಂಬಾ ದೇವಿ ದರ್ಶನಕ್ಕೆ ಆಗಮಿಸಿದ್ದ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ರೈಲಿನ ಅಗತ್ಯತೆಯನ್ನು ವಿವರಿಸಿ ಅನುಕೂಲ ಮಾಡಿಕೊಡುವಂತೆ ಕೋರಿದ್ದೇನೆ.ಕೇಂದ್ರ ಸಚಿವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು ರೈಲು ವಿಸ್ತರಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ ಎಂದು ಹೇಳಿದರು.

———–ದರ್ಶನ ಕೆರೆಹಳ್ಳಿ

Leave a Reply

Your email address will not be published. Required fields are marked *

× How can I help you?