ಚಿಕ್ಕಮಗಳೂರು-ಕೊಡವ-ಸಮಾಜದಲ್ಲಿ-ಹಿರಿಯ-ದಂತ- ವೈದ್ಯಾಧಿಕಾರಿ-ಐ.ಕೆ ನಾಣಯ್ಯ-ಅವರೀಗೆ-ಸನ್ಮಾನ

ಚಿಕ್ಕಮಗಳೂರು : ಸಮಾಜದಲ್ಲಿ ಉತ್ತಮ ಸ್ಥಾನದಲ್ಲಿರುವವರು ಕೈಲಾದಷ್ಟು ಸೇವೆಯನ್ನು ಮಾಡುವ ಮೂಲಕ ಜನರೀಗೆ ನೆರವಾಗಬೇಕು ಎಂದು ಹಿರಿಯ ದಂತ ವೈದ್ಯಾಧಿಕಾರಿ ಹಾಗು ಸಮಾಜ ಸೇವಕರಾದ ಶ್ರೀ ಐತ್‌ಚಂಡ ಡಾ: ಐ.ಕೆ. ನಾಣಯ್ಯ ಅವರು ಸಲಹೆ ನೀಡಿದ್ದಾರೆ.

ನಗರದ ಬೈಪಾಸ್ ರಸ್ತೆಯಲ್ಲಿರುವ ಕೊಡವ ಸಮಾಜದಲ್ಲಿ ಜಿಲ್ಲಾ ಕೊಡವ ಸಮಾಜದ ವತಿಯಿಂದ ನಾಣಯ್ಯ ಹಾಗು ಲಲಿತ ನಾಣಯ್ಯ ದಂಪತಿಗಳೀಗೆ ನಡೆದ ಸನ್ಮಾನ ಹಾಗು ಅಭಿನಂದನಾ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿದ ಬಳಿಕ ಮಾತನಾಡಿದ ಅವರು ನಾವು ಯಾವುದೆ ವೃತ್ತಿ ರಂಗದಲ್ಲಿ ಇರಲಿ ಉತ್ತಮ ರೀತಿಯಾಗಿ ಕರ್ತವ್ಯ ನಿರ್ವಹಿಸಬೇಕು. ಆರ್ಥಿಕವಾಗಿ ಸಭಲರಾಗಿದಲ್ಲಿ ದುರ್ಬಲರೀಗೆ, ನಿರ್ಗತಿಕರೀಗೆ ಒಂದಷ್ಟು ಸಹಾಯ ಹಸ್ತ ಚಾಚಬೇಕು. ಹಾಗೆ ನಮ್ಮ ವೃತ್ತಿಯಲ್ಲಿ ಸಾಧ್ಯವಾದಷ್ಟು ಸೇವಾ ಮನೋಬಾವದಿಂದ ಕೆಲಸ ಮಾಡಬೇಕು ಉತ್ತಮ ಕೆಲಸಗಳನ್ನು ಮಾಡಿದಾಗ ಜನರು ನಮ್ಮನ್ನು ಗುರುತಿಸುತ್ತಾರೆ ಮತ್ತು ಜನಮಾನಸದಲ್ಲಿ ಉಳಿದುಕೊಳ್ಳುತೇವೆ ಎಂದರು. ಹಾಗೆ ನಮ್ಮ ಸಮಾಜ, ನಮ್ಮ ಧರ್ಮ, ನಮ್ಮ ದೇವಾಲಯ, ಧಾರ್ಮಿಕ ಕಾರ್ಯಕ್ರಮಗಳೀಗು ಸಾಧ್ಯವಾದಷ್ಟು ಸೇವೆ ಮಾಡಬೇಕು ಹಾಗು ಭಾಗವಹಿಸಬೇಕು ಆಗ ಉತ್ತಮ ರೀತಿಯಲ್ಲಿ ನಮ್ಮ ಸಮಾಜ ಮುಂದುವರೆಯುತ್ತದೆ ಎಂದು ಹೇಳಿದ್ದರು.

ಚಿಕ್ಕಮಗಳೂರು ಕೊಡವ ಸಮಾಜದ ವತಿಯಿಂದ ವಿದ್ಯಾರ್ಥಿ ನಿಧಿಯನ್ನು ಸ್ಥಾಪನೆ ಮಾಡಬೇಕು. ಆ ಮೂಲಕ
ಬಡ ವಿದ್ಯಾರ್ಥಿಗಳೀಗೆ, ಉನ್ನತ ಶಿಕ್ಷಣ ಮಾಡವವರಿಗೆ, ವಿದ್ಯೆಯಲ್ಲಿ ಆಸಕ್ತಿ ಇರುವವರೀಗೆ ಆರ್ಥಿಕವಾಗಿ ಸಹಾಯ ಮಾಡಬೇಕು
ಇದು ನನ್ನ ಮಹದಾಸೆ ಎಂದು ಅವರು, ಕೊಡವ ಸಮಾಜದ ಕಾರ್ಯವೈಕರಿ ಕುರಿತು ಮೆಚ್ಚುಗೆ ಮಾತನಾಡಿದ ಅವರು ಪ್ರಸ್ತುತ ಚಿಕ್ಕಮಗಳೂರು ಕೊಡವ ಸಮಾಜವು ಉತ್ತಮ ರೀತಿಯಾಗಿ ಕೆಲಸ ಕಾರ್ಯ ಮಾಡಿಕೊಂಡು ಮುಂದುವರೆಯುತ್ತಿದೆ. ಕೊಡವ ಸಮಾಜದಲ್ಲಿರುವ
ಪದಾಧಿಕಾರಿಗಳು, ಸದಸ್ಯರು ಎಲ್ಲರು ಕೂಡ ಉತ್ತಮ ಕಾರ್ಯಗಳನ್ನು ಮಾಡುತ್ತ ಕೊಡವ ಸಂಪ್ರದಾಯ ಪಾಲಿಸುತ್ತ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ ಅವರಿಗೆ ನನ್ನ ಅಭಿನಂದನೆಗಳು ಎಂದರು.‌

