ಕೊರಟಗೆರೆ : ಉತ್ತಮ ವಿದ್ಯಾರ್ಥಿಗಳನ್ನು ರೂಪಿಸಿವಲ್ಲಿ ಶಿಕ್ಷಕರ ಪಾತ್ರ ಮಹತ್ವವಾಗಿದೆ ಎಂದು ಮುಖ್ಯ ಶಿಕ್ಷಕಿ ಅರಸಮ್ಮ ತಿಳಿಸಿದರು.
ಕೋಳಾಲ ಹೋಬಳಿಯ ಸಂಕೇನಹಳ್ಳಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಹಮ್ಮಿಕೊಂಡಿದ್ದ ಶಾರದಾ ಪೂಜಾ ಹಾಗೂ ಸಂತೋಷ ಸಮಾರಂಭ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು. ಮಕ್ಕಳು ಸಂತಸದಿಂದ ಶಾಲೆಗೆ ಬಂದು ವಿದ್ಯಾಭ್ಯಾಸವನ್ನು ಮಾಡಲು ಸರ್ಕಾರ ಸಾಕಷ್ಟು ಸೌಲಭ್ಯಗಳನ್ನು ಒದಗಿಸುತ್ತದೆ. ಈ ಸೌಲಭ್ಯಗಳು ಮಕ್ಕಳಿಗೆ ದೊರೆಯುವ ಮೂಲಕ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿ ಸಾಗಬೇಕಿದೆ. ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಸಾಕಷ್ಟಿದೆ ಎಂದರು.
ಎಸ್ ಡಿ ಎಂ ಸಿ ಅಧ್ಯಕ್ಷ ಭೋಜ ರಾಜು ಮಾತನಾಡಿ: ವರ್ಷವಿಡಿ ಕಲಿತ ಪಾಠಗಳ ವಿಷಯಗಳನ್ನು ಪರೀಕ್ಷೆಯಲ್ಲಿ ಉತ್ತಮವಾಗಿ ಬರೆಯುವುದಕ್ಕೆ ಸರಿಯಾದ ಅಭ್ಯಾಸವನ್ನು ವಿದ್ಯಾರ್ಥಿಗಳು ಮಾಡಬೇಕಿದೆ. ಆದ್ದರಿಂದ ಪಾಠ್ಯ ವಿಷಯಗಳನ್ನು ಚೆನ್ನಾಗಿ ಅರಿತು ಪರೀಕ್ಷೆಯಲ್ಲಿ ಉತ್ತಮ ಅಂಕ ಗಳಿಸಿ ಎಂದು ಶುಭ ಹಾರೈಸಿದರು.

ಸಂದರ್ಭದಲ್ಲಿ ಎಸ್. ಡಿ. ಎಮ್. ಸಿ. ಉಪಾಧ್ಯಕ್ಷೆ ಕೆಂಪಮ್ಮ. ಮಮತಾ. ಶಿಕ್ಷಕರಾದ ಹೇಮಾವತಿ. ರಂಗರಾಜಮ್ಮ. ಅರುಣ್ ಕುಮಾರ್. ಅಡಿಗೆ ಸಹಾಯಕರಾದ ನಾಗರತ್ನಮ್ಮ ನೇತ್ರಾವತಿ ಮಕ್ಕಳ ಪೋಷಕರು ಹಾಜರಿದ್ದರು.
- ನರಸಿಂಹಯ್ಯ ಕೋಳಾಲ