ಶಿಡ್ಲಘಟ್ಟ:ರಾಮಾಯಣದಲ್ಲಿರುವ ಮೌಲ್ಯ,ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ.ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹತ್ಸಾಧನೆ ಮಾಡಬಹುದು-ಹೆಚ್.ಆರ್.ಸಂದೀಪ್ ರೆಡ್ಡಿ

ಶಿಡ್ಲಘಟ್ಟ:ರಾಮಾಯಣದಲ್ಲಿರುವ ಮೌಲ್ಯ,ತತ್ವಗಳು ಎಲ್ಲ ಕಾಲಕ್ಕೂ ಪ್ರಸ್ತುತ. ಸತತ ಪರಿಶ್ರಮದಿಂದ ಯಾವುದೇ ವ್ಯಕ್ತಿ ಮಹತ್ಸಾಧನೆ ಮಾಡಬಹುದು ಎನ್ನುವುದಕ್ಕೆ ವಾಲ್ಮೀಕಿ ಸಾಕ್ಷಿಯಾಗಿದ್ದಾರೆ ಎಂದು ಸಮಾಜ ಸೇವಕ ಹೆಚ್.ಆರ್.ಸಂದೀಪ್ ರೆಡ್ಡಿ ಹೇಳಿದರು.

ತಾಲೂಕಿನ ಈ ತಿಮ್ಮಸಂದ್ರ ಗ್ರಾಮ ಪಂಚಾಯತಿ ವ್ಯಾಪ್ತಿಯ ಹಳೆಹಳ್ಳಿ ಸರ್ಕಾರಿ ಪ್ರಾಥಮಿಕ ಶಾಲಾ ಆವರಣದಲ್ಲಿ ನಡೆದ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಅವರು ಮಾತನಾಡಿದರು.

ಹಳೆಹಳ್ಳಿ ಗ್ರಾಮದ ಸರ್ಕಾರಿ ಶಾಲೆಯನ್ನು ಅಭಿವೃದ್ಧಿ ಪಡಿಸಲು ಶ್ರಮಿಸುತ್ತೇನೆ, ನಮ್ಮೂರ ಶಾಲೆ ಇಡೀ ಕ್ಷೇತ್ರಕ್ಕೆ ಮಾದರಿ ಶಾಲೆಯನ್ನಾಗಿ ಮಾಡುತ್ತೇನೆ ಅದೇ ರೀತಿ ಎಲ್ಲರು ಸಹಕಾರ ಕೊಟ್ಟರೆ ಉನ್ನತ ಮಟ್ಟಕ್ಕೆ ಏರಿಸಬಹುದು ಎಂದು ಹೇಳಿದರು.

ಯಾವುದೋ ಒಂದು ಪಕ್ಷದವರು ಅನೇಕ ಕಾರ್ಯಕ್ರಮಗಳಿಗೆ ಚಾಲನೆಯನ್ನು ಕೊಡುತ್ತಾರೆ ಆದರೆ ಅದನ್ನ ಕಾರ್ಯರೂಪಕ್ಕೆ ತರಲು ಆ ಇಲಾಖೆಗಳಲ್ಲಿ ಅಧಿಕಾರಿಗಳೇ ಇರುವುದಿಲ್ಲ. ತಾಲ್ಲೂಕಿನಲ್ಲಿ ಸರ್ಕಾರಿ ಇಲಾಖೆಗಳಲ್ಲಿ ಅನೇಕ ಹುದ್ದೆಗಳು ಖಾಲಿ ಇವೆ.ಆದರೆ ಶಿಡ್ಲಘಟ್ಟ ವಿಧಾನ ಸಭಾ ಕ್ಷೇತ್ರದ ಜನತೆಗೆ ಉದ್ಯೋಗ ಕೊಡುವುದಕ್ಕೆ ಅಧಿಕಾರಿಗಳು ಮತ್ತು ಸರ್ಕಾರ ವಿಫಲವಾಗಿದೆ ಎಂದು ಹೇಳಿದರು.

ನಿವೃತ್ತ ಶಿಕ್ಷಕ ಸುಬ್ಬಣ್ಣ ಮಾತನಾಡಿ, ಅತ್ಯಂತ ಹಿಂದುಳಿದ ವರ್ಗದ ವ್ಯಕ್ತಿ ಜ್ಞಾನ ಪಡೆಯುವ ಮೂಲಕ ಮಹರ್ಷಿಯಾದರು. ಹಿಂದುಳಿದ ವರ್ಗದ ಜನತೆ ತಮ್ಮಲ್ಲಿನ ಕೀಳರಿಮೆ ತೊರೆದು, ವಿದ್ಯಾಭ್ಯಾಸ ಪಡೆಯುವ ಮೂಲಕ ಸಮಾಜದ ಮುಖ್ಯವಾಹಿನಿಗೆ ಬರಬೇಕು. ಈ ನಿಟ್ಟಿನಲ್ಲಿ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾದುದು ಎಂದರು.

ಶಾಲಾ ಮಕ್ಕಳಿಗೆ ಟ್ರಾಕ್ ಸೂಟ್ ಸಮವಸ್ತ್ರವನ್ನು ವಿತರಣೆ ಮಾಡಲಾಯಿತು.ವಾಲ್ಮೀಕಿ ಸಂಘದ ವತಿಯಿಂದ ಮಕ್ಕಳಿಗೆ ತಟ್ಟೆ ಲೋಟ ನೀಡಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಬೈರಾರೆಡ್ಡಿ, ಗ್ರಾಮ ಪಂಚಾಯತಿ ಉಪಾಧ್ಯಕ್ಷ ಕೃಷ್ಣಪ್ಪ, ಗ್ರಾಮ ಪಂಚಾಯತಿ ಸದಸ್ಯರುಗಳಾದ,ಎಂ.ಡಿ ರಾಜೇಶ್ ,ಸುಶೀಲ ರಾಕೇಶ್. ನಾಗರಾಜ್, ಸುಭಾಷ್ ರೆಡ್ಡಿ, ಗ್ರಾಮದ ಪ್ರಮುಖರಾದ ದಾದಿ ವೆಂಕಟರಮಣಪ್ಪ, ಕೃಷ್ಣಾರೆಡ್ಡಿ, ದೇವರೆಡ್ಡಿ ಹೆಚ್ಎಸ್, ಭಾಸ್ಕರ್, ಬಾಬಾ ಜಾನ್, ಶಿಕ್ಷಕರಾದ ಮಂಜುನಾಥ್. ಶಿಕ್ಷಕಿಯರಾದ ದೀಪ, ಮುನಿರತ್ನ, ಅಮ್ಮಜಾನ್, ವೆಂಕಟಲಕ್ಷ್ಮಮ್ಮ, ನಾಗಮಣಿ ಹಾಗೂ ಗ್ರಾಮದ ವಾಲ್ಮೀಕಿ ಸಮುದಾಯದ ಯುವಕರು ಇದ್ದರು.

—————-ಎಂ ಗುರುಮೂರ್ತಿ ಬೈಯಪ್ಪನಹಳ್ಳಿ

Leave a Reply

Your email address will not be published. Required fields are marked *

× How can I help you?