ಶೃಂಗೇರಿ/ಬಾಳೆಹೊನ್ನೂರು-ಬಾಳೆಹೊನ್ನೂರು 66/33/11 ಕೆ.ವಿ ವಿ.ವಿ ಕೇಂದ್ರ ಮತ್ತು 66/11 ಕೆ.ವಿ ವಿ.ವಿ ಕೇಂದ್ರದಲ್ಲಿ 2024-25ನೇ ಸಾಲಿನ ತೃತೀಯ ತ್ರೈಮಾಸಿಕ ನಿರ್ವಹಣೆಯನ್ನು ಹಮ್ಮಿಕೊಂಡಿರುವುದರಿಂದ 66/33/11 ಕೆ.ವಿ ವಿ.ವಿ ಕೇಂದ್ರ ಮತ್ತು 66/11 ಕೆ.ವಿ ಯಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ.
66/33/11 ಕೆ.ವಿ ವಿ.ವಿ ಕೇಂದ್ರದ ಫೀಡರ್‌ಗಳ ವ್ಯಾಪ್ತಿಗೆ ಬರುವ ಬಾಳೆಹೊನ್ನೂರು, ಕಳಸ, ಶೃಂಗೇರಿ, ಜಯಪುರ, ಕುಂಚೆಬೈಲು, ಬಸರಿಕಟ್ಟೆ, ಮಾಗುಂಡಿ,ಗಡಿಗೇಶ್ವರ, ಕಡಬಗೆರೆ, ಜೇನುಗದ್ದೆ, ಕಣತಿ ಮತ್ತು ಕಸ್ಕೆಮನೆ ಭಾಗಗಳಲ್ಲಿ ನವೆಂಬರ್ 29 ರಂದು ಬೆಳಿಗ್ಗೆ 10.00 ಗಂಟೆಯಿಂದ ಸಂಜೆ 05.00 ಗಂಟೆ ವರೆಗೆ ವಿದ್ಯುತ್ ಸರಬರಾಜು ನಿಲುಗಡೆಯಾಗಲಿದೆ ಎಂದು ಬಾಳೆಹೊನ್ನೂರು ಕೇಂದ್ರ ಸಹಾಯಕ ಅಭಿಯಂತರರು(ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.