
ಚಿಕ್ಕಮಗಳೂರು-ಪುರಾಣ ಐತಿಹಾಸಿಕ ಪ್ರಸಿದ್ಧ ಶ್ರೀ ಶಕುನ ರಂಗನಾಥಸ್ವಾಮಿ ಜಾತ್ರಾ ಮಹೋತ್ಸವದ ಅಂಗವಾಗಿ ಸಖರಾಯಪಟ್ಟಣ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳದ ಘಟಕ ದಿಂದ ಗುರುವಾರ ಭಕ್ತಾಧಿಗಳಿಗೆ ಪಾನಕ, ಪ್ರಸಾದ ವಿತರಿಸಿ, ಭಗವದ್ಗೀತ ಪುಸ್ತಕ ವಿತರಿಸಲಾಯಿತು.
ಜಾತ್ರಾ ಮಹೋತ್ಸವು ಎರಡು ದಿನಗಳ ಹಿಂದೆ ಮೊಲ ಬಿಡುವ ಸೇವೆ, ಎಡ ಶ್ರೀಯವರ ಉತ್ಸವ ನಡೆಯಿತು. ಇಂದು ರಾತ್ರಿ 09.30ಕ್ಕೆ ರಥೋತ್ಸವ ಹಮ್ಮಿಕೊಳ್ಳಲಾಗಿದೆ. ಜ.17 ರಂದು ಕೆಂಚರಾಯಸ್ವಾಮಿ ಸೇವೆ ಹಾಗೂ 18 ರಂದು ಪರ್ಶೆ ಉತ್ಸವ ಸೇವೆಯ ಮುಖಾಂತರ ಜಾತ್ರಾ ಮಹೋತ್ಸವ ಸಂಪನ್ನಗೊಳ್ಳಲಿದೆ.
ಈ ವೇಳೆ ಮಾತನಾಡಿದ ಬಜರಂಗದಳ ಸಂಯೋಜಕ ಎಸ್.ಜಿ.ಸಂಜಯ್, ಐತಿಹಾಸಿಕ ಪ್ರಸಿದ್ಧ ಶ್ರೀ ಶಕುನಾ ರಂಗನಾಥಸ್ವಾಮಿ ಜಾತ್ರೆಯ ಅಂಗವಾಗಿ ಕಳೆದ ಹನ್ನೇರಡು ವರ್ಷಗಳಿಂದ ಸಂಘಟನೆಯು ಪಾನಕ, ಪ್ರಸಾದ ವಿತರಣೆ ಸೇರಿದಂತೆ ಭಜನಾ ಕಾರ್ಯಕ್ರಮವನ್ನು ಭಕ್ತಾಧಿಗಳಿಗೆ ಏರ್ಪಡಿಸಿ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದೆ ಎಂದರು.
ಶ್ರೀ ಶಕುನ ರಂಗನಾಥಸ್ವಾಮಿ ದೇಗುಲಕ್ಕೆ ಸಖರಾಯಪಟ್ಟಣ ಹೋಬಳಿ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಭಕ್ತಾಧಿಗಳು ಆಗಮಿಸುತ್ತಾರೆ. ಅನೇಕ ತಲೆಮಾರುಗಳು ಪ್ರತಿವರ್ಷವು ಚಾಚು ತಪ್ಪದೇ ಜಾತ್ರಾ ಮಹೋತ್ಸವ ಆರಂಭದಿoದ ಕೊನೆಯತನಕ ಪಾಲ್ಗೊಳ್ಳುತ್ತಾರೆ. ಜೊತೆಗೆ ಜಾತ್ರೆಯ ಸಂಪೂರ್ಣ ಗ್ರಾಮೀಣ ಸೊಗಡಿನಿಂದ ಕೂಡಿರುತ್ತದೆ ಎಂದರು.

ಭಗವದ್ಗೀತಾ ಪುಸ್ತಕ ಹಂಚಿಕೆ ವಿತರಕ ಆರ್.ಆರ್.ಕೃಷ್ಣಮೂರ್ತಿ ಮಾತನಾಡಿ, ವೇದಗಳೇ ಭಾರತೀಯ ಜ್ಞಾನ ಸಂಪತ್ತಿನ ಮೂಲಗಳು. ಹೀಗಾಗಿ ಸಾರ್ವಜನಿಕರಲ್ಲಿ ಹಿಂದುತ್ವದ ಇತಿಹಾಸ ತಿಳಿಸುವ ನಿಟ್ಟಿನಲ್ಲಿ ದೇವಾಲಯದಲ್ಲಿ ಸುಮಾರು ಎರಡು ಸಾವಿರಕ್ಕೂ ಹೆಚ್ಚು ಭಗವದ್ಗೀತಾ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಶ್ವಹಿಂದೂ ಪರಿಷತ್‌ನ ಉಪಾಧ್ಯಕ್ಷ ದೀಪಕ್, ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್, ಖಜಾಂಚಿ ನಾಗಭೂಷಣ್, ಬಜರಂಗದಳ ಸಹ ಸಂಯೋಜಕರಾದ ದರ್ಶನ್‌ನಾಯ್ಕ್, ಇಂದು ಕುಮಾರ್, ಸುರಕ್ಷಾ ಪ್ರಮುಖ್ ನಿತಿನ್‌ಕುಮಾರ್, ಸದಸ್ಯರಾದ ಯೋಗೀಶ್, ಲೋಕೇಶ್, ದರ್ಶನ್‌ಗೌಡ, ಮುಖಂಡರಾದ ಯೋಗೇಂದ್ರಗೌಡ, ಮಿಥುನ್‌ಗೌಡ, ಶಿವಮೂರ್ತಿ, ಹೆಚ್.ಪಿ.ಲೋಕೇಶ್ ಮತ್ತಿತರರಿದ್ದರು.
—-ಸುರೇಶ್