ಶ್ರವಣಬೆಳಗೊಳ:ಬಾಹುಬಲಿಯು ಆದರ್ಶವನ್ನು ವಿದ್ಯಾರ್ಥಿಗಳು ಅಳವಡಿಸಿಕೊಂಡು ಮುನ್ನೆಡೆದಾಗ ಸಾರ್ಥಕ ಜೀವನ ನಡೆಸಬಹು-ಡಾ.ಎಚ್.ಎನ್.ವಿಶ್ವನಾಥ್

ಶ್ರವಣಬೆಳಗೊಳ:ಶಾಂತಿ ಸರಳತೆ ಮತ್ತು ತ್ಯಾಗದ ಸಂದೇಶವನ್ನು ಬಾಹುಬಲಿಯು ಇಡೀ ಜಗತ್ತಿಗೆ ಸಾರಿದ್ದಾರೆ.ಅಂತಹ ವ್ಯಕ್ತಿಯ ಈ ಆದರ್ಶವನ್ನು ವಿದ್ಯಾರ್ಥಿಗಳು ಜೀವನದಲ್ಲಿ ಅಳವಡಿಸಿಕೊಂಡು ಮುನ್ನೆಡೆದಾಗ ಪರಿಪೂರ್ಣತೆಯ ಸಾರ್ಥಕ ಜೀವನ ನಡೆಸಬಹುದೆಂದು ಮೈಸೂರು ಶಾರದಾ ವಿಲಾಸ ಶಿಕ್ಷಣ ಮಹಾ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ಎಚ್.ಎನ್.ವಿಶ್ವನಾಥ್ ಹೇಳಿದರು.

ಗೊಮ್ಮಟ ನಗರದ ಎಸ್.ಎನ್.ಪದವಿ ಪೂರ್ವ ಕಾಲೇಜಿನ ರಜತ ಮಹೋತ್ಸವದ ಅಂಗವಾಗಿ ಸ್ನೇಹಲೋಕ ಹಿರಿಯ ವಿದ್ಯಾರ್ಥಿಗಳ ಬಳಗದವರು ಆಯೋಜಿಸಿದ್ದ ಗುರು ವಂದನಾ ಮತ್ತು ಸ್ನೇಹ ಸಮ್ಮಿಲನ ಕಾರ್ಯಕ್ರಮದಲ್ಲಿ ಪ್ರಧಾನ ಉಪನ್ಯಾಸಕರಾಗಿ ಭಾಗವಹಿಸಿ ಭಾನುವಾರ ಮಾತನಾಡಿದರು.

ಶಿಕ್ಷಣ ಪಡೆಯುವ ಹಂತದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಾಧನೆಯ ಗುರಿಯನ್ನು ಸಾಧಿಸಬೇಕಾದರೆ ಕಲಿಯುವಿಕೆಯಲ್ಲಿ ಬದಲಾಗುವ ಮನಸ್ಥಿತಿಯನ್ನು ರೂಡಿಸಿಕೊಂಡಾಗ ತನ್ನ ಸ್ವಂತಿಕೆಯ ಅಸ್ತಿತ್ವವನ್ನು ಉಳಿಸಿಕೊಳ್ಳಬಹುದು ಎಂದು ಹೇಳಿದರು.ಜೀವನದಲ್ಲಿ ನಿಂತ ನೀರಾಗದೇ ಸದಾ ಜ್ಞಾನವನ್ನು ವಿಸ್ತರಿಸಿಕೊಳ್ಳುತ್ತಾ ಕಷ್ಟ ಪಟ್ಟಾಗ ವಿದ್ಯಾರ್ಥಿಗಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಹುರಿದುಂಬಿಸಿದರು.

ಕಾರ್ಯಕ್ರಮದಲ್ಲಿ ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈಧ್ಯಾಧಿಕಾರಿ ಡಾ.ಯುವರಾಜ್, ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಬಬನ್ ಪಿ.ದತ್ತವಾಡೆ ಪ್ರಾಂಶುಪಾಲ ಡಾ.ಎಸ್.ದಿನೇಶ್ ಮಾತನಾಡಿದರು.

ಇದೇ ಸಂದರ್ಭದಲ್ಲಿ ಸ್ನೇಹಲೋಕ ಹಿರಿಯ ವಿದ್ಯಾರ್ಥಿಗಳ ಬಳಗದವರು 30 ವರ್ಷಗಳಿಂದ ಸೇವೆ ಸಲ್ಲಿಸಿದ ಉಪನ್ಯಾಸಕರುಗಳನ್ನು ಸ್ಮರಣಿಕೆಯೊಂದಿಗೆ ಗೌರವಿಸಿ ಸಂಭ್ರಮ ಪಟ್ಟರು. ಹಳೆಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷ ಮನುಗೌಡ ಪ್ರತಿವರ್ಷ ಒಬ್ಬ ವಿದ್ಯಾರ್ಥಿಗೆ ಆರ್ಥಿಕ ಸಹಾಯ ಒದಗಿಸುವುದಾಗಿ ತಿಳಿಸುತ್ತಾ ಪ್ರಸ್ತುತ ಪ್ರಥಮ ಪಿಯುಸಿಯ ದ್ರಾಕ್ಷಾಯಿಣಿಗೆ ಹತ್ತು ಸಾವಿರ ಧನ ಸಹಾಯ ನೀಡಿದರು.

ಹಿರಿಯ ಕಿರಿಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರ ನೆರವೇರಿತು.

ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿಯ ಅಧ್ಯಕ್ಷ ಅಫ್ತಾಬ್ ಪಾಷಾ, ಎಂ.ಸಿ.ವಿಜಯಕುಮಾರ, ಹರ್ಷಕುಮಾರ್. ಅಭಿಷೇಕಗೌಡ, ಪದ್ಮಶ್ರೀ, ವೀಣಾ, ವಾಣಿ, ದರ್ಶನ್, ಶ್ರವಣ್ ಹಾಗು ಪದಾಧಿಕಾರಿಗಳು ಹಾಗು ಉಪನ್ಯಾಸಕರುಗಳು ಇದ್ದರು.

Leave a Reply

Your email address will not be published. Required fields are marked *

× How can I help you?