ಬಣಕಲ್ :ತಾಲೂಕಿನ ಬಣಕಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತಿಕಟ್ಟೆ ಶಾಲೆಯಲ್ಲಿ ದಿ. 10ರ ಸೋಮವಾರ ಶಾರದಾ ಪೂಜೆ ಬಹಳ ವಿಜೃಂಭಣೆಯಿಂದ ನೆರವೇರಿತು.ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ವಿಶ್ವನಾಥ್ ಹಾಗೂ ವೇದಿಕೆಯಲ್ಲಿದ ಗಣ್ಯರು ಕಾರ್ಯಕ್ರಮವನ್ನು ಜ್ಯೋತಿ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕಿ ವಚನ ನೆರವೇರಿಸಿದರು.ಸ್ವಾಗತ ಭಾಷಣವನ್ನು ಶ್ರೀಮತಿ ವೀಣಾ ಮಾಡಿದರು ಶಾಲೆಯ ಮುಖ್ಯೋಪಾಧ್ಯಯರಾದ ಅಶ್ವಿನಿ ರವರು ಪ್ರಸ್ತಾವಿಕ ನುಡಿಯನ್ನಾಡಿದರು.
ಇದೆ ಸಂದರ್ಭದಲ್ಲಿ 7ನೇ ತರಗತಿ ಮಕ್ಕಳಿಗೆ ಬೀಳ್ಕೊಡುಗೆ ಸಮಾರಂಭವಿದ್ದು ಮಕ್ಕಳ ಮುಂದಿನ ಶೈಕ್ಷಣಿಕ ಬದುಕಿಗೆ ಹಾರೈಸಿದ್ದು, ಈ ವೇಳೆ 7ನೇ ತರಗತಿಯ ಮಕ್ಕಳ ಭಾವುಕರಾಗಿ ಮಾತನಾಡಿ, ತಮ್ಮ ಅನಿಸಿಕೆ ಅಭಿಪ್ರಾಯ ಹಂಚಿಕೊಂಡರು.
ಶಾಲಾ ಎಸ್ ಡಿ ಎಂಸಿ ಅಧ್ಯಕ್ಷರಾದ ವಿಶ್ವನಾಥ್ ಮಾತನಾಡಿ, ಶಾಲಾ ದಿನಗಳೇ ಮಾನವನ ಜೀವನದ ಅಮೂಲ್ಯ ಕ್ಷಣಗಳು ಇಂತಹ ದಿನಗಳನ್ನು ಮಕ್ಕಳು ಅನುಭವಿಸಿ ಉನ್ನತ ಶಿಕ್ಷಣದತ್ತ ಮುಖ ಮಾಡುತ್ತಿದ್ದೀರಿ ಆದಕಾರಣ ಮುಂದಿನ ದಿನಗಳಲ್ಲಿಯೂ ಶ್ರದ್ದೆಯಿಂದ ಶಿಕ್ಷಣ ಮುಂದುವರಿಸಿ ಶಾಲೆಗೂ ಹಾಗೂ ಪೋಷಕರಿಗೂ ಒಳ್ಳೆಯ ಹೆಸರು ತರಬೇಕು ಎಂದರು.

ವೇದಿಕೆ ಕಾರ್ಯಕ್ರಮದ ನಂತರ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಇದೆ ಸಂದರ್ಭದಲ್ಲಿ ಶಿಕ್ಷಕರು ಹಿರಿಯ ವಿದ್ಯಾರ್ಥಿಗಳ ಸಹಕಾರವನ್ನು ನೆನಪಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಸರೋಜ, ದೀಪ್ತಿ, ವಿಮಲಾ, ಲಕ್ಷ್ಮಿ, ರಮಣಿ, ಹಾಗೂ ಗ್ರಾಮಸ್ಥರು ಹಾಗೂ ಪೋಷಕರು ಹಾಜರಿದ್ದರು.
ಇದೆ ಸಂದರ್ಭದಲ್ಲಿ ಸಮುದಾಯ ಆರೋಗ್ಯ ಅಧಿಕಾರಿ ದೀಪ್ತಿ ಮಕ್ಕಳಿಗೆ ಸ್ವಚ್ಛತೆ ಮತ್ತು ಅರೋಗ್ಯದ ಬಗ್ಗೆ ಮಾಹಿತಿ ನೀಡಿದರು.
✍️ ಸೂರಿ ಬಣಕಲ್