ಕೊರಟಗೆರೆ : ವಿದ್ಯಾರ್ಥಿಗಳಿಗೆ ಓದಿನ ಜ್ಞಾನದೊಂದಿಗೆ ಉತ್ತಮವಾದ ಸಂಸ್ಕಾರ ಹಾಗೂ ಧಾರ್ಮಿಕ ಭಾವನೆ ಮೂಡುವ ದೃಷ್ಠಿಯಿಂದ ಕಾಲೇಜು ಆವರಣದಲ್ಲಿ ವಿದ್ಯಾದೇವತೆ ಶಾರದಾ ದೇವಿಯ ವಿಗ್ರಹ ಪ್ರತಿಷ್ಟಾಪಿಸಲಾಗಿದೆ ಎಂದು ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯ ಎಂ.ಜಿ.ಸುಧೀರ್ ತಿಳಿಸಿದರು.
ಅವರು ಕೊರಟಗೆರೆ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಶ್ರೀ ಸರಸ್ವತಿ ದೇವಿ ಪ್ರತಿಮೆಯ ಪ್ರತಿಷ್ಠಾಪನಾ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಕಾಲೇಜಿನಲ್ಲಿ ಜ್ಞಾನ ಕಲಿಯುವುದರ ಜೊತೆ ಸಮಾಜದಲ್ಲಿ ಬದುಕಬೇಕಾದರೆ ಆಧ್ಯಾತ್ಮದೊಂದಿಗೆ ಸಂಸ್ಕಾರ, ಸಾಂಸ್ಕೃತಿ ಕಲಿಯುವ ಮೂಲಕ ಜೀವನದಲ್ಲಿ ಶ್ರೇಯಸ್ಸು ಪಡೆಯಲಿ ಎಂಬ ದೃಷ್ಠಿಯಿಂದ ಕಾಲೇಜಿನಲ್ಲಿ ಸರಸ್ವತಿ ದೇವಿಯ ವಿಗ್ರರ ಪ್ರತಿಷ್ಠಾಪಿಸಲಾಗಿದೆ ಎಂದು ತಿಳಿಸಿದರು.
ಕಾಲೇಜಿನ ಕನ್ನಡ ಉಪನ್ಯಾಸಕಿ ಡಾ.ಚೌತಾಲಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿಗಳಲ್ಲಿ ಗುಣಮಟ್ಟದ ಮೌಲ್ಯಗಳು ಕಳೆದುಕೊಳ್ಳುತ್ತಿದ್ದು ಕಾಲೇಜಿನ ಆವರಣದಲ್ಲಿ ಜ್ಞಾನ ದೇವತೆಯಾದ ಸರಸ್ವತಿ ದೇವಿಯ ಪ್ರತಿಷ್ಠಾಪನೆಯಿಂದ ಪ್ರತಿನಿತ್ಯ ನೆಡೆಯುವ ಪೂಜಾ ಧಾರ್ಮಿಕ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಮನೋಭಾವದಿಂದ ಮೌಲ್ಯಗಳು ಬೆಳೆಯಲಿದೆ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಾ.ಈರಪ್ಪನಾಯ್ಕ ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳಲ್ಲಿ ಮೌಲ್ಯಯುತ ಗುಣಮಟ್ಟದ ವಿದ್ಯೆ ಕಲಿಸುವುದರೊಂದಿಗೆ ವಿದ್ಯಾರ್ಥಿಗಳಲ್ಲಿ ಧಾರ್ಮಿಕ ಹಾಗೂ ನಾಡಿನ ಸಂಸ್ಕೃತಿ ಬೆಳೆಸುವ ದೃಷ್ಠಿಯಿಂದ ಕ್ಷೇತ್ರದ ಶಾಸಕರು ಹಾಗೂ ಗೃಹ ಸಚಿವರಾ ಡಾ.ಜಿ.ಪರಮೇಶ್ವರ್ ರವರ ಮಾರ್ಗದರ್ಶನದಲ್ಲಿ ಕಾಲೇಜು ಆಡಳಿತ ಮಂಡಲಿ ಸಹಕಾರದೊಂದಿಗೆ ಜ್ಞಾನ ದೇವತೆಯಾದ ಮಾತೆ ಸರಸ್ವತಿ ದೇವಿಯ ವಿಗ್ರಹ ಪ್ರತಿಷ್ಠಾಪಿಸಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳಿಗೆ ದೇವಿಯ ಅನುಗ್ರಹದಿಂದ ಹೊಸ ಚೈತನ್ಯ ಮತ್ತು ಉತ್ಸಾಹ ತುಂಬಲಿ, ವಿದ್ಯಾರ್ಥಿಗಳು ಉತ್ತಮ ಶೈಕ್ಷಣಿಕ ಪ್ರಗತಿ ಸಾಧಿಸಲಿ ಎಂದು ಅಭಿನಂದನೆಗಳು ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಎಂ.ಜಿ.ಜ್ಯೂಯಲರ್ ಮಾಲಿಕರುಗಳಾದ ಎಂ,ಜಿ.ಸುಧೀರ್, ಸುಷ್ಮಾರಾಣಿ, ಎಸ್.ಸುಶಾಂತ್‌ವಾಸುಪಾಲ್, ಸಾಯಿ ಹರ್ಷಿತ, ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ವಿ.ಪುರುಷೋತ್ತಮ್, ಪತ್ರಕರ್ತ ರಾಘವೇಂದ್ರ, ಕಾಲೇಜು ಅಭಿವೃದ್ದಿ ಸಮಿತಿ ಸದಸ್ಯರಾದ ಎನ್.ಪದ್ಮಾನಾಭ್. ಎಲ್.ನಾರಾಯಣ್, ರಂಗಶ್ಯಾಮಯ್ಯ, ಬಾಲಾಜಿ ದರ್ಶನ್, ಶ್ಯಾಂಭವಿ, ಭಾಗ್ಯಮ್ಮ, ಕಾಲೇಜಿನ ಉಪನ್ಯಾಸಕರಾದ ಡಾ.ಚೌತಾಲಿ, ಡಾ.ದೀಪಾ, ಡಾ.ಜ್ಯೋತಿ, ಡಾ.ಗಿರಿಜಮ್ಮ, ಡಾ.ಗೋ೦ವಿಂದರಾಜು, ಡಾ.ಶಿವರಾಮಯ್ಯ, ಡಾ.ರಮೇಶ್, ಮುಖಂಡರು ಗಳಾದ ನವೀನ್‌ಕುಮಾರ್, ಚಿನ್ನಿವೆಂಕಟಾಶೆಟ್ಟಿ, ರಾಧಾಕೃಷ್ಣ ಶ್ರೇಷ್ಟಿ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.