ಚಿಕ್ಕಮಗಳೂರು– ರಾಷ್ಟ್ರೀಯ ಆದಿ ಜಗದ್ಗುರು ಶ್ರೀ ರೇವಣಸಿದ್ದೇಶ್ವರರ ನೊಂದಾ ಯಿ ತ ಸಂಘದ ರಾಜ್ಯ ದಕ್ಷಿಣ ವಿಭಾಗದ ಕಾರ್ಯಾಧ್ಯಕ್ಷರನ್ನಾಗಿ ಕಡೂರಿನ ಡಾ. ಹಿರೇನಲ್ಲೂರು ಶಿವು ಇವರನ್ನು ನೇಮಕ ಮಾಡಲಾಗಿದೆ ಸಂಘದ ಸಂಸ್ಥಾಪಕ ರಾಜ್ಯಾಧ್ಯಕ್ಷ ಶ್ರೀ ಶರಭಯ್ಯ ಸ್ವಾಮೀಜಿ ತಿಳಿಸಿದ್ದಾರೆ.
ಉತ್ತಮ ಸಂಘಟನೆ ಮಾಡುವ ಮೂಲಕ ಸಂಘದ ಶ್ರೇಯೋಭಿವೃದ್ಧಿಗೆ ಶಿವು ಅವರು ಸ್ಪಂದಿಸಲಿದ್ದು ಜನಪರ ಕೆಲಸಗಳ ಮೂಲಕ ಮತ್ತಷ್ಟು ಮತ್ತಷ್ಟು ಸೇವೆ ಮಾಡಲಿ ಎಂದಿರುವ ಶ್ರೀಗಳು ಈ ಸಂಘಟನೆ ಅತ್ಯುತ್ತಮವಾಗಿ ಕಾರ್ಯನಿರ್ವಹಿಸಲಿದೆ ಎಂದರು.
ಅಖಂಡ ಭಾರತದ ತುಂಬವಿರುವ ಶ್ರೀ ರೇವಣಸಿದ್ಧೇಶ್ವರರ ಮಠಗಳ ಅಭಿವೃದ್ಧಿ ಜೊತೆಗೆ ಶಿಕ್ಷಣ, ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರನ್ನು ಸಂಘಟಿಸಿ ಸಮ ಸಮಾಜದ ನಿರ್ಮಾಣದ ಆಶೋ ತ್ತರಗಳನ್ನು ಹೊತ್ತು ತರಲಿದೆ ಎಂಬ ಆಶಾಭಾವನೆಯನ್ನು ಶ್ರೀಗಳು ವ್ಯಕ್ತಪಡಿಸಿದ್ದಾರೆ.
ಸುರೇಶ್. ಎನ್.