ಅತಿಥಿಗಳಾಗಿ ಭಾಗವಹಿಸಿದ ಶ್ರೀ ಅಪ್ಪಯ್ಯ ಮಾತನಾಡಿ, ಐ.ಕೆ ನಾಣಯ್ಯ ಅವರು ವೈದ್ಯರಾಗಿ ಚಿಕ್ಕಮಗಳೂರು ಸೇರಿ ರಾಜ್ಯದ ವಿವಿಧೆಡೆ ಕಾರ್ಯ ನಿರ್ವಹಿಸಿದ್ದಾರೆ. ಕೊಡವ ಸಮಾಜ ಸೇರಿ ಅನೇಕ ಜವಬ್ದಾರಿಗಳನ್ನು ಅತ್ಯಂತ ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಅಲ್ಲದೆ ಇಂದಿನ ಯುವ ಪೀಳಿಗೆಗೆ ಉತ್ತಮ ಮಾರ್ಗದರ್ಶನವನ್ನು ಅವರು ನೀಡಿದ್ದಾರೆ ಅವರೀಗೆ ಸನ್ಮಾನಿಸುತ್ತಿರುವುದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ.
ಮುAದೆ ಅವರ ನೂರನೆ ವರ್ಷದ ಹುಟ್ಟು ಹಬ್ಬವನ್ನು ಕೂಡ ಇದಕ್ಕಿಂತ ದೊಡ್ಡ ವೇದಿಕೆಯಲ್ಲಿ ಆಚರಿಸೋಣ ಎಂದರು.

ಬಿದ್ದಂಡ ಕುಶಾಲಪ್ಪ ಮಾತನಾಡಿ, ಚಿಕ್ಕಮಗಳೂರು ಕೊಡವ ಸಮಾಜ ರಿಜಿಸ್ಟೆಡ್ ಟ್ರಸ್ಟ್ ಆಗಿದೆ. ಜೊತೆಗೆ ಕೊಡವ ಸಮಾಜದ ಮೂಲಕ ವರ್ಷ ಪೂರ್ತಿ ಕೊಡವರ ಹಬ್ಬಗಳು ಇತರೆ ಕಾರ್ಯಕ್ರಮಗಳನ್ನು ಮಾಡಿಕೊಂಡು ಬರುತ್ತಿದೇವೆ ಎಂದು ತಿಳಿಸಿದ್ದರು. ಹಾಗೆ ಐ.ಕೆ ನಾಣಯ್ಯ ಅವರು ಕೊಡವ ಸಮಾಜಕ್ಕೆ ನೀಡಿದ ಕೊಡುಗೆಗಳು ಹಾಗು ಅವರ ಕೆಲಸ ಕಾರ್ಯಗಳ ಕುರಿತು ಮಾಹಿತಿ ನೀಡಿದ್ದರು. ಮತ್ತು ಇದೇ ಸಂದರ್ಭದಲ್ಲಿ ಕೊಡವ ಸಮಾಜದ ಸ್ಥಾಪನೆ ಹಾಗು ಬೆಳೆದು ಬಂದ ರೀತಿಯನ್ನು ಸವಿಸ್ಥಾರವಾಗಿ ಸಭಿಕರೀಗೆ ತಿಳಿಸಿಕೊಟ್ಟರು.

ಕಾರ್ಯಕ್ರಮದಲ್ಲಿ ಅಚ್ಚಯ್ಯ, ಶ್ರೀಮತಿ ಶಾಂತಿ ಅಪ್ಪಯ್ಯ, ಕೊಡವ ಸಮಾಜ ಟ್ರಸ್ಟ್ ನ ಎಲ್ಲಾ ಸದಸ್ಯರು. ಚಿಕ್ಕಮಗಳೂರು ಜಿಲ್ಲೆಯ ಹಲವು ಕೊಡವರು ಪಾಲ್ಗೊಂಡಿದ್ದರುಪಣ್ಣಂಗಡ ಪೂನಂ ಸ್ವಾಗತಿಸಿದ್ದರು, ಬಿದ್ದಂಡ ಕಾವೇರಮ್ಮ ಪ್ರಾರ್ಥನೆ ಮಾಡಿದ್ದರು, ಕರ್ತಮಡ ಬೀನಾ ಅವರು ಸನ್ಮಾನಿತರ ಪರಿಚಯ ಮಾಡಿದ್ದರು. ಭವಿಶ್ ನಾಚಪ್ಪ ಅವರು ವಂದನಾರ್ಪಣೆ ಮಾಡಿದ್ದರು.

– ಸುರೇಶ್‌ ಎನ್.

Leave a Reply

Your email address will not be published. Required fields are marked *

× How can I help you?