ಚಿಕ್ಕಮಗಳೂರು, ಮೇ.14:- ಹೈದರಬಾದ್ ಎಐಟಿ ಹಳೇ ವಿದ್ಯಾರ್ಥಿಗಳ ಸಂಘದಿಂದ ಕಾಲೇಜಿನ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ಮೂವರು ವಿದ್ಯಾರ್ಥಿಗಳಿಗೆ ದಿ|| ಸತ್ಯಚಂದ್ರ ದಿವಿ ಮೆಮೋರಿಯಲ್ ಸ್ಮರಣಾರ್ಥ ವಿದ್ಯಾರ್ಥಿವೇತನವನ್ನು ಮಂಗಳವಾರ ಕಾಲೇಜಿನಲ್ಲಿ ಶ್ರೀ ನಿರ್ಮಲಾನಂದನಾಥಸ್ವಾಮೀಜಿ ಅವರಿಂದ ಡಿಡಿಯನ್ನು ಹಸ್ತಾಂತರಿಸಲಾಯಿತು.
ಪ್ರಥಮ 21000 ರೂ., ದ್ವಿತೀಯ 17500 ಹಾಗೂ ತೃತೀಯ 15000 ರೂ.ಗಳನ್ನು ವಿತರಿಸಲಾಗಿದ್ದು ಕಳೆದ 15 ವರ್ಷಗಳಿಂದ ಈ ಪ್ರೋತ್ಸಾಹಧನ ವಿತರಣೆಯಾಗುತ್ತಿದೆ.

ಈ ಸಂದರ್ಭದಲ್ಲಿ ಕಾಲೇಜು ಪ್ರಾಂಶುಪಾಲ ಡಾ|| ಸಿ.ಕೆ.ಜಯದೇವ್, ರಿಜಿಸ್ಟರ್ ಡಾ|| ಸುಬ್ಬರಾಯ, ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೇಗೌಡ, ಮೈಸೂರು ವಿಶ್ವವಿದ್ಯಾಲಯ ಉಪಕುಲಪತಿ ಎನ್.ಕೆ. ಲೋಕನಾಥ್, ಹಳೇ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಡಾ|| ಜಿ.ಎಂ.ಸತ್ಯನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು.
– ಸುರೇಶ್ ಎನ್.