ಮಂಡ್ಯ– ತಾಲೂಕು ಹೊಳಲು ಗ್ರಾಮದ ಶ್ರೀ ಆಂಜನೇಯ ಸರ್ಕಲ್ , ಶ್ರೀ ಹೆಚ್.ಎಂ.ನಾಯಕರ ಸರ್ಕಲ್ , ಹಾಗೂ ಶ್ರೀ ಸಿದ್ದಪ್ಪಾಜಿ ದೇವಸ್ಥಾನದಲ್ಲಿ ಶ್ರೀರಾಮ ಆಂಜನೇಯ ಭಕ್ತ ಸಮಿತಿಯ ವತಿಯಿಂದ ಈ ದಿನ ಶ್ರೀರಾಮ ನವಮಿಯ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಅಪ್ಪುವಿನ ಭಾವಚಿತ್ರಕ್ಕೂ ಸಹ ಪೂಜೆ ಮಾಡಿ, ಹಾಗೂ ಬರುವ ಭಕ್ತಾದಿಗಳಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಹಾಗೂ ಸಿಹಿತಿಂಡಿಯನ್ನು ವಿತರಿಸಲಾಯಿತು.
ಪಾನಕವನ್ನು ವಿತರಿಸಿ ಮಾತನಾಡಿದ ಶ್ರೀರಾಮ ಸೇನೆ ಸಮಿತಿಯ ಸದಸ್ಯ ಜಯರಾಮ್ ಮಾತನಾಡುತ್ತಾ ಇಡೀ ದೇಶದಲ್ಲಿ ಈ ದಿನ ಶ್ರೀ ರಾಮದೇವರ ಪೂಜೆಯನ್ನ ಮಾಡುತ್ತಿದ್ದಾರೆ. ಆದ್ದರಿಂದ ಈ ದಿನ ನಾವು ಈ ಗ್ರಾಮದಲ್ಲಿ ಶ್ರೀರಾಮನವಮಿಯ ಪ್ರಯುಕ್ತ ದೇವರಿಗೆ ವಿಶೇಷ ಪೂಜೆ ಮಾಡಿ ಪಾನಕ ಮಜ್ಜಿಗೆ ವಿತರಿಸಿ ನಂತರ ಗ್ರಾಮದವರಿಗೂ ಹಾಗೂ ದೇಶಕ್ಕೆ ಒಳ್ಳೆಯದಾಗಲಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕಾರ್ತಿಕ್, ನವೀನ್, ಸಂಜು, ಭರತ್, ಗುರು , ಸಾಗರ್ , ಅನು, ಕೃಷ್ಣ ಬೇಕರಿ, ಯೋಗೇಶ್, ಬಸವಚಾರಿ, ಸಂಪತ್, ಲಕ್ಷ್ಮಣ್, ವಿಕಾಸ್, ಬೋರಯ್ಯ , ಶಂಕರ್ , ಎಂಪಿ, ಸಂತೋಷ್ ಹಾಗೂ ಹೊಳಲು ಗ್ರಾಮಸ್ಥರು, ಶ್ರೀರಾಮ ಸೇವಾ ಸಮಿತಿಯ ಸದಸ್ಯರುಗಳು ಹಾಜರಿದ್ದರು.
– ಕೆ.ಪಿ.ಕುಮಾರ್, ಹೊಳಲು